Shree Mangaladevi Temple,
Mangalore, D.K .
ಶ್ರೀ ಮಂಗಳಾದೇವಿ ದೇವಸ್ಥಾನ,
ಮಂಗಳೂರು, ದ.ಕ||
Shree Mangaladevi, Mangaluru |
ದಕ್ಷಿಣ ಕನ್ನಡ ಜಿಲ್ಲೆಯು
ತುಳುನಾಡಿನ ಪ್ರಮುಖ ನಗರಗಳಲ್ಲಿ ಒಂದು, ಮಾತ್ರವಲ್ಲದೇ ಕರ್ನಾಟಕದ ಮಹಾನಗರದ ಪೈಕಿ ಒಂದು ಎಂಬ ಹೆಗ್ಗಳಿಕೆಗೆ
ಪಾತ್ರವಾಗಿದೆ. ಮಂಗಳಾದೇವಿಯಿಂದಲೆ ಈ ಊರು ಮಂಗಳೂರು ಎಂದಾಯಿತು. ಮಂಗಳೂರು ನಗರದದಲ್ಲಿ ತನ್ನದೇ ವಿಶೇಷತೆ
ಮತ್ತು ಕಾರಣೀಕತೆಯನ್ನು ಹೊಂದಿ, ತನ್ನ ಹೆಸರಿನಿಂದಲೇ ಊರನ್ನು ಪೊರೆಯುತ್ತಿರುವ ಶಕ್ತಿ ದೇವತೆ ಶ್ರೀ
ಮಂಗಳಾದೇವಿ(Shree Mangaladevi). ಆದಿಶಕ್ತಿ ಪಾರ್ವತಿಯು ದುಷ್ಟ ಸಂಹಾರಕ್ಕಾಗಿ ಹಲವಾರು ರೂಪ ಧಾರಣೆ ಮಾಡಿ, ಹಲವಾರು ನಾಮಗಳನ್ನು
ಪಡೆದು ಭಕ್ತರಿಂದ ಸರ್ವದಾ ಪೂಜಿಗೊಂಬ
ಮಾತೃ ಸ್ವರೂಪಿಯಾಗಿದ್ದಾಳೆ. ಆದಿಮಾಯೆಯ ಮೂರು ರೂಪವಾದ ದುರ್ಗಾ, ಲಕ್ಷ್ಮೀ, ಸರಸ್ವತೀ ಸ್ವರೂಪಗಳೇ
ಶ್ರೀ ದೇವಿಯ ಮೂರು ಗುಣಗಳಲ್ಲಿ ಪ್ರಕಟವಾಯಿತು. ಶಿವನೊಂದಿಗೆ ಶಕ್ತಿ ದೇವತೆಯಾಗಿ, ವಿಷ್ಣುವಿನೊಂದಿಗೆ
ಸಂಪತ್ತಿನ ದೇವಿಯಾಗಿ ಹಾಗೂ ಬ್ರಹ್ಮನೊಂದಿಗೆ ಜ್ಞಾನರೂಪಿಣಿಯಾಗಿ ತ್ರಿಮೂರ್ತಿಗಳಲ್ಲಿ ಸಮ್ಮಿಳಿತಗೊಂಡು
ಜಗತ್ತನ್ನು ಸಂರಕ್ಷಣೆ ಮಾಡುತ್ತಿದ್ದಾಳೆ.
Shree Devi Moola Bimba |
ಹೀಗೆ ಆದಿಶಕ್ತಿ
ಪಾರ್ವತಿಯು ಮಂಗಳಾದೇವಿಯಾಗಿ ಅವತಾರವೆತ್ತಲೂ ಕೂಡಾ ಒಂದು ಪೌರಾಣಿಕ ಹಿನ್ನಲೆ ಕಂಡುಬರುತ್ತದೆ. ಹಿಂದೆ
ಮಹಾವಿಷ್ಣುವಿನಿಂದ ಹತನಾದ ಹಿರಣ್ಯಾಕ್ಷನ ತರುವಾಯ ಅವನ ಮಗಳು 'ವಿಖಾಸಿನಿ' ಯಿಂದ ದೇವತೆಗಳ ಮೇಲೆ ಆಕ್ರಮಣವಾಗುತ್ತದೆ.
ತನ್ನ ತಂದೆಯನ್ನು ಕೊಂದು ಶ್ರೀ ಹರಿಯನ್ನು ಕೊಲ್ಲಲೇ
ಬೇಕೆಂದು ಪಣತೊಟ್ಟು, ದೇವೇಂದ್ರನ ಮೇಲೆ ಅಸುರಿಯಾದ ವಿಖಾಸಿನಿಯು ಆಕ್ರಮಣ ಮಾಡುತ್ತಾಳೆ. ಆದರೇ ದೇವೇಂದ್ರನ
ಪರ ಯಕ್ಷರಾಜನು ಹೋರಾಟ ಮಾಡಿ, ಅಸುರರ ಪಡೆಯನ್ನು ಹಿಮ್ಮೆಟ್ಟುವಂತೆ ಮಾಡುತ್ತಾನೆ. ಆದರೆ ಅಸುರರ ರಾಣಿಯಾದ
ವಿಖಾಸಿನಿಯು ಅಷ್ಟಕ್ಕೆ ನಿಲ್ಲದೇ ಉಗ್ರ ತಪಸ್ಸನ್ನು ಮಾಡಿ ಬ್ರಹ್ಮನನ್ನು ಪ್ರತ್ಯಕ್ಷೀಕರಿಸಿಕೊಂಡು,
ಶ್ರೀ ಬ್ರಹ್ಮದೇವನ ಎದುರಲ್ಲೇ ಅಗ್ನಿ ಕುಂಡವನ್ನು ಹಾರಲು ಮುಂದಾದಾಗ ಬ್ರಹ್ಮದೇವನು ತಡೆದನು. ಆಗ ವಿಖಾಸಿನಿಯು
ಬ್ರಹ್ಮದೇವ ನನಗೆ ಶ್ರೀ ಹರಿಯನ್ನು ಕೊಲ್ಲುವ ಮಗನನ್ನು ದಯಪಾಲಿಸು ಎಂದು ಬೇಡಿಕೊಂಡಳು, ಮಾತ್ರವಲ್ಲದೇ
ಆ ಮಗನು ಶಿವನ ಸಾಂಗತ್ಯದಿಂದ ಜನಿಸಿದವನಾಗಿರಬೇಕೆಂದು ಕೇಳಿಕೊಂಡಳು. ಆಗ ಬ್ರಹ್ಮದೇವನು ತ್ರಿಮೂರ್ತಿಗಳನ್ನು
ಯಾರು ಅಂತ್ಯಗೊಳಿಸಲು ಸಾಧ್ಯವಿಲ್ಲ. ಆದರೆ ಶಿವನಿಂದ ನಿನಗೆ ಅಪ್ರತಿಮ ಶೂರನಾದ ಮಗನು ಜನಿಸುತ್ತಾನೆ
ಎಂದು ವರವನ್ನು ನೀಡಿದನು. ಅದೇ ರೀತಿಯಲ್ಲಿ
ವರಪ್ರಮತ್ತಳಾದ ವಿಖಾಸಿನಿಯು ಮಾರುವೇಶದಿಂದ ಶಕ್ತಿರೂಪಿಣಿಯಾದ ದುರ್ಗೆ ಪಾರ್ವತಿಯ ರೂಪ ಧರಿಸಿ, ಕೈಲಾಸದಲ್ಲಿ
ಶಿವಲಿಂಗವನ್ನು ಸ್ಥಾಪಿಸಿ ಧ್ಯಾನಮಗ್ನನಾಗಿರಲು ಶಿವನ ಧ್ಯಾನಭಂಗವಾಗಿ ಶಿವನು ಅಸುರಿ ವಿಖಾಸಿನಿಯನ್ನು
ಶಿವೆ ಎಂದು ಭಾವಿಸಿ ಅವಳಲ್ಲಿ ಅನುರಕ್ತನಾದನು. ಇವೆಲ್ಲ ಬ್ರಹ್ಮನ ವರಪ್ರಭಾವವಾಗಿರುತ್ತದೆ. ಇದರಿಂದ
ಉಲ್ಲಸಿತಳಾದ ವಿಖಾಸಿನಿ ಶ್ರೀ ಹರಿಯ ಮರಣ ಇನ್ನೂ ದೂರವಿಲ್ಲ ಎಂದು ಭಿಗುತ್ತಾ, ತನ್ನ ಗರ್ಭವನ್ನು ಪೋಷಿಸಿಕೊಳ್ಳುವ
ಸಲುವಾಗಿ ಅಸುರರ ಶೋಣಿತಪುರಕ್ಕೆ ಬಂದು ನೆಲೆಸಿದಳು. ತನ್ನ ಗರ್ಭಕ್ಕೆ ದೇವತೆಗಳಿಂದ ತೊಂದರೆ ಬರಬಹುದೆಂದು
ತಿಳಿದು ಗರ್ಭವನ್ನು ಭೂಮಿಯನ್ನು ಸೀಳಿ, ಅಲ್ಲಿ ಪೋಷಿಸಿದಳು. ನವಮಾಸ ಕಳೆದು ಭೂ-ಗರ್ಭದಿಂದ ಹೊರಬಂದ
ವಿಖಾಸಿನಿಯ ದೈತ್ಯ ಪುತ್ರ. ಹೀಗೆ ಹಸಿವೆಯಿಂದ ಮೇಲೆ ಬಂದ ತನ್ನ ಪುತ್ರನಿಗೆ ಹಸಿವನ್ನು ನೀಗಿಸಿ, ಎಲ್ಲಾ
ವಿಚಾರವನ್ನು ತಿಳಿಸಿದಳು. ಅವನಿಗೆ 'ಅಂಡಾಸುರ' ಎಂದು ನಾಮಕರಣ ಮಾಡಿದಳು.
ಇಲ್ಲಿ ಅಂಡಾಸುರನ
ಜನನದ ವಿಚಾರವನ್ನು ತಿಳಿಯುತ್ತಲೇ, ದೇವೇಂದ್ರನ ಮೇಲೆರಗಿ ಅವನನ್ನು ಸೋಲಿಸಿ, ಶ್ರೀ ಹರಿಯನ್ನು ಕಾಣಲು
ತೆರಳುತ್ತಾನೆ. ಈ ವೇಳೆಗೆ ಓಡಿಹೋದ ದೇವೇಂದ್ರ ಶ್ರೀ ಹರಿಯನ್ನು ಸಂಧಿಸಿ ವಿಚಾರವನ್ನು ತಿಳಿಸುತ್ತಾನೆ.
ಇಲ್ಲಿಂದ ತ್ರೀಮೂರ್ತಿಗಳೊಂದಾಗಿ ಆದಿಶಕ್ತಿಯನ್ನು ಪ್ರಾರ್ತನೆ ಮಾಡುತ್ತಾರೆ. ಮಂಗಳರೂಪಿಣಿಯಾದ ಆದಿಪರಾಶಕ್ತಿಯು
ಪ್ರತ್ಯಕ್ಷಳಾಗಿ ತ್ರಿಮೂರ್ತಿಗಳನ್ನು ಸಂತೈಸಿ, ದೇವಿಯು ಶಿವಶಕ್ತಿ ಸ್ವರೂಪಿಣಿಯಾಗಿ ಸಿಂಹವೇರಿ ಅಂಡಾಸುರನ್ನು
ಮರ್ಧನಗೈದು 'ಶ್ರೀ ಮಂಗಳಾದೇವಿ' ಎಂಬ ನಾಮವನ್ನು ಧಾರಣೆ ಮಾಡುವಳು.
ಹೀಗೆ ಪರಶುರಾಮರು
ಸಮುದ್ರರಾಜನಿಂದ ಕರಾವಳಿಯ ಭೂಮಿಯನ್ನು ಪಡೆದಿರಲು, ಒಮ್ಮೆ ಯೋಗ್ಯ ಸ್ಥಳದಲ್ಲಿ ಭಾರ್ಗವರಾಮನು ಮಂಗಳಾಂಬಿಕೆಯ
ಕುರಿತು ತಪಸ್ಸನ್ನು ಆಚರಿಸಲು ಶ್ರೀ ಆದಿಶಕ್ತಿ ಶಿವೇ ಮಂಗಳಾದೇವಿಯು ಪ್ರತ್ಯಕ್ಷಳಾಗುವಳು. ಹಿಂದೆ
ನಡೆದ ವಿಚಾರವನ್ನು ತಿಳಿಸಿ, ಅಲ್ಲಿಯೇ ಮೂಡಿರುವ ದೇವಿಯ ಲಿಂಗವನ್ನು ಪ್ರತಿಷ್ಠಾಪಿಸಿ, ಮಂದಿರ ನಿರ್ಮಾಣ
ಮಾಡಲು ಸೂಚಿಸಿ, ಅದೃಶ್ಯಳಾಗುತ್ತಾಳೆ. ಅದರಂತೆಯೇ ಶಿವಶಕ್ತಿ ಸಮೇತವಾದ ಆ ಲಿಂಗವನ್ನು ಅಭೀಷೇಕದಿಂದ
ಶುದ್ಧಿಕರಿಸಿ, ಅಲ್ಲಿ ಗುಡಿಯನ್ನು ನಿರ್ಮಾಣಮಾಡಿ ಉತ್ತಮ ಬ್ರಾಹ್ಮಣರಿಂದ ಪೂಜೆಯನ್ನು ನಡೆಸುವಂತೆ
ಮಾಡುತ್ತಾರೆ. ಹೀಗೆ ಭಾರ್ಗವರಾಮರಿಂದ ನಿರ್ಮಾಣವಾದ ಶ್ರೀ ಜಗನ್ಮಾತೆ ಮಂಗಳಾದೇವಿಯು ಪ್ರಸನ್ನಚಿತ್ತಳಾಗಿ
ಮಂಗಳಪುರದಲ್ಲಿ ನೆಲೆಸುತ್ತಾಳೆ.
ಹೀಗೆ ಕಾಲಾಂತರದಲ್ಲಿ
ದೇವಿಯ ಬಿಂಬವು ಕಾಲಾಂತಾರದಲ್ಲಿ ಮುಳುಗಿ, ಅದರ ಮೇಲೆ ದಿಬ್ಬವು ಬೆಳೆಯುತ್ತದೆ. ಸರಿಸುಮಾರು 10ನೇ
ಶತಮಾನದಲ್ಲಿ ತುಳುನಾಡನ್ನು ಆಳ್ವಿಕೆ ಮಾಡುತ್ತಿದ್ದ ಕುಂದವರ್ಮನ ಕಾಲಾವಧಿಯಲ್ಲಿ ನೇಪಾಳದಿಂದ ಮಚ್ಚೇಂದ್ರನಾಥ
ಮತ್ತು ಗೊರಕನಾಥರೆಂಬ ಇಬ್ಬರು ಯೋಗಿಗಳು ಆಗಮಿಸುತ್ತಾರೆ. ಇವರ ಬರುವಿಕೆಯನ್ನು ತಿಳಿದ ಕುಂದವರ್ಮ ಅವರನ್ನು
ಆದರದಿಂದ ಸತ್ಕರಿಸಿ, ಸಂಪ್ರೀತಗೊಳಿಸುತ್ತಾನೆ. ತದನಂತರ ಕುಂದವರ್ಮನಿಗೆ ಯೋಗಿಗಳು ಹಿಂದೆ ನಡೆದ ಘಟನೆಗಳನ್ನೆಲ್ಲ ವಿವರಿಸಿ, ಭಾರ್ಗವರಾಮರಿಂದ
ನಿರ್ಮಾಣವಾದ ದೇವಿಯ ಸಾನ್ನಿಧ್ಯವಿಲ್ಲಿ ಇದ್ದು, ದೇವಿಯು ಶಿವಶಕ್ತಿ ಸಮೇತಳಾಗಿ ಲಿಂಗದಲ್ಲಿ ನೆಲೆಸಿದ್ದಾಳೆ,
ಮಾತ್ರವಲ್ಲದೆ ಲಿಂಗದ ಜೊತೆಯಲ್ಲಿ ಅವಳಿಗೆ ಸೇರಿದ ಧಾರಾಪಾತ್ರೆಯೊಂದು ಇದೆ ಎಂದು ತಿಳಿಸುತ್ತಾರೆ.
ಅಂತೆಯೇ ಅಲ್ಲಿನ ದಿಬ್ಬದಲ್ಲಿ ನೋಡಿದಾಗ ಅಲ್ಲಿ ಲಿಂಗ ಮತ್ತು ಧಾರಾಪಾತ್ರೆ ಕಂಡುಬರುತ್ತದೆ. ನಂತರ
ದೇವಿಗೆ ಭವ್ಯವಾದ ಮಂದಿರವನ್ನು ಕುಂದವರ್ಮನು ನಿರ್ಮಾಣ ಮಾಡಿ ದೇವಿಯ ಮೂಲಬಿಂಬವನ್ನು ಪುನರ್ ಪ್ರತಿಷ್ಠೆ
ಮಾಡಿಸುತ್ತಾನೆ.
ಹೀಗೆ ಕುಂದವರ್ಮನಿಂದ
ಪುನರ್ ನಿರ್ಮಾಣಗೊಂಡು ಶ್ರೀ ಮಂಗಳಾದೇವಿಯ ದೇವಾಲಯವು ಉನ್ನತ ಸ್ಥಿತಿಯತ್ತ ತಲುಪುವುದರೊಂದಿಗೆ ದೇವಿಯ
ಕಾರಣಿಕ ಹಬ್ಬುತ್ತದೆ. ಹೀಗೆ ಯೋಗಿಪಂಥೀಯರಿಂದ ಮರಳಿ ಶ್ರೀ ಮಂಗಳಾದೇವಿಯ ಸ್ಥಾಪನೆಯಾದ್ದರಿಂದ ಇಂದಿಗೂ
ಉತ್ಸವದ ಸಮಯದಲ್ಲಿ ಕದ್ರಿಯಿಂದ ನಾಥ ಪಂಥದವರು ಇಲ್ಲಿಗೆ ಬಂದು ದೇವಿಗೆ ಪೀತಾಂಬರವನ್ನು ಅರ್ಪಣೆ ಮಾಡುತ್ತಾರೆ.
ಹೀಗೆ ದೇವಿಯ ಪರಿವಾರದಲ್ಲಿ
ಶ್ರೀ ವಿಘ್ನೇಶ್ವರ ದೇವರು ಮತ್ತು ರಕ್ತೇಶ್ವರಿ, ನಂದಿಕೋಣ, ಗುಳಿಗ ದೈವಗಳು ಇವೆ. ಈ ದೈವಗಳಿಗೆ ಪ್ರತೀ
ವರ್ಷ ನೇಮೋತ್ಸವಗಳು ನಡೆಯುತ್ತದೆ. ಹೀಗೆ ಇಲ್ಲಿ ಪ್ರತೀ ವರ್ಷ ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತದೆ,
ಮಾತ್ರವಲ್ಲದೇ ಜಾತ್ರೋತ್ಸವ ಬಹು ವಿಜೃಂಭಣೆಯಿಂದ ನಡೆಯುತ್ತದೆ. ಸರ್ವರಿಗೂ ಮಂಗಳವನ್ನು ನೀಡುವ ದೇವಿಯ
ಸನ್ನಿದಿಯಲ್ಲಿ ಮಂಗಳವಾರ ವೃತ ಹಿಡಿದು, ಸ್ವಯಂವರ ಪಾರ್ವತಿ ಪೂಜೆಯನ್ನು ಮಾಡಿದರೆ ನೆನೆದ ವರ ಸಿಗುತ್ತಾನೆ
ಎಂಬುದು ನಂಬಿಕೆ. ಸರ್ವ ಮಂಗಳೆಯಾದ ಶ್ರೀ ಮಂಗಳಾದೇವಿಯನ್ನು ಭಜಿಸಿ, ಪಾವನರಾಗಿ. ಒಮ್ಮೆ ಮಂಗಳೆಯನ್ನು
ಕಂಡು, ಮಂಗಳಕರ ಜೀವನವನ್ನು ಹೊಂದಿರಿ.
ವಿಳಾಸ :-
ಶ್ರೀ ಮಂಗಳಾದೇವಿ
ದೇವಸ್ಥಾನ,
ಮಂಗಳೂರು, ದಕ್ಷಿಣ ಕನ್ನಡ ||
ಮಂಗಳೂರು, ದಕ್ಷಿಣ ಕನ್ನಡ ||
ದಾರಿಯ ವಿವರ : ಮಂಗಳೂರು
ನಗರದಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿ ಶ್ರೀ ದೇವಿಯ ಮಂದಿರವು ಭವ್ಯವಾಗಿ ನಿರ್ಮಾಣಗೊಂಡಿದೆ. ಸ್ಟ್ಏಟ್
ಬ್ಯಾಂಕ್ ಬಸ್ ನಿಲ್ದಾಣದಿಂದ ಸಾಕಷ್ಟು ಬಸ್ಸುಗಳ ವ್ಯವಸ್ಥೆಗಳು ಇವೆ.
Appena Story odudu baari kushi aand, Article barithina yedde aathund....
ReplyDeleteRamoorthy Adiga, Surathkal
Good collection
ReplyDeleteAnnappa Banagalore