ಶ್ರೀ ಬ್ರಾಹ್ಮಣ ದೈವ ಭೂತರಾಜರ ಮಹಿಮೆ.
Shree Brahmin Daiva Bhootharajara Mahime
ಶ್ರೀ ಭೂತರಾಜರು Sri Bhootharajaru |
ದಕ್ಷಿಣ
ಕನ್ನಡ ಜಿಲ್ಲೆಯ ನಾರಳ ಗ್ರಾಮದಲ್ಲಿ ಜನಿಸಿದ ನಾರಾಯಣಾಚಾರ್ಯ ಎಂಬುವರು ಶ್ರೀವಾದಿರಾಜರ ಜೊತೆಗೆ ಆವರ
ಮಠದಲ್ಲಿ ಇದ್ದರು. ಒಮ್ಮೆ ಪ್ರಸಂಗವಶಾತ್ ಆಚಾರದ ವಿಷಯದಲ್ಲಿ ಗುರುಗಳನ್ನು ಹಿಂಬಾಲಿಸಿ ಪರೀಕ್ಷಿಸಲು
ಹೋರಟ ನಾರಾಯನಾಚಾರ್ಯರ ಜಿಜ್ಞಾಸೆ , ಗುರುಗಳಾದ ಶ್ರೀ ವಾದಿರಾಜರಿಗೆ ಗೊತ್ತಾಯಿತು. ಆ ಪ್ರಸಂಗ ಯಾವುದು
ಅಂದರೆ. ಒಮ್ಮೆ ಸಾಧನ ದ್ವಾದಸಿ ದಿವಸ ವ್ಯಾಸರಾಜರು ಮತ್ತು ಇತರರು ವಾದಿರಾಜರಿಗಾಗಿ ಕಾದಿದ್ದರೆ. ಅಂದು
ರಾಜರು ಧ್ಯಾನಾಸಕ್ತರಾಗಿ ಇರುವದರಿಂದ ಸ್ವಲ್ಪ ತಡವಾಯಿತು. ಅವರು ಮರುಕ್ಷಣದಲ್ಲಿ ಸ್ನಾನಮಾಡಿ ಪೂಜೆಯನ್ನು
ಮಾಡಲು ಕಾಲಾವಕಾಶ ಇಲ್ಲದಿದ್ದರಿಂದ ಪಾರಣಿ ಮುಗಿಸಿದರು. ಆದಮೇಲೆ, ಅವರು ಕಾಡಿನಲ್ಲಿ ದೂರ ಯಾರು ಇಲ್ಲದ
ಪ್ರದೇಶದಲ್ಲಿ ಹೋಗಿ ತಮ್ಮ ಯೋಗಶಕ್ತಿಯಿನ್ದ ಎಲ್ಲ ಆಹಾರವನ್ನು ಹೊರಗೆ ತೆಗೆದು, ಬಾಳೆದೆಲೆಯ ಮೇಲೆ
ಇಟ್ಟರು. ಆದಮೇಲೆ ಸ್ನಾನ ದೇವರಪೂಜೆ ನದಿಯಲ್ಲಿ ಆಚರಿಸಿದರು. ಇದನ್ನು ದೂರದಿಂದ ನಾರಾಯಣಾಚಾರ್ಯರು
ಗಿಡದ ಹಿಂದಿನಿಂದ ನೋಡುತ್ತಿದ್ದರು. ಪರೀಕ್ಷಾರ್ಥವಾಗಿ ಬಂದ ನಾರಾಯಣಾಚರ್ಯರಿಗೆ ಬ್ರಹ್ಮರಾಕ್ಷಸ ಆಗಬೇಕೆಂದು
ಶಾಪಪ್ರದಾನ ಮಾಡಿದರು. ತಮ್ಮ ಅಕೃತ್ಯಕ್ಕಾಗಿ ಪರಿತಪಿಸಿ ಪ್ರಾರ್ಥಿಸಿದಾಗ ಯಾರು "ಆ ಕಾ ಮ ವೈ
ಕೋ ನ ಸ್ನಾಥಹ" ಎನ್ನುವ ಪ್ರಶ್ನಕ್ಕೆ ಉತ್ತರ ಹೇಳುತ್ತಾರೋ ಅವರೇ ಶಾಪವಿಮೋಚನ ಮಾಡುತ್ತಾರೆಂದು
ಹೇಳಿದರು.
ಕೆಲ
ಸಮಯ ಬ್ರಹ್ಮರಾಕ್ಷಸ ಜನ್ಮದಲ್ಲಿದ್ದ ನಾರಾಯಣಾಚಾರ್ಯರಿಗೆ, ಒಂದು ದಿನ ತಾನು ಇದ್ದ ಅರಣ್ಯದಲ್ಲಿಯೇ
ರಾಜರು ಹಾದು ಹೋಗುತ್ತಿದ್ದರು. ಆಗ ಅವರನ್ನು ತಡೆದು ಯಥಾ ಪ್ರಕಾರ ಆ ಪ್ರಶ್ನೆಯನ್ನು ಕೇಳಿತು. ರಾಜರಿಗೆ
ಈ ರಾಕ್ಷಸ ವಿಷಯ ಸ್ಮರಣೆಗೆ ಬಂತು. ಆಗ ರಾಜರು ಮುಗುಳ್ನಗೆಯಿಂದ
ಆಶ್ವಿನೇ (ಆಷಾಡ) ಕಾರ್ತೀಕೇ ಮಾಘೇ
ವೈಶಾಖೇ ಸ್ನಾನತತ್ಪರಃ |
ಬ್ರಹ್ಮರಾಕ್ಷಸಪೈಶಾಚಯೋನೆರ್ಮುಕ್ತೋ
ಭವೇದ್ಧ್ರುವಮ್ ||
'ಯಾರು ಆಷಾಡ ಕಾರ್ತೀಕ ಮಾಘ ಮತ್ತು ವೈಶಾಖ ಮಾಸಗಳಲ್ಲಿ ಉದಯಕಾಲದಲ್ಲಿ
ಸ್ನಾನ ಮಾಡುತ್ತಾನೆಯೋ ಅವನಿಗೆ ಬ್ರಹ್ಮರಾಕ್ಷಸ ಜನ್ಮ ಬರುವುದಿಲ್ಲ' ಎಂದು ಹೇಳಿದ ತಕ್ಷಣ ಗುರುಗಳಿಂದಲೇ
ಶಾಪವಿಮೋಚನ ಆಯಿತು. ಅವರು ಶಾಪ ವಿಮೋಚನ ಆದೊಡನೆ ದಿವ್ಯ ರೂಪ ಧರಿಸಿ ಮುಂದೆ ನಿಂತರು. ಆವರ ಸ್ವರೂಪದ
ಬಗ್ಗೆ ಶ್ರೀ ವಾದಿರಾಜರಿಗೆ ಪೂರ್ಣ ಅರಿವಿತ್ತು. ಶ್ರೀವಾದಿರಾಜರು ದಿವ್ಯರೂಪದಲ್ಲಿದ್ದ ನಾರಾಯಣಾಚರ್ಯರಿಗೆ
ಹೀಗೆ ನುಡಿದರು. ಮುಂದೆ ಶ್ರೀರಾಜರು ಬೃಂದಾವನ ಪ್ರವೇಶ ಮಾಡುವವರೆಗೂ ಅದೃಶ್ಯರಾಗಿ ಸೇವೆ ಮಾಡಿದರು.
ತದನಂತರ ಕ್ಷೇತ್ರ ಪಾಲಕರಾಗಿ ಶ್ರೀಸೋದಾಕ್ಷೆತ್ರದಲ್ಲಿ ಇದ್ದು, ಇಂದಿಗೂ ಅದೃಶ್ಯರಾಗಿ ಗುರುಗಳ ನಿರಂತರ
ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂಬ ನಂಬಿಕೆ. ಬಂದ ಭಕ್ತರ ಭೂತಪ್ರೇತಗಳ ಭಾಧೆಯನ್ನು ನಿವಾರಿಸುತ್ತ
ವಿರಾಜಮಾನರಾಗಿದ್ದಾರೆ.
-: ಬ್ರಾಹ್ಮಣ ಭೂತರಾಜರಿಗೆ ಪರವರಿಂದ :-
Shree Bhootharajaru |
ದಕ್ಷಿಣ ಕನ್ನಡ
ಜಿಲ್ಲೆಯ ಕಡೇಶಿವಾಲಯದ ಶ್ರೀ ಚಿಂತಾಮಣಿ ನರಸಿಂಹ ದೇವಾಲಯಕ್ಕೆ ವಾದಿರಾಜರು ಆಗಮಿಸುತ್ತಿದ್ದರು ಎಂಬುದು
ಪ್ರತೀತಿ. ಅಲ್ಲಿನ ಗರ್ಭಗುಡಿಯ ಮಗ್ಗುಲಿಗೆ ವಾದಿರಾಜರ ಶಿಷ್ಯ ಭೂತರಾಜರ ಗುಡಿಯಿದೆ. ಈ ನಾರಾಯಣ ಆಚಾರ್ಯರಿಂದ
ವಾದಿರಾಜರು ಅನೇಕ ಲೋಕಹಿತ ಕೈಂಕರ್ಯಗಳನ್ನು ನಡೆಸುತ್ತಿದ್ದರೆನ್ನುವುದು ಅಂಬೋಣ. ಕಡೇಶಿವಾಲಯದಲ್ಲಿ
ಭೂತರಾಜರ ಸಂಕೇತವಾಗಿ ಹಿತ್ತಾಳೆಯ ಮುಖವಾಡಕ್ಕೆ ಆರಾಧನೆ ಬ್ರಾಹ್ಮಣ ಅರ್ಚಕರಿಂದ ನಿತ್ಯವೂ ನಡೆಯುತ್ತಿದೆ.
(ಇತ್ತೀಚೆಗೆ ಭಕ್ತರೊಬ್ಬರು ಬೃಹತ್ ಗಾತ್ರದ ಬೆಳ್ಳಿಯ ಮುಖವಾಡವನ್ನು ನೀಡಿದ್ದು ಹಳೆಯದು ಈ ಮುಳವಾಡದೊಳಗೆ
ಅಡಕಗೊಂಡಿದೆ) ವರ್ಷಕ್ಕೊಮ್ಮೆ ನಿಗದಿತ ರಾತ್ರಿ ಆ ಮುಖವಾಡವನ್ನು ದೇವಾಲಯದ ಹೊರ ಪೌಳಿಯಲ್ಲಿರಿಸಿ ಬ್ರಾಹ್ಮಣೇತರ
ಪಾತ್ರಿಯಿಂದ ಪೂಜೆ ನಡೆಯುತ್ತದೆ. ಆ ಬಳಿಕ ಪರವ ಸಮುದಾಯದ ಭೂತ ಮಾಧ್ಯಮದ ಬೃಹತ್ ಗಾತ್ರದ ಅಣಿಯೇರಿಸಿಕೊಂಡು
(ಅಡಿಕೆ ಹಾಳೆಯಿಂದ ಮಾಡಿದ) ತಲೆಯ ಮೇಲೆ ಭೂತರಾಜರ ಬೆಳ್ಳಿಯ ಮುಖವಾಡ ಇರಿಸಿಕೊಂಡು ಸುಮಾರು ಮೂರು ಗಂಟೆಗಳ
ಕಾಲ ಕೋಲದ ರೂಪದಲ್ಲಿ ನೃತ್ಯ ಸೇವೆ ನಡೆಸುತ್ತಾರೆ. ತನ್ನಲ್ಲಿ ಭೂತರಾಜರನ್ನು ಆವಾಹಿಸಿಕೊಂಡ ಪರವ ತುಳುವಿನಲ್ಲಿ
ತಾನು ಬ್ರಾಹ್ಮಣನೆಂದೂ, ನಾರಳ ಮಠದಿಂದ ಬ್ರಾಹ್ಮಣ(ವಾದಿರಾಜ ಇರಬೇಕು)ನೊಬ್ಬನ ಬೆನ್ನ ಹಿಂದೆ ಇಲ್ಲಿಗೆ
ಬಂದಿರುವುದಾಗಿಯೂ ತುಳುವಿನಲ್ಲಿ ಪಾಡ್ದನ ಛಾಯೆಯಲ್ಲಿ ಸುದೀರ್ಘ ನುಡಿ ಕೊಡುತ್ತಾನೆ. ಕೊನೆಯಲ್ಲಿ ಅಣಿಯ
ಮೇಲಿನ ಮುಖವಾಡವನ್ನು ತೆಗೆದು ಬ್ರಾಹ್ಮಣರ ಕೈಗೆ ನೀಡಲಾಗುತ್ತದೆ. ಅದು ಮತ್ತೆ ಗುಡಿಯೊಳಗಿನ ಮೂಲಸ್ಥಾನ
ಸೇರುತ್ತಾದೆ. ಈ ರೀತಿಯಾಗಿ ಅತೀ ವಿರಳವಾಗಿ ಬ್ರಾಹ್ಮಣರಿಂದಲೇ ಆರಾಧನೆಯಾಗುವ ಶ್ರೀ ಭೂತರಾಜರ ಚರಿತೆಯನ್ನು
ಓದಿದ ನಿಮಗೆ ಶ್ರೀ ಭೂರತಾಜರು ಅನುಗ್ರಹಿಸಲಿ.