Sri Veereshwara
Swamy Temple,
Padhemata ,Kenjooru
ಶ್ರೀ ವಿರೇಶ್ವರ ಸ್ವಾಮಿ ದೇವಸ್ಥಾನ, ಪಾದೆಮಠ , ಕೆಂಜೂರು.
![]() |
Sri Veereshwara Swamy, Padhemutt |
ಪರಶಿವನ ಮಾನಸ ಪುತ್ರನಾದ ಶ್ರೀ ವೀರಭದ್ರೇಶ್ವರನು ಇಲ್ಲಿನ ಪಾದೇಮಠ
ಕ್ಷೇತ್ರದಲ್ಲಿ “ಶ್ರೀ
ವೀರೇಶ್ವರ ಸ್ವಾಮಿ”(Sri Veereshwara) ಯಾಗಿ ನೆಲೆಸಿ ನಿಂದ ಮಹಾದೇವ ಕುವರನಾಗಿದ್ದಾನೆ.
ಈತನ ಮಹಿಮೆಯನ್ನು ಬಣ್ಣಿಪುವುದೆಂತು, ಪಾಡುವುದೆಂತು. ಈತನ ಮಹಿಮೆಯನ್ನು ಪಾಡಿ-ಪೊಗಳಲು ನಮಗೆ ಜನುಮಗಳೇ
ಸಾಲದು.
ಶ್ರೀ ಕ್ಷೇತ್ರ ಪಾದೇಮಠವು ಕೊಕ್ಕರ್ಣೇಯಿಂದ
ಸರಿಸುಮಾರು 5 ರಿಂದ 6 ಕಿ.ಮೀ ಅಂತರದಲ್ಲಿದೆ. ಕೊಕ್ಕರ್ಣೆ ಮೂಲಕ ನಾವು ಹೆಬ್ರಿಗೆ ಸಾಗುವ ಮಾರ್ಗದಲ್ಲಿ
ಮುಂದುವರದಂತೆ ಕೆಂಜೂರು ಎಂಬ ಗ್ರಾಮದಲ್ಲಿ ಶ್ರೀ ಕ್ಷೇತ್ರ ಪಾದೇಮಠ(Padhemutt) ವು ವಿರಾಜಮಾನವಾಗಿದೆ.
ಇಲ್ಲಿಗೆ ಶ್ರೀ ವಿರೇಶ್ವರ ಸ್ವಾಮಿಯು ಬಂದು ನೆಲೆಸಿದ ಕಾರಣದಿಂದ ‘ಪಾದೆಮಠ’ ಎಂಬ ಹೆಸರು ಬಂದಿದೆ.
ದಂತ ಕಥೆ : ಹಿಂದೆ ಪರಮೇಶ್ವರನು ಲೋಕಕಲ್ಯಾಣಾರ್ಥವಾಗಿ ಭೂಲೋಕದಲ್ಲಿ ನೆಲೆಸಲೋಸುಗ ಕೈಲಾಸದಿಂದ
ತಾನು ಭುವಿಗಿಳಿದು ಬಂದನು. ಹೀಗೆ ಮಹಾದೇವನು ಭೂಮಿಗಿಳಿದು ಬರಲು ಒಂದು ರಾಕ್ಷಸನು ಕಾರಣೀಭೂತನಾಗಿರುತ್ತಾನೆ.
ಆ ರಾಕ್ಷಸನು ಕ್ರೂರಿಯಾಗಿದ್ರೂ ಕೂಡಾ ಮಹಾದೇವನ ಆರಾಧಕನಾಗಿರುತ್ತಾನೆ.
![]() |
ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು |
ಒಮ್ಮೆ
ಕ್ರೂರ ರಾಕ್ಷಾಸನು ಪರಮೇಶನ ಮೂರು ಜ್ಯೋತಿರ್ಲಿಂಗಗಳನ್ನು ಹೊತ್ತು ತರುವಾಗ ಮೊದಲೆರಡು ಲಿಂಗಗಳು ಭೂ
ಸ್ಪರ್ಶವಾಗಿ ಅವೆರಡು ಪುಣ್ಯ ಕ್ಷೇತ್ರಗಳಾದವು. ಹಾಗೇ ಮುಂದುವರೆದು ಒಂದು ಲಿಂಗ ಭೂಮಿಗೆ ಸ್ಪರ್ಶವಾದ
ಸ್ಥಳವೆ “ಸೂರಲು”.
ಇಲ್ಲಿ ಮಹಾಲಿಂಗೇಶ್ವರನಾಗಿ ನೆಲೆಸಿ ಇರುವ ಮಹಾದೇವನೊಂದಿಗೆ ಕೈಲಾಸದ ಗಣಗಳೂ ಕೂಡಾ ಬಂದವು. ಅಂತೆಯೇ
ಮಹಾದೇವನು ಭೂಲೋಕಕ್ಕೆ ಬರುವಾಗ ಮೊದಲಾಗಿ ಲೋಕದೊಡತಿ ‘ಮಹಾದೇವಿಯು’ ಕೂಡಾ ಸ್ವಾಮಿಯೊಂದಿಗೆ ನಾನು ನಿಮ್ಮೊಂದಿಗೆ
ಬರುತ್ತೇನೆ ಎಂದು ಹೇಳುತ್ತಾಳೆ. ಆಗ ತಾಯಿಯು ತೆರಳುತ್ತಾಳೆಂಬುದನ್ನು ತಿಳಿದು ಪಾರ್ವತಿಯ ಕುವರ ವಿನಾಯಕನು
ಕೂಡಾ ನಾನು ನಿಮ್ಮೊಂದೊಗೆ ಬರುವೆನು ಎಂದು ಹೇಳುತ್ತಾನೆ. ಅಂತೆ ಅನ್ನ ಮಡದಿ ಮಕ್ಕಳನ್ನು ಕರೆದುಕೊಂಡು
ತೆರಳುವ ವೇಳೆಯಲ್ಲಿ ಈಶನ ಮಾನಸ ಪುತ್ರ “ಶ್ರೀ ವೀರಭದ್ರನು” ಕೂಡಾ ನಾನು ಬರುವೆನು ತಂದೆ ಎಂದು ಹೇಳುತ್ತಾನೆ.
ಹೀಗೆ
ಮಹಾದೇವನ ಅಣತಿಯಂತೆ ವೀರಭದ್ರನು ಕೂಡಾ ಭೂಮಿಗಿಳಿದು ಬರುತ್ತಾನೆ. ಈ ರೀತಿಯಲ್ಲಿ ತಾನು ಭೂಮಿಗಿಳಿದು
ಬರುವಾಗ ಮೊದಲು
ತನ್ನ ಪಾದವನ್ನು ಊರಿದ(ಇರಿಸಿದ) ಸ್ಥಳವೇ ಇಂದಿನ ‘ಪಾದೇಮಠ’ ಎಂದಾಯ್ತು ಎಂಬುದಾಗಿ ತಿಳಿಯುತ್ತದೆ.
ಆದರೆ ಈ ಬಗ್ಗೆ ಕೂಲಂಕೂಶವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಸ್ಥಳಕ್ಕೆ ಸಂಬಂಧಪಟ್ಟ ಉಲ್ಲೇಖಗಳ
ಬಗ್ಗೆ ಪೂರ್ಣ ಮಾಹಿತಿ ನಮಗೆ ದೊರಕಿರುವುದಿಲ್ಲ. ಮುಂದೆ ಶ್ರೀ ವೀರಭದ್ರನು ಇಲ್ಲಿ ಶ್ರೀ ವಿರೇಶ್ವರ
ಸ್ವಾಮಿ ಎಂಬ ನಾಮದಿಂದ ತನ್ನ ಪರುವಾರವನ್ನು ಕೂಡೊಕೊಂಡು ಇಲ್ಲಿ ನೆಲೆಯಾದನು.


ಇಲ್ಲಿ ಪ್ರತಿ ವರ್ಷ ಮೇ 15-16 ರಂದು (ವೃಷಭ ಮಾಸದ ಪಾಢ್ಯದಿಂದ) ಜಾತ್ರಾ ಮಹೋತ್ಸವವು ನಡೆಯುತ್ತದೆ. ಅಲ್ಲದೆ ಇಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ(Sri
Durgaparameshwari) ಹಾಲು ಹಬ್ಬ, ಗೆಂಡೋತ್ಸವಗಳು(Kenda seve) ಕೂಡಾ ಹಬ್ಬದ ದಿನದಂದು ನಡೆಯಲ್ಪಡುತ್ತದೆ.
ಇಲ್ಲಿನ ರಥವು ಸುಂದರವಾಗಿದ್ದು ಮನಮೋಹಕವಾಗಿದೆ. ಹಬ್ಬದ ದಿನದಂದು ನಾಗತಂಬಿಲ, ಡಕ್ಕೆ ಬಲಿ ಇತ್ಯಾದಿಗಳು
ನಡೆಯುತ್ತದೆ. ಅಲ್ಲದೆ ಇಲ್ಲಿನ ದೇವ, ದೈವಗಳಿಗೆ ಮುಡಿಬಿಟ್ಟ ಅಂದರೆ ದರ್ಶನ ಪಾತ್ರಿಗಳು ಒಂದು ದಿನ
ಸೇರಿ ಅಮ್ಮನವರ ಮುಂಬಾಗದಲ್ಲಿ ಆವೇಶಗೊಳ್ಳುತ್ತಾರೆ. ಇಲ್ಲಿನ ದೇವರನ್ನು ನಂಬಿದವರು ಎಲ್ಲಿಯೇ ಇದ್ದರೂ
ಇಲ್ಲಿನ ಹಬ್ಬದ ದಿನದಂದು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಈ ದೇವಾಲಯವು
ಇಂದು ಕೆಲವೊಂದು ಜೀರ್ಣಾವಸ್ಥೆಯ ಹಂತವನ್ನು ತಲುಪಿದೆ. ದೈವ-ದೇವತೆಗಳ ಬಿಂಬಗಳು ತುಂಬಾ ಶಿಥಿಲತೆಯನ್ನು
ತಲುಪಿದೆ. ಭಕ್ತಾದಿಗಳ ಸಹಕಾರ ಮತ್ತು ಉತ್ತಮ ಆಡಳಿತದಿಂದ ಈ ದೇವಾಲಯವನ್ನು ನವೀಕರಿಸಿದಲ್ಲಿ ಭಕ್ತಾದಿಗಳ
ಸಂಖ್ಯೆ ಹೆಚ್ಚುವುದಲ್ಲದೆ ಶ್ರೀ ದೇವರ ಕೃಪೆಯು ಆಗುವುದು.
ವಿಳಾಸ :-
ಶ್ರೀ
ವಿರೇಶ್ವರ ದೇವಸ್ಥಾನ,
ಪಾದೇಮಠ,
ಕೆಂಜೂರು,
ಉಡುಪಿ-
ತಾ & ಜಿಲ್ಲೆ ||