Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Barakuru Kalikambe Ammanavaru, Barkuru. Udupi-Tq.


ಶ್ರೀ ಕಾಳಿಕಾಂಬಾ ಅಮ್ಮನವರ ದೇವಸ್ಥಾನ, ಬಾರ್ಕೂರು, ಉಡುಪಿ - ತಾ||
Sri Kalikamba Ammanavara Temple, Barkuru, Udupi- Tq.


Shree Kalikamba Ammanavru, Barkur
   

     ಶ್ರೀ ಬಾರ್ಕೂರು ಕಾಳಿಕಾಂಬಾ ಅಮ್ಮನವರ(Barkur Kalikambe) ದೇವಾಲಯವು ವಿಶ್ವಕರ್ಮ ಸಮಾಜದ ಆರಾಧ್ಯ ದೇವತೆಯ ನೆಲೆವೀಡು. ಈ ಮಾತೆ ವಿಶ್ವಕರ್ಮ ಸಮಾಜದ ಕುಲಮಾತೆಯೂ ಆಗಿದ್ದಾಳೆ. ವಿಶ್ವಕರ್ಮ ಸಮಾಜದವರು ಈ ಮಾತೆಯನ್ನು ಸದಾ ಸರ್ವದಾ ಪೂಜಿಸುತ್ತಾ ಬಂದು ಅಮ್ಮನ ಮಡಿಲಲ್ಲಿ ಆಡಿ - ಕುಣಿದು ಕುಪ್ಪಳಿಸಿ ಹಾಡಿದ್ದಾರೆ.
   ಬಾರಕೂರು ಕರಾವಳಿ ಕರ್ನಾಟಕದ ದೇವಸ್ಥಾನಗಳ ತವರೂರು. ತುಳುನಾಡಿನ ರಾಜಧಾನಿಯಾಗಿದ್ದ ಬಾರಕೂರಿನಲ್ಲಿ 365 ದೇವಸ್ಥಾನಗಳು ಇದ್ದು ನಿತ್ಯೋತ್ಸವ ನಡೆಯುತ್ತ ಇದ್ದುದು ಇತಿಹಾಸ. ಇಲ್ಲಿನ ಆಳರಸರು, ದೇವಾಲಯ, ಅರಮನೆ, ಕೋಟೆ, ಪಟ್ಟಣ ನಿರ್ಮಾಣಕ್ಕೆ ದೂರದ  ಆನೆಗುಂದಿ, ತುಮಕೂರು, ಮೈಸೂರು ಪ್ರದೇಶಗಳಿಂದ ಶಿಲ್ಪಿಗಳನ್ನು ಕರೆಸಿಕೊಂಡಿದ್ದರು. ಶಿಲ್ಪಿಗಳು ಸಾಮೂಹಿಕ  ಆರಾಧನೆಗೆ ನಿರ್ಮಿಸಿಕೊಂಡ “ಕಾಳಮ್ಮನ ಗುಡಿ” ಮುಂದೆ ಕಾಳಿಕಾಂಬಾ ದೇವಸ್ಥಾನವಾಯಿತು”. ವಿಶ್ವಕರ್ಮ ಬ್ರಾಹ್ಮಣರ ಆಡಳಿತ ಹಾಗೂ ಪೂಜಾ ವ್ಯವಸ್ಥೆಯನ್ನು ಹೊಂದಿರುವ ಈ ದೇವಸ್ಥಾನಕ್ಕೆ ಎಲ್ಲಾ ಸಮುದಾಯಗಳ ಜನರು ಶ್ರದ್ದಾ ಭಕ್ತಿಯಿಂದ ನಡೆದುಕೊಳ್ಳುತ್ತದ್ದಾರೆ. ಆದುದರಿಂದ ಗ್ರಾಮ ದೇವಸ್ಥಾನಗಳೆನ್ನುವ ಹೆಗ್ಗಳಿಕೆ.
Swagatha gopura, Barkuru. ಸ್ವಾಗತ ಗೋಪುರ. 
           ಈ ದೇವಾಲಯದಲ್ಲಿ ಧ್ವಜಾಯದಲ್ಲಿ ನಿರ್ಮಿಸಿರುವ ಈ ದೇವಾಲಯದ ಮೂರ್ತಿಯು “ನಿಲಾಂಜನ” ಶಿಲೆಯಿಂದ ನಿರ್ಮಿತವಾಗಿದೆ. ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಿರುವ ಶ್ರೀ ದೇವಿಯ ಪಾಣಿಪೀಠದಲ್ಲಿ ಒಂಟೆಯ ಲಾಂಛನ ಹಾಗೂ ಕೆತ್ತಿರುವ  ಮೂರು ರುಂಢಗಳು ವೈಶಿಷ್ಟ್ಯಪೂರ್ಣ. ಸಂಶೋಧಕ ಡಾ|| ಗುರುರಾಜ ಭಟ್ಟರ ಅಭಿಪ್ರಾಯದಂತೆ ಶ್ರೀ ದೇವಿಯ ಮೂರ್ತಿ 14 ಶತಮಾನದ್ದು.
           ಶ್ರೀ ದೇವಸ್ಥಾನಕ್ಕೆ 12 ಮಾಗಣೆಯ ಪರಿವ್ಯಾಪ್ತಿಯಿದೆ. ಸುಮಾರು 1200 ವರ್ಷಗಳ ಇತಿಹಾಸವನ್ನು, ಪರಂಪರೆಯನ್ನೂ ಹೊಂದಿದ ದೇವಾಲಯವಾಗಿದೆ. ಹಾಗೇ ಮಹಾದೇವಿಯೊಂದಿಗೆ ಪರಿವಾರ ದೈವಗಳೂ ಕೂಡಾ ಇಲ್ಲಿವೆ. ನಾಗಬನ ಇಲ್ಲಿನ ಆಕರ್ಷಣೆಯಾಗಿದೆ. ಈ ದೇವಾಲಯ ಇತ್ತೀಚೆಗೆ ಜೀರ್ಣೋದ್ದಾರಗೊಂಡು ಸಂಪೂರ್ಣ ನವಿಕೃತಗೊಂಡು ಭಕ್ತರ ಕಂಗಳು ಸೆಳೆಯುತ್ತದೆ.
           ಬಾರಕೂರು ಶ್ರೀ ಕಾಳಿಕಾಂಬೆ ದೇವಸ್ಥಾನದಲ್ಲಿ ಕಾರ್ತಿಕ ಮಾಸಾಧಿ ನಡೆಯುವ ರಂಗಪೂಜೆ ದೀಪೋತ್ಸವ, ಈ ಊರಿನ ದೊಡ್ಡ ಉತ್ಸವವಾಗಿದೆ. ಜಾತಿ, ಮತ - ಭೇದಗಳಿಲ್ಲದೆ ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಇದು “ಬಾರಕೂರು ದೀಪ” ಎಂದೇ ಪ್ರಸಿದ್ದಿಯನ್ನು ಪಡೆದಿದೆ.
              ಶ್ರೀ ಆದಿಶಕ್ತಿ ಸ್ವರೂಪಿಣಿಯಾದ ಕಂಚಿ ಕಾಮಾಕ್ಷಿ ಕನ್ನಡನಾಡ ಶ್ರೀ ಕಾಳಿಕಾಂಬಾ ಆಗಿ ಭಕ್ತರ ಸಲಹುತ್ತಾ ಪೊರೆಯುತ್ತಾ ಇದ್ದಾಳೆ. ಈ ಶ್ರೀ ಕಾಳಿಕಾಂಬೆಯ ದರುಶನವನ್ನು ಒಮ್ಮೆ ಮಾಡಿ ಪುನೀತರಾಗಿ..
“ಜಯ ಜಯವು ಶ್ರೀ ಕಾಳಿಕಾಂಬೆ ಮಾತೆಗೆ”
ದಾರಿಯ ವಿವರ: ಈ ದೇವಸ್ಥಾನವನ್ನು ತಲುಪಲು ಕುಂದಾಪುರದಿಂದ ಕೋಟ - ಮೂರುಕೈಯಿಂದ ಸಾಗಿ, ಸಾಯಬ್ರಕಟ್ಟೆಯಿಂದ ಬಾರಕೂರನ್ನು ತಲುಪಬಹುದು. ಅಥವಾ ಬ್ರಹ್ಮಾವರ ಮೂಲಕ ಆಕಾಶವಾಣಿಯ ಸಮೀಪದಲ್ಲಿನ ರಸ್ತೆಯಲ್ಲಿ ಸಾಗಿದರೆ ಶ್ರೀ ಕಾಳಿಕಾಂಬಾ ದೇವಾಲಯವನ್ನು ತಲುಪಬಹುದು. ಉಡುಪಿಯಿಂದ ಬ್ರಹ್ಮಾವಕ್ಕೆ ಬಂದು ಅಲ್ಲಿಂದ ಈ ದೇವಾಲಯ ತಲುಪಬಹುದು.
ವಿಳಾಸ :-
ಶ್ರೀ ಬಾರ್ಕೂರು ಕಾಳಿಕಾಂಬಾ ದೇವಸ್ಥಾನ,
ಬಾರ್ಕೂರು, ಉಡುಪಿ -ತಾ|| & ಜಿಲ್ಲೆ.