Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Balachikku Temple, Kallarabailu, Kandlur, Kundapura- Tq.


Kallarabailu Sri Balachikku Ammanavara Tepmle, Kandlur.
ಕಲ್ಲಾರಬೈಲು ಶ್ರೀ ಬಾಲಚಿಕ್ಕು ಅಮ್ಮನವರ ದೈವಸ್ಥಾನ, ಕಂಡ್ಲೂರು,ಕುಂದಾಪುರ-ತಾ||


ಶ್ರೀ ಬಾಲಚಿಕ್ಕು ಮತ್ತು ಸಪರಿವಾರ ದೈವಗಳು(Balachikku, Kandlur, Kundapura)
ವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕ ಸಂಖ್ಯೆಯ ರಾಮಕ್ಷತ್ರಿಯರು ನಂಬಿಕೊಂಡು ಬಂದ ದೈವಸ್ಥಾನ ಕುಂದಾಪುರ(kundapura) ತಾಲೂಕಿನ ಕಂಡ್ಲೂರಿನ(kandlur) ಕಲ್ಲಾರಬೈಲು ಬಾಲಚಿಕ್ಕು(Balachikku) ಮತ್ತು ಪರಿವಾರ ದೈವಗಳ ಕ್ಷೇತ್ರವಾಗಿದೆ. ಅದರ ವಾರ್ಷಿಕ ಜಾತ್ರೆಯನ್ನು ಡಕ್ಕೆ ಬಲಿ ಎಂದೇ ಪ್ರಚಲಿತವಾಗಿ ಕರೆಯುತ್ತಾರೆ.
ಪರಾಂಪರಗತವಾಗಿ ರಾಮಕ್ಷತ್ರಿಯ ಸಮಾಜದ ಹೆಚ್ಚಿನ ಮನೆತನದವರು ಈ ಕಲ್ಲಾರಬೈಲು ಬಾಲಚಿಕ್ಕು ಅಮ್ಮನವರು(Balachikku ammanavaru) ಮತ್ತು ಪರಿವಾರ ದೈವಗಳನ್ನು ನಂಬಿ ಆರಾಧಿಸುತ್ತಾ ಬಂದಿದ್ದಾರೆ. ತಮ್ಮ ಆಶೋತ್ತರಗಳು ಈಡೇರಿಕೆಗೆ ಹರಕೆ ಹೊತ್ತು ಈ ಕ್ಷೇತ್ರಕ್ಕೆ ಕಾಣಿಕೆ ಸಲ್ಲಿಸುವ ಕ್ರಮ ಹಿಂದಿನಿಂದಲೂ ಇವರಲ್ಲಿ ರೂಢಿಯಲ್ಲಿದೆ.
ಬಾಲಚಿಕ್ಕು(Balachikku) ದೈವವನ್ನು ಮತ್ತು ಈ ಸ್ಥಾನದ ದೈವಾದಿಗಳನ್ನು ನಂಬಿಕೊಂಡು ಬಂದವರು ಎಲ್ಲೆ ಇರಲಿ ಎಂತಾಗಿಯೆ ಇರಲಿ - ವಾರ್ಷಿಕ ಹಬ್ಬಕ್ಕೆ ಪ್ರಯತ್ನಪಟ್ಟು ಭಾಗವಹಿಸುವ ಸಂಪ್ರದಾಯ ಈ ಕಡೆಯ ರಾಮಕ್ಷತ್ರೀಯ ಸಮಾಜದಲ್ಲಿದೆ. ಹೀಗಾಗಿ ತಿಂಗಳ ಮೊದಲೆ ಕಂಡ್ಲೂರು ಢೆಕ್ಕೆಬಲಿ ಯಾವಾಗ ಎಂದು ತಿಳಿದುಕೊಂಡು ತಯಾರಿ ಮಾಡಿಕೊಳ್ಳುತ್ತಾರೆ. ದೂರದ ಊರಿನಲ್ಲಿದ್ದವರೂ ವಾಹನದ ಅನುಕೂಲತೆ ಮಾಡಿಕೊಂಡು ಕಲ್ಲಾರಬೈಲಿನ(kallara bail) ದೈವದ ಹಾಲು ಹಬ್ಬ(haalu habba) ಕ್ಕೆ ಹಾಜರಾಗುತ್ತಾರೆ. ನಂಬಿಕೊಂಡು ಬಂದ ಭಕ್ತಾದಿಗಳ ಸಮೂಹವೇ ಅಂದು ಮಹಾತಾಯಿ ಬಾಲಚಿಕ್ಕು ಕ್ಷೇತ್ರದಲ್ಲಿ ಜಮಾಯಿಸುತ್ತಾರೆ. ಭಯಭಕ್ತಿಯಿಂದ ಭಕ್ತರು ಮಣ್ಣುಕಾಯಿ ಅರ್ಪಿಸಿ ಮಂಗಳಾರತಿ ಮಾಡಿಸಿ ಹರಕೆ ಹೊತ್ತು ಹರಕೆ ಸಂದಾಯ ಮಾಡುತ್ತಾರೆ. ಧನ್ಯತಾಭಾವದಿಂದ ನಂಬಿಕೊಂಡು ಆರಾಧಿಸುತ್ತರುವ ಬಾಲಚಿಕ್ಕು ಮತ್ತು ಪರಿವಾರ ದೈವಗಳ ಮಹಾಪೂಜೆಯನ್ನು ಕಂಡು ಮನಃಶಾಂತಿಯಿಂದ ಪೂಜಾ ಪ್ರಸಾದ ಸ್ವೀಕರಿಸುತ್ತಾರೆ.
ಚಿತ್ತೇರಿ ಹಾಯಿಗುಳಿ(Kandlur, Kundapura)

ಕೆಲವು ವರ್ಷಗಳ ಹಿಂದೆ ಕಲ್ಲಾರಬೈಲಿನ ವರ್ಷಾವದಿ ಡಕ್ಕೆ ಬಲಿಗೆ ಹೋಗಬೇಕಾದರೆ ನಾಲ್ಕು ನದಿಗಳನ್ನು ದಾಟಿ ಬೈಂದೂರು ಕಡೆಯವರು ಕ್ಷೇತ್ರಕ್ಕೆ ಹೋಗಬೇಕಾಗಿತ್ತು. ಆ ಕಾಲದಲ್ಲಿ ಉಪ್ಪುಂದದಲ್ಲಿ ಬೈಂದೂರು ಹೊಳೆ ದಾಟಿ, ಗಂಗೊಳ್ಳಿಗೆ ಬಂದು ಪಂಚಗಂಗಾವಳಿಯನ್ನು ದಾಟಿ, ಕುಂದಾಪುರದಿಂಧ ಪೂರ್ವಕ್ಕೆ ದೋಣಿ ಮೂಲಕ ನದಿ ದಾಟಿ - ಬಸ್ರೂರು ಮಾರ್ಗವಾಗಿ ಕಲ್ಲುಸಂಕವನ್ನು ದಾಟಿ, ಕಂದಾವರ ಮಾರ್ಗವಾಗಿ ಕಂಡ್ಲೂರು ಹೊಳೆಯನ್ನು ದೋಣಿಯಲ್ಲಿ ದಾಟಿಕೊಂಡು ಕಂಡ್ಲೂರಿನ ನೆಲದಲ್ಲಿ ಕಾಲಿಡಬೇಕಾಗಿತ್ತು. ಮುಂದೆ ಅರ್ಧ ಕಿ.ಮೀ ನಡೆದು ಕಲ್ಲಾರಬೈಲಿನ ದೈವದ ಮನೆಯ ವಠಾರವನ್ನು ತಲುಪಬೇಕಾಗಿತ್ತು.
ಇಷ್ಟೇಲ್ಲಾ  ಪ್ರಯಾಸವನ್ನು ಪಟ್ಟಾದರೂ ರಾಮಕ್ಷತ್ರೀಯ ಸಮಾಜದ ಜನರು ನಂಬಿಕೊಂಡು ಬಂದ ದೈವಸ್ಥಾನವನ್ನು ವರ್ಷಕ್ಕೊಮ್ಮೆಯಾದರೂ ತಪ್ಪದೇ ಸಂದರ್ಶಿಸುತ್ತದ್ದರು.
ಸಾಧಾರಣ 50 ವರ್ಷಗಳ ಹಿಂದಿನ ಪಾತ್ರಿಗಳ ಕಾಲದಲ್ಲಿ ಅವರೇ ದೈವವಾಗಿ ವ್ಯಾಖ್ಯೆ ನೀಡುತ್ತದ್ದರು. ಎಂಬ ನಂಬಿಕೆ ಇತ್ತು. ಇವರು ಹೇಳಿದಂತೆಯೆ ನಡೆಯುತ್ತಿತ್ತು ಎಂಬ ಭಕ್ತಿಭಾವನೆಯಿತ್ತು. ಅವರ ಕಾಲದ ನಂತರ ಇತ್ತೀಚಿನ 5-6 ವರ್ಷಗಳ ಹಿಂದಿನ ತನಕ ಹಿಂದಿನವರ ಮಗ ಪಾತ್ರಿಗಳಾಗಿದ್ದು ಕ್ಷೇತ್ರದಲ್ಲಿನ ಕಾರ್ಯಕಲಾಪಗಳನ್ನು ಶಾಸ್ತ್ರಬದ್ದವಾಗಿ ನಡೆಸಿಕೊಂಡು ಬರುತ್ತಿದ್ದರು. ಇವರ ಕಾಲಾನಂತರ ಈಗ ಕ್ಷೇತ್ರದಲ್ಲಿ ಉತ್ತಮ ಆಡಳಿತದೊಂದಿಗೆ ನಡೆದು ಬರುತ್ತಿದೆ.
ಹೀಗೆ ಹಲವಾರು ಪರಿವಾರ ದೈವದೊಂದಿಗೆ ಬಾಲಚಿಕ್ಕು ಅಮ್ಮನವರು ಭಕ್ತರನ್ನು ಪೊರೆಯುತ್ತಾ ಸಮಸ್ತ ನಂಬಿದ ಭಕ್ತರ ಆರಾಧ್ಯ ದೇವಿಯಾಗಿ ಕಾದು ಅಭಯದಾಯಿನಿಯಾಗಿದ್ದಾಳೆ. ಅಮ್ಮನ ಅಂದ-ಚಂದವ ನೋಡಲು ನೀವೂ ಒಮ್ಮೆ ಈ ಕ್ಷೇತ್ರಕ್ಕೆ ಬಂದು ಬಾಲಚಿಕ್ಕು ಮತ್ತು ಅವಳ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕು. ಈ ಕ್ಷೇತ್ರದಲ್ಲಿ ಉದ್ಭವಿತ ಮಹಾಗಣಪತಿಯೂ ನೆಲೆನಿಂತು ಸರ್ವರನ್ನು ಪೊರೆಯುತ್ತಾ ಇದ್ದಾನೆ.
ಶ್ರೀ ರಕ್ತ ಹಾಯಿಗುಳಿ(Kandlur, Kundapura)

ದಾರಿಯ ವಿವರ : ಕುಂದಾಪುರದಿಂದ ಬಸ್ರೂರು ಮೂರುಕೈ ಮಾರ್ಗವಾಗಿ ಕಂಡ್ಲೂರು ತಲುಪಿ ಅಲ್ಲಿಂದ ಸುಲಭದಲ್ಲಿ “ಬಾಲಚಿಕ್ಕು ಅಮ್ಮನ” ಸನ್ನಿಧಾನವನ್ನು ತಲುಪಬಹುದು.

ವಿಳಾಸ:-
ಶ್ರೀ ಬಾಲಚಿಕ್ಕು ಅಮ್ಮನವರ ದೈವಸ್ಥಾನ,
ಕಲ್ಲಾರಬೈಲು, ಕಂಡ್ಲೂರು,
ಕುಂದಾಪುರ - ತಾಲೂಕು.
ಉಡುಪಿ - ಜಿ|| ಕರ್ನಾಟಕ.



View Kandluru Balachikku Temple in a larger map