Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Belthuru Badhra mahakali Ammanavaru

ಶ್ರೀ ಭದ್ರಮಹಾಕಾಳಿ ದೇವಸ್ಥಾನ, ಬ್ಯಾಲ್ತೂರು, ಕುಂದಾಪುರ ತಾ||
Shree BadramahakaliTemple, Belthoor, Kundapura Tq.


ಶ್ರೀ ಬ್ಯಾಲ್ತೂರು ಭದ್ರಮಹಾಂಕಾಳಿ ಅಮ್ಮನವರು (Badramahakali)

ಬ್ರಹ್ಮಲೋಕದಲ್ಲಿ ತ್ರಿಮೂರ್ತಿಗಳು ಸಭೆ ಸೇರಿ ಸೃಷ್ಠಿ- ಸ್ಥಿತಿ-ಲಯ ಕಾರ್ಯದ ಬಗ್ಗೆ ಸೂಕ್ಷ್ಮಾವಲೋಕನ ಮಾಡುವಾಗ ನಾರದ ಮುನಿ ಬಂದು ವಸುಪುರದ(ಈಗಿನ ಬಸ್ರೂರು) ಸೀಮೆಯಲ್ಲಿ ಭೂತಾರಾಧನೆ ಹೆಚ್ಚಾದ್ದರಿಂದ ಧರ್ಮ ನಶಿದಿದೆ ಎಂದಾಗ ಶಿವನು ಸಿಟ್ಟಾಗುತ್ತಾನೆ. ಮತ್ತೆ ನಾರದ ಸಮಾಧಾನದಿಂದ ಮಾತನಾಡಿ ನಿಮ್ಮವರಿಂದಲೇ ಭೂ ಲೋಕದಲ್ಲಿ ಧರ್ಮೋದ್ದಾರಣ ಕಾರ್ಯ ನಡೆಯಬೇಕೆಂದು ಹೇಳುತ್ತಾನೆ.
Balthur Badrakali Ammanavaru
(ಬ್ಯಾಲ್ತೂರು ಭದ್ರಮಹಾಂಕಾಳಿ  ಅಮ್ಮನವರು)

ಭೂ ಲೋಕದ ಜನತೆ ನಮ್ಮ ಪ್ರಭಾವಕ್ಕೆ ಹೆದರಲಾರರು ಎಂದು ದಿಗ್ಮೂಢರಾಗಿ ಆದಿಮಾಯೆಯನ್ನೇ ಪ್ರಸನ್ನಿಕರಿಸಿ ತಾಯಿಯಲ್ಲಿ ತಮ್ಮ ಸಂಕಷ್ಟವನ್ನು ಅರಿಕೆ ಮಾಡಿಕೊಂಡಾಗ ತಾಯಿಯ ಆಜ್ಞೆಯಾಗುತ್ತದೆ.
          ಭೂ ಲೋಕದ ಜನರಿಗೆ ಭಕ್ತಿ ಮೂಡಬೇಕಾದರೆ ಭಯ ಬರಬೇಕು. ಹಾಗಾಗಿ ಧರ್ಮೋತ್ಥಾನಕ್ಕಾಗಿ ಶುಂಭ-ನಿಶುಂಭರನ್ನು ಕೊಲ್ಲಲು ತಾಳಿದ ರೂಪವಾದ ಮಹಾಕಾಳಿಯ ರೂಪದಿಂದಲೇ ಕಾಲಾಂತರದಲ್ಲಿ ವಸುಪುರದ ಸೀಮೆಯಲ್ಲಿ ನೆಲೆಸುತ್ತೆನೆ.ನೀವು ನಿಶ್ಚಿಂತರಾಗಿರಿ ಎಂದು ಹೇಳಿ ದೇವಿಯು ಅಂತರ್ಧಾನಳಾದಳು. ನಂತರ ತ್ರಿಮೂರ್ತೀಗಳು ಸಹ ಯೋಚಿಸಿ ಒಂದು ತೀರ್ಮಾನಕ್ಕೆ ಬರುತ್ತಾರೆ. ವಿಷ್ಣುವು ತಾಯಿ ನೆಲೆ ನಿಂದ ಸ್ಥಳದ ಸಮೀಪದಲ್ಲೆ ಹೇಮಾಪುರ(ಈಗಿನ ಹೆಮ್ಮಾಡಿ) ದಲ್ಲಿ ಶ್ರೀ ಲಕ್ಷ್ಮೀ ನಾರಾಯಣನಾಗಿ ನೆಲೆ ನಿಲ್ಲತ್ತೇನೆ ಎಂದಾಗ ಪರಶಿವನು ನಾನು ಬ್ರಹ್ಮನನ್ನು ನನ್ನಲ್ಲಿ ಐಕ್ಯ ಮಾಡಿಕೊಂಡು ಚಿತ್ತೂರಿನಲ್ಲಿ ಬ್ರಹ್ಮಲಿಂಗೇಶ್ವರನಾಗಿ ನೆಲೆನಿಂತು ನಂಬಿದ ಭಕ್ತರನ್ನು ಕಾಪಾಡುವೆವು ಎಂದು ಸದ್ ಸಂಕಲ್ಪ ಮಾಡಿ ತಮ್ಮ ಕರ್ತ್ಯವ್ಯದಲ್ಲಿ ತತ್ಪರರಾಗುತ್ತಾರೆ.
          ಲೋಕಕಂಟಕನಾದ ಭದ್ರಾಸುರನು ಈ ಸೀಮೆಯಲ್ಲಿ ಮೆರೆಯುತ್ತಾ ಇರುವ ವೇಳೆಯಲ್ಲಿ ಈ ಲೋಕಕಂಟಕನಾದ ರಾಕ್ಷಸನನ್ನು ವಧಿಸಿ ಲೋಕಕಲ್ಯಾಣಗೈದ ತಾಯಿ ಭದ್ರಮಹಾಕಾಳಿಯು ಭಕ್ತ ಜನರ ಪ್ರಾರ್ಥನೆಗೆ ಪ್ರಸನ್ನಳಾಗಿ ಕ್ಷೇತ್ರದಲ್ಲಿ ನೆಲೆಸಿ ಭಕ್ತ ಜನರನ್ನು ಪೊರೆನಾರೋಯುತ್ತಾ ಕಾರಣಿಕ ಶಕ್ತಿಯಾಗಿದ್ದಾಳೆ. ಸಂತಾನ ಭಾಗ್ಯ, ಮಧುವೆ, ಉದ್ಯೋಗ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ಭಾಗ್ಯ ನೀಡಿ ಸಲಹುತ್ತಾ ಇದ್ದಾಳೆ.ಹೀಗೆ ಆಸ್ತಿಕ ಜನರಿಗೆ ಮಂಗಳದಾಯಿನಿಯಾಗಿದ್ದಾಳೆ.
          ಈ ತಾಯಿಯು ಕಲಿಯುಗದ ಕಾಮಧೇನು ಆಗಿದ್ದಾಳೆ. ಭದ್ರಾಸುರನು ಕಲಿಯುಗದಲ್ಲಿ ಅಯೋನಿಜೆಯಾದ ಆದಿಶಕ್ತಿ ತನ್ನ ವಧೆಗೆ ಬರುವುದು ಅಸಾಧ್ಯವೆಂದು ತಿಳಿದು ವರಪ್ರಮತ್ತನಾಗಿ ಮೆರೆದಾಗ ತಾಯಿಯಿಂದ ಮರ್ಧನಗೊಳ್ಳುತ್ತಾನೆ.
          ಈ ತಾಯಿಯೊಂದಿಗೆ ಹಲವಾರು ಪರಿವಾರ ದೈವಗಳು ನೆಲೆ ನಿಂತು ಭಕ್ತರ ಸಂಕಷ್ಟಗಳನ್ನು ಪರಿಹರಿಸಿತ್ತಾ ಇದ್ದಾರೆ. ಭದ್ರಾಸುರನನ್ನು ಕೊಂದ ಕಾರಣದಿಂದ ತಾಯಿಯು ಇಲ್ಲಿ “ಭದ್ರಮಹಾಂಕಾಳಿ” ಯಾಗಿ ನೆಲೆನಿಲ್ಲುತ್ತಾಳೆ.  ಈ ತಾಯಿಯೊಂದಿಗೆ ಶ್ರೀ ಸ್ವಾಮಿ, ಮಂತ್ರಿಗಣ, ಹೈಗುಳಿ, ದೊಟ್ಟೆಕಾಲು ಚಿಕ್ಕು ಇನ್ನೂ ಹಲವಾರು ದೈವಾದಿಗಳು ಅಮ್ಮನೊಂದಿಗೆ ಭಕ್ತರಿಗೆ ಅಭಯಪ್ರದಾಯಕರಾಗಿದ್ದಾರೆ. ಈ ತಾಯಿಯ ಬಿಂಬವನ್ನು ರಕ್ತಚಂದನದ ಮರದಿಂದ ತಯಾರಿಸಲಾಗಿದೆ.


ಬ್ಯಾಲ್ತೂರು ದೇವಸ್ಥಾನದ ವಿಹಂಗಮ ನೋಟ.
          ಇಲ್ಲಿನ ಭದ್ರಮಹಾಕಾಳಿಯು ಬೇಡಿದ ವರವನ್ನು ನೀಡುವ ದೇವಿಯಾಗಿದ್ದಾಳೆ. ಇವಳ ಮಹಿಮೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಅಂತೆಯೇ ಇಲ್ಲಿನ ಕ್ಷೇತ್ರ ಮಹಾತ್ಮೆಯನ್ನು ಸಾರುವ “ಬ್ಯಾಲ್ತೂರು ಕ್ಷೇತ್ರ ಮಹಾತ್ಮೆ” ಎಂಬ ಕಥಾನಕವನ್ನು ಶ್ರೀ ಬಸವರಾಜ್ ಶೆಟ್ಟಿಗಾರ್ ರವರು ಬರೆದು ಅದನ್ನು ಅಷ್ಟೇ ಸುಂದರವಾಗಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ- ಸೌಕೂರು ಇವರು ಪ್ರದರ್ಶನಕ್ಕೆ ಹೊರಟಾಗಿನಿಂದ ಅಮ್ಮನ ಅನುಗ್ರಹದಿಂದ ಅಮೋಘವಾಗಿ ಪ್ರದರ್ಶನಗೊಳ್ಳುತ್ತಾ ಇದೆ ಎಂದರೆ ಅಮ್ಮನ ಶಕ್ತಿ ಎಷ್ಟಿರಬೇಡ..?? ಈ ಪ್ರಸಂಗ ಎಲ್ಲೇ ಪ್ರದರ್ಶನಗೊಂಡರೂ ನೂರಾರು ವೀಕ್ಷಕರು ಕಣ್ಣು ಮಿಟುಕಿಸದೆ ಸಂಪೂರ್ಣ ಯಕ್ಷಗಾನವನ್ನು ಕಂಡು ಕೃತಾರ್ಥರಾಗುತ್ತಾರೆ. ಇದರಲ್ಲಿ ಕೆಲವೊಂದು ದೈವರ ವೇಷವನ್ನು ಅತೀ ಚಿತ್ತಾಕರ್ಷವಾಗಿ ಮೂಡಿಸಿ ಆ ವೇಷ ಜನರ ಮನದಲ್ಲಿ ಅಚ್ಚಳಿದು ಉಳಿಯುವಂತೆ ಪ್ರತಿಬಿಂಭಿಸಲಾಗಿದೆ. ಅಮ್ಮನವರ ವೇಷವೂ ಕೂಡಾ ಅತೀ ಮನೋಜ್ಞವಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ ಹಾಸ್ಯ, ಭಕ್ತಿ ಸ್ಪೂರಣೆಯನ್ನು ಉಣಬಡಿಸುವ ಈ ಪ್ರಸಂಗವನ್ನು ಒಮ್ಮೇಯಾದರೂ ನೋಡಲೇಬೇಕು. ನೋಡಿ ತನ್ಮಯರಾಗಬೇಕು.
          ಅದೇ ರೀತಿ ಅನಾದಿಕಾಲದಲ್ಲಿ  ಈ ದೇವಿ ಹುತ್ತದ ರೂಪದಲ್ಲಿ ನೆಲೆನಿಂತು ಅಮ್ಮನ ಹಾಡಿ ಎಂಬ ಪ್ರದೇಶದಲ್ಲಿ ಭಕ್ತರನ್ನು ಪೊರೆಯುತ್ತಾ ಇದ್ದಾಳೆ. ಇಲ್ಲಿನ ವರ್ಷಾವಧಿ ಉತ್ಸವವು ಬಹು ವಿಜೃಂಭಣೆಯಿಂದ ನಡೆಯುತ್ತದೆ. ಈ ವೇಳೆಯಲ್ಲಿ ತಾಯಿಯ ಉತ್ಸವಕ್ಕೆ ಚಿತ್ತೂರಿನ ಬ್ರಹ್ಮಲಿಂಗನಿಗೂ ಆಮಂತ್ರಿತಗೊಳ್ಳುತ್ತದೆ.
          ಇಲ್ಲಿನ ದೇವಾಲಯವು ಇತ್ತೀಚೆಗೆ ಜೀರ್ಣೋದ್ದಾರಗೊಂಡು ಸಂಪೂರ್ಣವಾಗಿ ಶಿಲಾಮಯವಾಗಿದ್ದಲ್ಲದೆ, ಭವ್ಯ ಸಭಾಂಗಣ ಕೂಡಾ ನಿರ್ಮಾಣವಾಗಿದೆ. ಇಲ್ಲಿನ ಮಹಾತ್ಮೆ ಇನ್ನೂ ಕೂಡಾ ಯಶಸ್ವಿ ಪ್ರದರ್ಶನಗೊಳ್ಳುತ್ತಾ ಇದೆ. ಇಲ್ಲಿನ ದೇವಿಯು ದರ್ಶನದ ವೇಳೆಯಲ್ಲಿ ಹಿಂದಿನಿಂದ ಪ್ರಸಾದವನ್ನು ಕೊಡುವ ಪದ್ದತಿ ಇದೆ. ಈ ಮಹಾತಾಯಿಯನ್ನು ನಂಬಿದರೆ ಈ ಅಮ್ಮ ಎಂದಿಗೂ ಕೂಡಾ ಕೈ ಬಿಡಲಾರಳು ಎಂಬುದು ಭಕ್ತರ ನಂಬಿಕೆ.
          ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಮಹಾತಾಯಿ ಶ್ರೀ ಭದ್ರಮಹಾಂಕಾಳಿಯನ್ನು ನೀವು ಒಮ್ಮೆ ಈ ಕ್ಷೇತ್ರದಲ್ಲಿ ಕಣ್ತುಂಬ ನೋಡಿ ಕೃತಾರ್ಥರಾಗಿ, ಅದೇ ರೀತಿ ಶ್ರೀ ಸೌಕೂರು ಮೇಳದವರ “ಬ್ಯಾಲ್ತೂರು ಕ್ಷೇತ್ರ ಮಹಾತ್ಮೆ” ಯನ್ನು ನೋಡಿ ಸಂಪೂರ್ಣ ಮಹಾಂಕಾಳಿಯ ಕೃಪೆಗೆ ಪಾತ್ರರಾಗಿ.
Parivara Daivagalu(ಪರಿವಾರ ದೈವಗಳು)



“ಸರ್ವರನ್ನೂ ಶ್ರೀ ಭದ್ರಮಹಾಂಕಾಳಿ ಅನುಗ್ರಹಿಸಲಿ”

ವಿಳಾಸ :-
ಶ್ರೀ ಭದ್ರಮಹಾಂಕಾಳಿ ಅಮ್ಮನವರ ದೇವಸ್ಥಾನ,
ಬ್ಯಾಲ್ತೂರು, ಕುಂದಾಪುರ - ತಾಲೂಕು.
ಉಡುಪಿ - ಜಿಲ್ಲೆ. ಕರ್ನಾಟಕ.
 
ದಾರಿಯ ವಿವರ:-
          ಇಲ್ಲಿಗೆ ಹೋಗಲು ಕುಂದಾಪುರದ ಮೂಲಕ ಹೆಮ್ಮಾಡಿ-ವಂಡ್ಸೆ-ಕೊಲ್ಲೂರು ಮಾರ್ಗವಾಗಿ ಹೋಗುವ ದಾರಿಯಲ್ಲಿ ಬಗ್ವಾಡಿ ಮಹಿಷಮರ್ದಿನಿ ದೇವಾಲಯಕ್ಕೆ ಸಮೀಪದಲ್ಲೆ  ಈ ದೇವಾಲಯವಿದೆ. ಇಲ್ಲಿಗೆ ಹೋಗಲು ಕೊಲ್ಲೂರಿಗೆ ಹೋಗುವ ಅಂದರೆ ಕೊಲ್ಲೂರಿಗೆ ಹೆಮ್ಮಾಡಿ ಮಾರ್ಗದಲ್ಲಿ ಸಾಗಿದರೆ ಈ ಕ್ಷೇತ್ರವನ್ನು ತಲುಪಬಹುದು.