ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಉಪ್ಪುಂದ, ಕುಂದಾಪುರ ತಾ||
Shree Durgaparameshwari Temple, Uppunda, Kundapura
Tq.
ಪರಶುರಾಮ
ಸೃಷ್ಠಿಯ ಶ್ರೇಷ್ಠ ನೆಲೆವೀಡಾದ ಈ ಕರಾವಳಿ ಪ್ರದೇಶ ಪುಣ್ಯ ದೇಗುಲಗಳ ಬೀಡು ಎಂದರೆ ಅತಿಶಯೋಕ್ತಿಯಲ್ಲ.
ಪರಶುರಾಮರ ತಪೋಭೂಮಿಯಾದ ಈ ನೆಲದಲ್ಲಿನ ಪ್ರತಿಯೊಂದು ಸ್ಥಳವು ಅತ್ಯಂತ ಪವಿತ್ರವಾದುದು. ಪಶ್ಚಿಮದಲ್ಲಿ
ರತ್ನಾಕರ(ಅರಬ್ಬಿ) ಸಮುದ್ರ, ಉತ್ತರದಲ್ಲಿ ಸುಮನಾ ನದಿಯ ಗಡಿ. ಈ ನಡುವೆ ಸಮತಟ್ಟಾದ ಭೂ ಪ್ರದೇಶದಲ್ಲಿ
ನೆಲೆಗೊಂಡಿರುವ ಶಕ್ತಿ ದೇವತೆಯೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು. ಭಕ್ತರ ಪೊರೆಯುವ ಮಹಾತಾಯಿ
ಎಂದೆ ಕರೆಯಲ್ಪಡುವ ದೇವಿ ಈಕೆ.
ಕುಂದಾಪುರ
ತಾಲೂಕಿನ ಅತೀ ದೊಡ್ಡ ಜಾತ್ರೆಗಳಲ್ಲಿ ಉಪ್ಪುಂದ ಜಾತ್ರೆ ಕೂಡಾ ಒಂದು. ಕೋಟೇಶ್ವರದ ಕೊಡಿಹಬ್ಬದ(koteshwara
kodihabba) ಮರುದಿನವೇ ಸಂಪನ್ನಗೊಳ್ಳುವ ಉಪ್ಪುಂದ(uppunda) ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ
ದೇವಾಲಯದ ಮನ್ಮಹಾರಥೋತ್ಸವ ಸಹಸ್ರ ಸಹಸ್ರ ಭಕ್ತರ ಕಣ್ಣಿಗೆ ಆನಂದ ಹುಟ್ಟಿಸುವ ಘಳಿಗೆ. ಉಪ್ಪುಂದ ಜಾತ್ರೆ
ಎಂದೇ ನಾಮಾಂಕಿತಗೊಂಡಿರುವ ಮನ್ಮಹಾರಥೋತ್ಸವ ತಾಯಿಯ ಸನ್ನಿಧಿಯಲ್ಲಿ ಮಕ್ಕಳ ಆಡೋಂಬಲ ಎಂಬಂತೆ ಗೋಚರವಾಗುತ್ತದೆ.
ಉದ್ಬವ ಲಿಂಗ ಸ್ವರೂಪಿ ಅಮ್ಮನವರು, Ammanavaru. Kali. Laxmi, Sarasvathi. |
ತ್ರೇತ್ರಾಯುಗದಲ್ಲಿ
ಮಾತಂಗ ಮುನಿ ದೇವಿಯನ್ನು ತನ್ನ ಮಗಳಾಗಿ ಪಡೆಯಬೇಕೆಂದು ತಪಸ್ಸು ಮಾಡಿ ಲಲಿತಾದೇವಿಯ ಮಂತ್ರಿಣಿ ಶ್ಯಾಮಲದೇವಿಯ
ಕುರಿತು ತಪಸ್ಸು ಮಾಡಿದ. ಮಾತಂಗ ಮುನಿಯ ಪತ್ನಿ ಸಿದ್ದಿಮತಿಯ ಕನಸಿನಲ್ಲಿ ಶ್ಯಾಮಲದೇವಿಯು ಕಾಣಿಸಿಕೊಂಡು
ತನ್ನ ಕರ್ಣಪೂರದಿಂದ ಹೊಂಗೆಯ ಚಿಗುರಿನ ಗೊಂಚಲನ್ನು ಅನುಗ್ರಹಿಸಿದ ವೃತ್ತಾಂತ ಇದೆ. ಸ್ವಲ್ಪ ಸಮಯದಲ್ಲೇ
ಸಿದ್ದಿಮತಿ ಕನ್ಯಾರತ್ನವನ್ನು ಪಡೆದಳು. ಆಕೆಗೆ ಲಘುಶ್ಯಾಮಲೆ ಎಂದು ಹೆಸರಿಡಲಾಯಿತು. ಈಕೆಯು ಸಕಲ ವಿಧ್ಯೆ,
ಮಂತ್ರ ರಹಸ್ಯ ಕಲಿತು ಮಹಾಪ್ರಭಾವ ಸಂಪನ್ನೇಯಾಗಿ ಲಲಿತಾ ಪರಮೇಶ್ವರಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾಳೆ.
ಉಪ್ಪುಂದ ಕಡಲ ತೀರದಲ್ಲಿ ಅಮ್ಮನವರು ಶಕ್ತಿ ಸ್ವರೂಪಿಣಿಯಾಗಿ ಉದ್ಬವಿಸಿದಳು ಹಾಗೂ ದೇವಿಕೆರೆಯಲ್ಲಿ
ಇದಕ್ಕೆ ಸಾಕ್ಷಿಯಾಗಿ ಈಗಲೂ ಹೊಂಗೆ ಗಿಡ ಇದೆ. ಅನಾದಿ ಕಾಲದಿಂದಲೂ ಈ ಗಿಡ ಇದೆ. ಮಾತಂಗ ಮುನಿ ಲಲಿತಾ
- ಶ್ಯಾಮಲ ದೇವಿಯರ ಅನುಗ್ರಹ ಪಡೆದ ಹೊಂಗೆಯ ಎಳೆ ಚಿಗುರು ಗೊಂಚಲು ಕನಸು ಸಾದೃಶ್ಯ ಎಂಬಂತಿದೆ ಈ ಹೊಂಗೆಗಿಡ.
ದೇವಳ ಸಂಪೂರ್ಣ ಶಿಲಾಮಯವಾಗಿ ಪೂರ್ವಾಭಿಮುಖವಾಗಿದೆ.
ದೇವಳದ ಈಶಾನ್ಯ ದಿಕ್ಕಿನಲ್ಲಿರುವ ಅಗಸ್ತ್ಯತೀರ್ಥ ಹಾಗೂ ತೆಂಕಲಿನ ಮಾತಂಗ ತೀರ್ಥ, ಗರ್ಭಗುಡಿ, ಮುಖಮಂಟಪ,
ತೀರ್ಥ ಮಂಟಪ, ಗೋಪುರ, ಶಿಖರ, ಶಿಲ್ಪಕಲೆ, ನೋಡುವಮತಹದ್ದು. ಪೂರ್ವ ಈಶಾನ್ಯದಲ್ಲಿ ಲಕ್ಷ್ಮೀ ನಾರಾಯಣ(Laxmi
Narayana) ಪೂರ್ವ ಆಗ್ನೇಯದಲ್ಲಿ ಉಮಾಮಹೇಶ್ವರ (umamaheshwara), ದಕ್ಷಣ ನೈರುತ್ಯದಲ್ಲಿ ಚತುರ್ಭುಜ
ಗಣಪತಿ, ಪಶ್ಚಿಮ ವಾಯುವ್ಯದಲ್ಲಿ ಸಪ್ತ ಅಶ್ವಗಳಿಂದ ಎಳೆಯಲ್ಪಟ್ಟ ಸೂರ್ಯನಾರಾಯಣ ದೇವರ ಉಬ್ಬು ಶಿಲ್ಪ
ನೋಡುವುದೆ ಚಂದ. ದಶಭುಜ ಮಹಾಗಣಪತಿ, ಲಕ್ಷ್ಮೀ ನಾರಾಯಣ, ಲಕ್ಷ್ಮೀ ನರಸಿಂಹ, ಕಂಬದ ಗಣಪತಿ, ದೇವಳದ
ಈಶಾನ್ಯದಲ್ಲಿ ಪಶ್ಚಿಮಾಭಿಮುಖವಾಗಿ ಪಾಣೀಪೀಠದ ಮೇಲೆ ಲಿಂಗರೂಪಿ ವೀರಭದ್ರ ದೇವರ ಸನ್ನಿಧಿ, ದಕ್ಷಿಣ
ಭಾಗದಲ್ಲಿ ಪ್ರಾಚೀನ ಈಶ್ವರ ದೇಗುಲ, ಕಾಶಿಯಿಂದ ತಂದ ವಿಶ್ವೇಶ್ವರ, ಉಮಾಮಹೇಶ್ವರ ಹೀಗೆ ಪರಿವಾರ ದೇವರಾಗಿ
ಇಲ್ಲಿ ನೆಲೆಗೊಂಡಿದ್ದಾರೆ. ದೇವತಾ ಸಮನ್ವಯಗೊಂಡ ಕ್ಷೇತ್ರಕ್ಕೊಂದು ಉತ್ತಮ ಉದಾಹರಣೆ ಈ ದೆಗುಲ.
60ರ
ದಶಕದಲ್ಲಿ ಅಷ್ಟಬಂಧ ಪುನರ್ ಪ್ರತಿಷ್ಠೆ ಕಾರ್ಯ ನಡೆದ ಬಳಿಕ 1996 ರಲ್ಲಿ ಜೀರ್ಣೋದ್ದಾರ ಸಮಿತಿಯ ಮೂಲಕ
ಅಭಿವೃದ್ದಿ ಕಾಮಗಾರಿಗಳೊಂದಿಗೆ ಅಷ್ಟಬಂದ ಸಹಿತ ಪುನರ್ ಪ್ರತಿಷ್ಠೆ ನಡೆಯಿತು. ಯುಗಾದಿ, ರಾಮನವಮಿ,
ಪ್ರತಿಷ್ಠಾವರ್ಧಂತಿ, ನಾಗರಪಂಚಮಿ, ಸ್ವರ್ಣಗೌರಿ ವೃತ, ಗಣೇಶ ಚತುರ್ಥಿ, ಸಿಂಹ ಮಾಸದಲ್ಲಿ ಸೋಣೆ ಆರತಿ,
ಜ್ಯೇಷ್ಠಾಲಕ್ಷ್ಮೀ ವೃತ, ಕೇದಾರ ವೃತ, ನವರಾತ್ರಿ, ಹಾಗೂ ಇನ್ನಿತರ ಹಲವಾರು ವಿಶೇಷ ಪೂಜಾದಿಗಳು ನಡೆಯುತ್ತದೆ.
ಸಂಕ್ರಾಂತಿ ಉತ್ಸವ ಹಾಗೂ ಆ ಸಮಯದಲ್ಲಿ ಪುಷ್ಪರಥೋತ್ಸವ ನಡೆಯುತ್ತದೆ.
Kalyana Mantapa- Uppunda (ಕಲ್ಯಾಣ ಮಂಟಪ) |
ಶಕ್ತಿಪ್ರದ
ಸನ್ನಿಧಿ : ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿ ರೋಮಾಂಚನ ಹುಟ್ಟಿಸುವಂತಹ
ನೆಲ. ಆಧ್ಯಾತ್ಮ ಜೀವನ ಭಯಸುವವರಿಗೆ ನೆಚ್ಚಿನ ತಾಣ. ಲಿಂಗರೂಪಿಯಾಗಿರುವ ಶ್ರೀ ದುರ್ಗಾಪರಮೇಶ್ವರಿ
ಅಮ್ಮನವರ ಕ್ಷೇತ್ರ ಅತ್ಯಂತ ಶಕ್ತಿಪ್ರದ ಎಂದು ನಂಬಲಾಗಿದೆ. ಪರಶುರಾಮ ಕ್ಷೇತ್ರದ ಸಪ್ತ ಕ್ಷೇತ್ರಗಲ್ಲಿ
ಒಂದಾದ ಕೊಲ್ಲೂರಿಗೆ ಹೋಗಲು
ಮೊದಲು ಈ ಹಿಂದೆ ಇದೇ ಮುಖ್ಯ ಕೊಂಡಿಯಾಗಿತ್ತು. ಮೂಕಾಂಬಿಕ ಸನ್ನಿಧಿಗೆ ಬರುವ ಭಕ್ತರು ಕಾಲ್ನಡಿಗೆಯಲ್ಲಿಯೇ
ಕೆರ್ಗಾಲು ಭಗವತಿ ಹಾಗೂ ಉಪ್ಪುಂದ ಅಮ್ಮನವರ ದರ್ಶನ ಪಡೆದು ಮುಂದೆ ಸಾಗಬೇಕು ಎಂಬ ನಂಬಿಕೆ ಇತ್ತು.
ಈಗಲೂ ದೇವಳದ ಹೆಬ್ಬಾಗಿಲಿನಲ್ಲಿ ಮಲೆಯಾಳ ಸಾಧುಗಳು ಇರುವುದನ್ನು ಕಾಣಬಹುದು.
ಸಂತಾನ ಭಾಗ್ಯ ನೀಡುವ ದೇವಿ : ಲಿಂಗಸ್ವರೂಪಿಯಾಗಿ ನೆಲೆಸಿ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ದುರ್ಗಾಪರಮೇಶ್ವರಿ ಅಮ್ಮನವರು
ಸಂತಾನಭಾಗ್ಯ ಕರುಣಿಸುವ ದೇವಿ ಎಂದೆ ಜನಜನಿತಳಾಗಿದ್ದಾಳೆ. ಹೊಸ ಮದುಮಕ್ಕಳು ಕುಡಿ ಅರಳಿಸುವ ದೇವಿ,
ಮಧುವೆ ಯೋಗ ಕೂಡಿಸುವ ದೇವಿ ಎಂದು ನಂಬಿಕೆ ಇದೆ. ಕಷ್ಟಕಾರ್ಪಣ್ಯದಿಂದ ಬೆಂದು ಬಸವಳಿದು ಬರುವ ಭಕ್ತರನ್ನು
ಪೊರೆಯುವ ಈ ತಾಯಿ ಮಡಿಲಲ್ಲಿ ಸದಾ ಭಕ್ತರು ನೆರೆಯುತ್ತಾರೆ. ಕರಾವಳಿಯ ತಟದಲ್ಲಿ ಮೀನುಗಾರರ ಬಂಧುಗಳು
ಭಕ್ತಿಪೂರ್ವಕವಾಗಿ ನಿತ್ಯಸ್ಮರಿಸುವ ದೇವಿಯೂ ಹೌದು. ಇಂತಹ ಪಾವನ ಕ್ಷೇತ್ರದ ರಥೋತ್ಸವದ ದಿನ ಸಹಸ್ರ
ಸಹಸ್ರ ಭಕ್ತರು ಸೇರಿ ಅಮ್ಮನ ದರ್ಶನ ಪಡೆದು ಕೃತಾರ್ಥರಾಗಿ ಪುನೀತರಾಗುತ್ತಾರೆ. ಇಲ್ಲಿನ ಕೃಷ್ಣ ಪಾಡ್ಯದಂದು
ಅಂದರೆ ಕೋಟೇಶ್ವರ ಹಬ್ಬದ ಮರುದಿನ ಇಲ್ಲಿನ ಹಬ್ಬ ನೆರವೇರುತ್ತದೆ. ಇಲ್ಲಿನ ಹಬ್ಬವೂ ಕೂಡಾ “ಕೊಡಿ ಹಬ್ಬ”
ಎಂದೆ ವಿಖ್ಯಾತಿಯಾಗಿದೆ.
ವಿಳಾಸ:-
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ,
ಉಪ್ಪುಂದ, ಕುಂದಾಪುರ - ತಾ||
ಉಡುಪಿ - ಜಿಲ್ಲೆ||
Sri Durgaparameshwari Temple,
Uppunda, Kundapura –Tq,
Udupi- Dt.
ದಾರಿಯ ವಿವರ : ಅಮ್ಮನವರ
ಸನ್ನಿಧಿಗೆ ಬರುವ ಭಕ್ತರು ಕುಂದಾಪುರದಿಂದ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ನೇರವಾಗಿ ಬೈಂದೂರಿಗೆ
ಹೋಗುವ ದಾರಿಯಲ್ಲೇ ಸಾಗಿದಾಗ ಕುಂದಾಪುರ ಮತ್ತು ಬೈಂದೂರಿನ ನಡುವೆ ಈ ಮಹಾತಾಯಿಯ ಸನ್ನಿದಾನವು ವಿರಾಜಮಾನವಾಗಿ
ಕಂಗೋಳಿಸುತ್ತದೆ.