Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Shree Banashankari(Shakambari) Temple, Badami, Bagalkot Dist.
ಶ್ರೀ ಬನಶಂಕರಿ(ಶಾಕಾಂಬರಿ) ದೇವಸ್ಥಾನ, ಬಾದಾಮಿ, ಬಾಗಲಕೋಟೆ ಜಿಲ್ಲೆ||

Shree Banashankari, Badami
          ರ್ನಾಟಕದ ಹಲವಾರು ಶಕ್ತಿ ಪೀಠಗಳ ಸಾಲಿನಲ್ಲಿ ಇರುವ ಜಾಗೃತಶಕ್ತಿ ಪೀಠವಾಗಿ ಇಂದಿಗೂ ತನ್ನ ಶಕ್ತಿಯ ಪಾರಮ್ಯವನ್ನು ತೋರುತ್ತಿರುವ ಕ್ಷೇತ್ರಗಳ ಸಾಲಿನಲ್ಲಿ ಬಾದಾಮಿಯಲ್ಲಿನ ಶ್ರೀ ಬನಶಂಕರಿ ದೇವಾಲಯ (Badami Shree Banashankari) ಅಗ್ರಮಾನ್ಯವೆಸಿಕೊಂಡಿದೆ. ಉತ್ತರಕರ್ಣಾಟಕ ಭಾಗದಲ್ಲಿನ ಆರಾಧ್ಯ ದೇವಿ ಮಾತ್ರವಲ್ಲದೆ ಹಲವಾರು ರಾಜ-ಮಹಾರಾಜರುಗಳಿಂದು ಪೂಜಿತಗೊಂಡ ದೇವಿ ಇವಳಾಗಿದ್ದಾಳೆ.

          ಇಲ್ಲಿನ ದೇವಾಲಯವು ಸರಿಸುಮಾರು 7ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಕಲ್ಯಾಣದ ಚಾಲುಕ್ಯರ ಕಾಲಕ್ಕೆ ನಿರ್ಮಾಗೊಂಡಿರುವುದನ್ನು ಇತಿಹಾಸ ಸಾರುತ್ತದೆ. ಆದರೆ 17ನೇ ಶತಮಾನದಲ್ಲಿ ಮರಾಠರಲ್ಲಿ ಪ್ರಮುಖನಾದ ಪರಸುರಾಮ್ ನಿಂದ ಪುನಃ ಜೀರ್ಣೋದ್ಧಾರಗೊಂಡಿತು. ಈ ದೇವಾಲಯವು ದ್ರಾವೀಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು  ದೇವಳದ ಮುಂದೆ ಬೃಹತ್ ಕಲ್ಲಿನ ದೀಪಸ್ತಂಭವಿದೆ.

          ಬಾದಾಮಿಯಲ್ಲಿ ಶ್ರೀ ಬನಶಂಕರಿ ದೇವಿ ನೆಲೆಸಿ ನಿಂತ ಬಗ್ಗೆ ಸ್ಕಂದ ಪುರಾಣದಲ್ಲಿ(Skanda Purana) ಹಾಗೂ ದೇವಿ ಮಹಾತ್ಮೆಯಲ್ಲಿ ಉಲ್ಲೇಖವನ್ನು ನಾವು ಕಾಣಬಹುದು. ಹಿಂದೆ ಈ ಸ್ಥಳ ತಿಲಕಾರಣ್ಯ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿನ ಪ್ರದೇಶದಲ್ಲಿ ದುರ್ಗಮಾಸುರ(Durgamasura) ಎಂಬ ಅಸುರನು ಇಲ್ಲಿನ ಜನಗಳಿಗೆ ಬಹಳವಾಗಿ ತೊಂದರೆಯನ್ನು ಕೊಡುತ್ತಾ, ಋಷಿಮುನಿಗಳನ್ನು ಪೀಡಿಸುತ್ತಾ ಇದ್ದನಂತೆ. ಇವನ ಉಪಟಳವನ್ನು ತಾಳಲಾರದೆ ದೇವತೆಗಳ ಮೊರೆ ಹೋದಾಗ, ಆದಿಶಕ್ತಿ ಪಾರ್ವತಿ(Parvathi) ತನ್ನ ತಾಮಸ ರೂಪದೊಂದಿಗೆ, ರಾಜಸ ರೂಪವಾದ ಲಕ್ಷ್ಮೀ ಮತ್ತು ಸಾತ್ವಿಕ ರೂಪವಾದ ವಾಣಿಯ ರೂಪವನ್ನು ಏಕೀಕರಿಸಿಕೊಂಡು ನೀಚ ಅಸುರನಾದ ದುರ್ಗಮಾಸುರನನ್ನು ಕೊಂದಳಂತೆ. ಹೀಗೆ ದುರ್ಗಮಾಸುರನನ್ನು ಕೊಂದು ಪಾರ್ವತಿಯು ದುರ್ಗಾ ಎಂಬ ನಾಮವನ್ನು ಹೊಂದುತ್ತಾಳೆ.

          ಮುಂದೆ ಇಲ್ಲಿನ ಕಾಡಿನಲ್ಲಿ ನೆಲೆಸಿದ ದೇವಿ ಶಿವನ ಪ್ರೀಯಂಕರಿ ಪಾರ್ವತಿಯನ್ನು ಜನರು 'ಬನಶಂಕರಿ' ಎಂದು ಪೂಜಿಸಲಾರಂಭಿಸಿದರು. 'ಬನ' ಎಂದರೆ 'ಕಾಡು', ಶಂಕರಿ ಎಂದರೆ 'ಶಿವನ ಅರ್ಧಾಂಗಿ' ಎಂಬುದಾಗಿದೆ. ಹೀಗೆ ಆದಿಮಾಯೆ ಪಾರ್ವತಿ, ಲಕ್ಷ್ಮೀ ಮತ್ತು ವಾಣಿಯ ಮೂರು ಗುಣಗಳಿಂದ 'ಶ್ರೀ ಬನಶಂಕರಿ' ದೇವಿಯಾಗಿ ಬಾದಾಮಿಯಲ್ಲಿ ನೆಲೆಸುತ್ತಾಳೆ.


          ಬಾದಾಮಿಯ ಶ್ರೀ ಬನಶಂಕರಿ ದೇವಿಗೆ 'ಶಾಕಾಂಬರಿ'(Shakambari Devi) ಎಂದು ಕೂಡಾ ಕರೆಯುತ್ತಾರೆ. ಇದಕ್ಕೆ ಕೂಡಾ ಪುರಾಣದಲ್ಲಿ ಒಂದು ಹಿನ್ನಲೆಯನ್ನು ಕಾಣಬಹುದು. ಹಿಂದೆ ಭೀಕರ ಬರಗಾಲ ಎದುರಾಗಿ ಭೂಮಂಡಲವೆಲ್ಲ ಬರಡಾಗಿ, ಜನರೆಲ್ಲ ಹಾಹಾಕಾರದಿಂದ ಕಂಗೆಟ್ಟು ಹೋಗುತ್ತಾರೆ. ತಿನ್ನಲು ಅನ್ನಾಹಾರವಿಲ್ಲದೆ ಜಗತ್ತೆ ನಾಶವಾಗುವ ಸ್ಥಿತಿಯನ್ನು ತಲುಪುತ್ತದೆ. ಆಗ ತ್ರಿಮೂರ್ತಿಗಳು ಜಗನ್ಮಾತೆಯನ್ನು ಕೇಳಿಕೊಂಡಾಗ ಆದಿಶಕ್ತಿಯು ತನ್ನ ದೇಹದಿಂದ ಹಸಿರಿನಿಂದ ಕಂಗೊಳಿಸುವ ಹಸಿ ತರಕಾರಿಗಳನ್ನು ಸೃಜಿಸಿದಳಂತೆ. ಹಾಗೇ ಭೂಮಂಡಲವೆಲ್ಲ ಹಸಿರಾಗಿ, ಅಪಾರ ಪ್ರಮಾಣದಲ್ಲಿ ಭೂಮಿಗೆ ಸಮೃದ್ಧಿ ಉಂಟಾಯಿತು. ಹೀಗೆ ತನ್ನ ದೇಹದಿಂದ ಶಾಕಾಹಾರವನ್ನು ಸೃಜಿಸಿ ಜನರನ್ನು ಕಾಪಾಡಿದ ಜಗನ್ಮಾತೆ ಪಾರ್ವತಿದೇವಿ ಶ್ರೀ ಶಾಕಾಂಬರಿ ಎಂದು ಪ್ರಖ್ಯಾತಳಾದಳು.

          ಹೀಗೆ ದುಷ್ಟ ಸಂಹಾರರೂಪವಾಗಿ ಬಂದದೇವಿ ಅಷ್ಟಭುಜೆಯಾಗಿ ಖಡ್ಗ, ಗಂಟೆ ತ್ರಿಶೂಲ, ಲಿಪಿ, ಡಮರು, ಡಾಲು, ರುಂಡ, ಅಮೃತಪಾತ್ರೆ ಹಿಡಿದು, ಸಿಂಹವಾಹಿನಿಯಾಗಿರುವ ಮೂರ್ತಿಯೂ ಸುಂದರವಾಗಿ ಕಂಗೊಳಿಸುತ್ತದೆ. ದೇವಿ ಮೂರು ರೂಪದಲ್ಲಿ ಅಂದರೆ ಕಾಳಿ, ಲಕ್ಷ್ಮೀ ಹಾಗೂ ಸರಸ್ವತೀ ರೂಪದಲ್ಲಿ ಜನರನ್ನು ಸದಾ ಪೊರೆಯುತ್ತಾಳೆ. ಇಲ್ಲಿ ಪ್ರತೀ ವರ್ಷ ಪುಷ್ಯ ಮಾಸದ ಅಷ್ಟಮಿಯಂದು ಪ್ರಾರಂಭವಾಗಿ ಪೂರ್ಣಿಮೆಯಂದು(ಬನದ ಪೂರ್ಣಿಮೆ) ರಥೋತ್ಸವವು ಮುಕ್ತಾಯವಾಗುತ್ತದೆ. ದೇವಿಗೆ ಬಿಲ್ವಾರ್ಚನೆ, ದೀಪಾರಾಧನೆಗಳು ಹಾಗೂ ಇನ್ನಿತರ ವಿಶೇಷ ಸೇವೆಗಳು ನಡೆಯುತ್ತದೆ. ಬನದ ಹುಣ್ಣಿಮೆಯ(Banada Hunnime) ದಿನ ದೇವಿಯ ವಿಜೃಂಭಣೆಯ ರಥೋತ್ಸವವು ನಡೆಯುತ್ತದೆ. ಹಾಗೇ ಶುದ್ಧ ಚತುರ್ದಶಿಯಂದು ಶ್ರೀ ಶಾಕಾಂಬರಿ ದೇವಿಯ ಪಲ್ಲೇದ(ಪಲ್ಯ) ಹಬ್ಬ ಆಚರಣೆ ಮಾಡುತ್ತಾರೆ. ಆ ದಿವಸ 108 ಬಗೆಯ ಪಲ್ಲೆದ(ಪಲ್ಯ) ನೈವೇಧ್ಯ ಮಾಡಿ ಅಮ್ಮನವರಿಗೆ ಅರ್ಪಣೆ ಮಾಡಿ ಭಕ್ತರು ಪುನೀತರಾಗುತ್ತಾರೆ.

          ಹೀಗೆ ಶಂಕರಪ್ರಿಯೇ ಬನಶಂಕರಿಯನ್ನು ರಾಹುಗ್ರಹದ ಪ್ರಿಯ ದೇವತೆಯೆಂದು ಹೇಳಲಾಗುತ್ತದೆ. ಆ ಕಾರಣದಿಂದ ರಾಹುಕಾಲದಲ್ಲಿ ಶ್ರೀ ಅಮ್ಮನವರಿಗೆ ಲಿಂಬೆಹಣ್ಣಿನ ದೀಪವನ್ನು ಬೆಳಗಿದರೆ ರಾಹುದೋಷ ನಿವಾರಣೆಯಾಗುತ್ತದೆ. ಹೀಗೆ ಜಗನ್ಮಾತೆ ಸರ್ಪದೋಷವನ್ನು ಕಳೆಯುವ ಮಾತೆಯಾಗಿ ಜಗವನ್ನು ರಕ್ಷಿಸುವ ಬನದ ದೇವಿ ಶಂಕರಿಯನ್ನು ಭಕ್ತಿಯಿಂದ ಆರಾಧಿಸಿ, ಪೂಜಿಸೋಣ. ಬನದದೇವಿ(ವನದುರ್ಗಾ) ಯನ್ನು ಕಂಡು ಪುನೀತರಾಗೋಣ. ಪರಶಿವನರಸಿಯ ಅನುಗ್ರಹಕ್ಕೆ ಪಾತ್ರರಾಗೋಣ.



ವಿಳಾಸ :-

ಶ್ರೀ ಬನಶಂಕರಿ ದೇವಸ್ಥಾನ,

ಬಾದಾಮಿ, ಬಾಗಲಕೋಟೆ ಜಿಲ್ಲೆ ||



ದಾರಿಯ ವಿವರ :-

1.Bangalore-Chitradurga-Hospet-Ilkal-Hungud-Amingarh-Aihole-Pattadakal-Badami-Banashankari
2.Bangalore-Chitradurga-Haveri-Gadag-Ron-Banashankari
3.Belgaum-Ramdurg-Kalgeri-Badami-Banashankari
4.Dharwar-Hubli-Navalgund-Nargund-Badami-Banashankari