Sri Mookambika temple, Kolluru, Kundapura –tq, Udupi- dt.
ಶ್ರೀ ಮೂಕಾಂಬಿಕಾ ಅಮ್ಮನವರ ದೇವಸ್ಥಾನ, ಕೊಲ್ಲೂರು, ಕುಂದಾಪುರ ತಾ|| ಉಡುಪಿ-ಜಿ||
____________________________________________________________________
ಶ್ರೀ ಮೂಕಾಂಬಿಕಾ ಅಮ್ಮನವರ ದೇವಸ್ಥಾನ, ಕೊಲ್ಲೂರು, ಕುಂದಾಪುರ ತಾ|| ಉಡುಪಿ-ಜಿ||
____________________________________________________________________
|| ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೆ, ಶರಣ್ಯೇ ತ್ರಯಂಭಿಕೆ ದೇವಿ ನಾರಾಯಣಿ ನಮೋಸ್ತುತೆ ||
ಶ್ರೀ
ಮೂಕಾಂಬಿಕೆ ಅಮ್ಮನವರ ಶಕ್ತಿ, ಪ್ರೀತಿಯ ಬಗ್ಗೆ ಜಗತ್ತಿನಲ್ಲಿ ತಿಳಿಯದವರೇ ಇಲ್ಲಾ ಎಂದರೂ ತಪ್ಪಾಗಲಾರದು.
ಈ ಮಹಾತಾಯಿ ಆದಿಪರಾಶಕ್ತಿಯಾಗಿ ನಮ್ಮೇಲ್ಲರನ್ನು ಪೊರೆದು ಕಾಯುತ್ತಾಳೆ. ಇವಳ ಶಕ್ತಿ ಅಪಾರ. ಇವಳ ಮಹಿಮೆ
ಅನನ್ಯ. ಒಟ್ಟಾರೆಯಾಗಿ ಈ ಆದಿಶಕ್ತಿಯ ಮಹಿಮೆಯನ್ನು ವರ್ಣಿಸಲು ಅಸಾಧ್ಯವೆ ಸರಿ. ಅಮ್ಮಾ ಎಂದೋಡೆ ಬಂದು
ಪೊರೆವಳು ಮಹಾದೇವರ ದೇವಿ ಅಂಬಿಕೆ ನಮ್ಮೆಲ್ಲರ ಮೂಕಾಂಬಿಕೆ. ದುರುಳ ಮೂಕನ ಕೊಂದು ಅಂಬಿಕೆ ಮೂಕಾಂಬಿಕೆಯಾಗಿ
ನಿಂದು ನಮ್ಮೇಲ್ಲರ ಕಾಯಲು ನೆಲೆಯಾದಳು ಕೊಲ್ಲೂರಿಗೆ ಬಂದು.
![]() |
Uthsava Moorthy ಉತ್ಸವ ಮೂರ್ತಿ |
ಅಮ್ಮನ
ಮಹಿಮೆ ವರ್ಣಿಸುತ್ತಾ ಹೋದಂತೆ ಅವರ್ಣನೀಯವಾಗಿ ಹೋಗುತ್ತದೆ. ಮೂಕಾಂಬಿಕೆಯನ್ನು ಭಕ್ತಿಯಿಂದ ಪೂಜಿಸಿ
ಆರಾಧಿಸುವ ಬನ್ನಿ. ನಮ್ಮ-ನಿಮ್ಮೆಲ್ಲರ ಅಮ್ಮನಾಗಿ ಕಾಯುತ್ತಾಳೆ. ಅಮ್ಮನ ಮುದ್ದು ನಗು ನಮ್ಮನ್ನೆ ಮಣಿಸಬಲ್ಲದು.
ಈ ಮಹಾತಾಯಿ ಇಲ್ಲಿ ನೆಲೆಯಾದ ಬಗ್ಗೆ ಪುರಾಣಗಳಲ್ಲಿ ತಿಳಿಸುತ್ತದೆ.
ಶ್ರೀ
ದೇವಿಯು ದುರುಳ ಮೂಕಾಸುರನನ್ನು ವಧೆಗೈಯ್ಯಲು ಆದಿಶಕ್ತಿಯಾಗಿ, ಅಯೋನಿಜೆಯಾಗಿ ಆವಿರ್ಭವಿಸಿದಳು. ಇವಳ
ಆ ಭವ್ಯ ತೆಜೋಮಯ ರಾಶಿಗೆ ತ್ರಿಮೂರ್ತಿಗಳೇ ಬೆರಗಾಗಿ ಹೊದರು. ದುರುಳ ಮೂಕನು ಮೊದಲು ಕಂಹಾಸುರನೆಂಬ
ಹೆಸರನ್ನು ಹೊಂದಿದ್ದು ಒಮ್ಮೆ ಸಾವಿಲ್ಲದಂತೆ ವರ ಪಡೆಯುವ
ಉದ್ದೇಶದಿಂದ ತಪಸ್ಸು ಮಾಡಲಾರಂಭಿಸಿದನು. ಅವನ ತಪಸ್ಸು ಭಂಗ ಮಾಡಲು ಇಂದ್ರಾದಿ ದೇವತೆಗಳು
ಪ್ರಯತ್ನ ಪಟ್ಟರು ಅದು ಸಾದ್ಯವಾಗಲಿಲ್ಲ. ನಂತರ ದೇವತೆಗಳು ಸೋತು ಈ ವಿಷಯವಾಗಿ ದೇವಾನುದೇವತೆಗಳೊಡನೆ
ಚರ್ಚಿಸಿ ಆಧಿಶಕ್ತಿಯಲ್ಲಿ ಕೇಳಿದಾಗ ವಾಗ್ದೇವಿಯಾದ ಅಂಬಿಕೆ ಕಂಹಾಸುರನು ವರವನ್ನು ಕೇಳುವ ಸಂದರ್ಭದಲ್ಲಿ
ಅವನ ನಾಲಗೆಯ
ಮೇಲೆ ಅಡ್ಡ ನಿಂತಳು. ಆ ವೇಳೆಯಲ್ಲಿ ಕಂಹಾಸುರ ಮೂಕನಾದನು. ನಂತರ ಶುಕ್ರಾಚಾರ್ಯರು ತಮ್ಮ
ತಪದ ಬಲದಿಂದ ಮೂಕನಾದ ಕಂಹಾಸುರನಿಗೆ ಮಾತು ಕೊಟ್ಟು ‘ಮೂಕಾಸುರ’ ನೆಂದು ನಾಮಾಂಕಿತ ಮಾಡಿದರು.
ಈ
ರೀತಿಯಾಗಿ ಕಂಹಾಸುರನು ಮೂಕಾಸುರನಾಗಿ ಮರೆಯುತ್ತಾ ಮದಪ್ರಮತ್ತನಾಗಿ ಋಷಿ ಮುನಿಗಳನ್ನು ಹಾಗೂ ಸಾತ್ತ್ವಿಕರನ್ನು
ಹಿಂಸಿಸ ತೊಡಗಿದನು. ಯಜ್ಞ-ಯಾಗಾದಿಗಳನ್ನು ನಾಶ ಮಾಡತೊಡಗಿದನು. ಹೀಗೆ ಇದರಿಂದ ದೇವತೆಗಳಿಗೆ ಸೇರಬೇಕಾದ
ಹವಿಸ್ಸು ದೇವತೆಗಳಿಗೆ ದೊರೆಯದಂತೆ ಮಾಡಿದನು. ಇದೇ ರೀತಿ ಸಂಪೂರ್ಣವಾಗಿ ಜನರನ್ನು ಹಿಂಸಿಸಿ ತನ್ನನ್ನೇ
ಪೂಜಿಸಬೇಕೆಂದು ಅಣತಿ ಮಾಡಿದನು. ಅಂತೆ ಆದಿಶಕ್ತಿ ಶ್ರೀ ದೇವಿಯನ್ನು ಭಕ್ತಿ ಭಾವದಿಂದ ಪೂಜಿಸುತ್ತಿದ್ದವಳನ್ನು
ಮೋಹಿಸಿ ಮಧುವೆಯಾದನು. ಅದೇ ರೀತಿ ಅವಳು ಪರಮ ದೇವಿ ಭಕ್ತೆಯಾಗಿದ್ದಳು. ಮೂಕಾಸುರನಿಗೆ ಎಷ್ಟೋ ಭಾರಿ
ದೈವ ನಿಂದನೆ ಮಾಡಬಾರದು ಎಂದು ಎಷ್ಟು ಹೇಳಿದರು ಕೇಳುವ ಭಾವದಲ್ಲಿ ಮೂಕನಿರಲಿಲ್ಲ. ಅಂತೆ ತನ್ನ ಪತ್ನಿಗೆ
ದೇವಿಯನ್ನು ಪೂಜಿಸಲು ಅನುವು ಮಾಡಿಕೊಟ್ಟಿದ್ದನು.
![]() |
Sri Mookambika Swagatha Gopuram. |
ಹೀಗೆ
ಕಾಲ ಉರುಳುತ್ತಾ ದೇವತೆಗಳೆಲ್ಲಾ ಈ ಮೂಕನ ಉಪಟಳವನ್ನು ತಾಳಲಾರದೆ ‘ತ್ರಿಮೂರ್ತಿ’ ಗಳಿಗೆ ಮೊರೆ ಹೋದರು.
ಆದರೆ ಮೂಕನು ಅಯೋನಿಜೆಯಿಂದ ನನಗೆ ಸಾವು ಬರಬೇಕು ಎಂದು ವರ ಪಡೆದ ಕಾರಣದಿಂದ ತ್ರಿಮೂರ್ತಿಗಳೂ ಕೂಡಾ
ಆದಿಶಕ್ತಿಯಿಂದ ಜನಿತರಾದ ಕಾರಣ ಮೂಕನನ್ನು ತ್ರಿಮೂರ್ತಿಗಳೂ ಕೂಡಾ ಏನು ಮಾಡಲಾಗದೆ ಆದಿಪರಾಶಕ್ತಿಯಾದ
ಅಂಬಿಕೆಯನ್ನು ಭಕ್ತಿಭಾವದಿಂದ ತ್ರಿಮೂರ್ತಿಗಳೊಡಗೂಡಿ ದೇವಾನುದೇವತೆಗಳು ಏಕಚಿತ್ತದಿಂದ ಧ್ಯಾನಿಸಿದರು.
ಹರಿ-ಹರ ಬ್ರಹ್ಮಾದಿಗಳ ಮಾತೆಯಾದ ‘ಅಂಬಿಕೆ’ ಯು ಪ್ರಸನ್ನವದನಳಾಗಿ ದೇವತೆಗಳಿಗೆ ಅಭಯವನ್ನು ಇಟ್ಟಳು.
ಹೀಗೆ ಅಯೋನಿಜೆಯಾದ ಆದಿಶಕ್ತಿ ಮೂಕನನ್ನು ವಧಿಸಲು ಎಲ್ಲಾ ದೇವಾನು ದೇವತೆಗಳ ಶಕ್ತಿ ಏಕಿಕರಿಸಿಕೊಂಡು ಮೂಕನ ಧಮನಕ್ಕೆ ನಿಂತಳು.
ಹೀಗೆ
ಇದೇ ವೇಳೆಯಲ್ಲಿ ಈ ವೀಚಾರವನ್ನು ತಿಳಿದ ಮೂಕನ ಪತ್ನಿ ಅಂಬಿಕೆಯನ್ನು ತನ್ನ ಮುತ್ತೈದೆ ಸೌಭಾಗ್ಯಕ್ಕಾಗಿ
ಕಣ್ನೀರಿಟ್ಟು ಬೇಡಿದಾಗ ಅಂಬಿಕೆ ಅಂಬಿಕೆ ಮೂಕನ ಪತ್ನಿಯನ್ನು ತನ್ನಲ್ಲಿ ಐಕ್ಯವಾಗಿಸಿಕೊಂಡಳು. ನಂತರ
ಮೂಕನೊಂದಿಗೆ ಘೋರ ಯುದ್ದವನ್ನು ಮಾಡಿ ಮೂಕನ ಶಿರ ಛೇದನಗೈದು ದೇವಾನು ದೇವತೆಗಳ ಭಾರವನ್ನು ನೀಗಿಸಿದಳು.
ಭೂಮಿಯ ಭಾರವನ್ನು ಇಳಿಸಿದ ಅಂಬಿಕೆಗೆ ದೇವಲೋಕದಿಂದ ದೇವತೆಗಳು ಹೂಮಳೆ ಗೈದರು. ಅಮ್ಮನನ್ನು ಭಕ್ತಿಯಿಂದ
ತ್ರಿಮೂರ್ತಿಗಳು ಸ್ತುತಿಸಿದರು. ಅದೇ ರೀತಿ ದುರುಳ ಮೂಕನನ್ನು ಕೊಂದ ‘ಅಂಬಿಕೆ’ ಯು ‘ಮೂಕಾಂಬಿಕೆ’
ಯಾದಳು. ಮೂಕನು ಸಾಯುವ ಕೊನೆಯ ಗಳಿಗೆಯಲ್ಲಿ ಅಮ್ಮ ನನ್ನ ಹೆಸರು ನಿನ್ನೋಂದಿಗೆ ಉಳಿಯಲಿ ಎಂದು ಬೇಡಿದ
ಕಾರಣದಿಂದ ಮಹಾದೇವಿ ಮೂಕನಿಗೆ ನಿನ್ನ ಹೆಸರು ನನ್ನೋಂದಿಗೆ ಅನ್ವರ್ಥವಾಗಿ ನಾನು ಮುಂದೆ ‘ಮೂಕಾಂಬಿಕೆ’
ಆಗುತ್ತನೆ ಎಂದು ಹೇಳಿ ನೀನು ಮುಂದೆ ‘ಬ್ರಹ್ಮಲಿಂಗೇಶ್ವರ’ ನಾಗಿ ಚಿತ್ತೂರಿನಲ್ಲಿ ನೆಲೆಸು ಎಂದಳು.
ಅದೇ ರೀತಿಯಾಗಿ ಮೂಕಾಸುರನು ‘ಬ್ರಹ್ಮಲಿಂಗೇಶ್ವರ’ ನಾಗಿ ಮಾರಣಕಟ್ಟೆಯಲ್ಲಿ ನೆಲೆನಿಂದು ಭಕ್ತರನ್ನು
ಪೊರವ ದೇವನಾಗಿದ್ದಾನೆ. ಅಂಬಿಕೆಯ ಮುದ್ದಿನ ಕುವರನಾಗಿ ಮೆರೆಯುತಿಹನು.
![]() |
Sri Mookambika Temple (ಶ್ರೀ ಅಮ್ಮನ ದೇವಸ್ಥಾನದ ನೋಟ) |
ಈ
ಸ್ಥಳದಲ್ಲಿ ‘ಮೂಕನ’ ಮರಣವಾದ ಸ್ಥಳ ದೊಡ್ಡದಾದ ಒಂದು ಮರವಿದ್ದು ಅಲ್ಲಿ ದೊಡ್ಡ ಕಟ್ಟೆ ಇದ್ದು ಅಲ್ಲಿಯೆ
ಮೂಕನ ಮರಣವಾಗಿ ಅದು ಕಾಲಾನಂತರ ‘ಮಾರಣಕಟ್ಟೆ’ ಎಂದು ಪ್ರಸಿದ್ದಿ ಪಡೆಯಿತು. ಹೀಗೆ ಮೂಕಾಂಬಿಕೆಯು ಇಂದು
ದೇಶ ವಿದೇಶದಲ್ಲಿ ಪ್ರಖ್ಯಾತಿಯನ್ನು ಹೊಂದಿದ ಶಕ್ತಿ ದೇವತೆಯಾಗಿದ್ದಾಳೆ. ಇಲ್ಲಿ ಸುವರ್ಣ ರೇಖೆ ಇರುವ
ಉದ್ಬವ ಲಿಂಗವಿದ್ದು ಅದರಲ್ಲಿ ಒಂದು ಭಾಗದಲ್ಲಿ ಅಂಬಿಕೆ ಮತ್ತು ಇನ್ನೊಂದು ಭಾಗದಲ್ಲಿ ತ್ರಿಮೂರ್ತಿಗಳು
ನೆಲೆಸಿದ್ದಾರೆ ಎಂಬುದಾಗಿ ಹೇಳಲಾಗುತ್ತದೆ.
ಹೀಗೆ
ಅಂಬಿಕೆ ಸರ್ವ ದೇನಾನು ದೇವತೆಗಳೊಡನೆ ಕೊಲ್ಲೂರಿನಲ್ಲಿ ಕೋಲ ಮಹರ್ಷಿಯ ಅಪೇಕ್ಷೇಯಂತೆ ನೆಲೆನಿಂತಳು.
ಇಲ್ಲಿ ಮೂಕಾಂಬಿಕೆಯು ಪ್ರದಾನ ದೇವತೆಯಾಗಿದ್ದಾಳೆ. ಅವಳೊಂದಿಗೆ ಹೊರ ಪ್ರಕಾರದಲ್ಲಿ ವೀರಭದ್ರ ತಾಯಿಯ
ಮಗನಾಗಿ ಕ್ಷೇತ್ರಕ್ಕೆ ರಕ್ಷಣೆಯನ್ನು ನೀಡುತ್ತಾ ಇದ್ದಾನೆ. ಅಂತೆ ಅಮ್ಮನ ಗರ್ಭ ಗುಡಿಯಲ್ಲಿ ತಾಯಿಯ
ಮುದ್ದು ಕುವರ ‘ಮಹಾಗಣಪತಿ’ ಉತ್ತರಕ್ಕೆ ಮುಕ ಮಾಡಿ ಕುಳಿತಿದ್ದಾನೆ. ಹೊರ ಪ್ರಕಾರದಲ್ಲಿ ಸ್ಕಂದ, ಪರಶಿವನ
ಲಿಂಗ, ಆಂಜನೇಯ, ಕೃಷ್ಣ, ನಂದಿ ಹೀಗೆ ಎಲ್ಲಾರಿ ನೆಲೆ ನಿಂತು ಭಕ್ತರಿಗೆ ಅಭಯದಾಯಕರಾಗಿದ್ದಾರೆ.
ಇಲ್ಲಿ
ಹರಿಯುವ ಸೌಪರ್ಣಿಕೆ ಅಮ್ಮನ ಸ್ಥಳದಲ್ಲಿ ಪವಿತ್ರ ಪಾವನೆಯಾಗಿ ಪಾಪನಾಶಿನಿಯಾಗಿದ್ದಾಳೆ. ಇಲ್ಲಿ ಕೊಡಚಾದ್ರಿಯಲ್ಲಿ
ಶಂಕರಾಚಾರ್ಯರರು ತಪಸ್ಸು ಮಾಡಿದ ಪುಣ್ಯ ಸ್ಥಳ. ಅಲ್ಲದೇ ಮೂಕಾಂಬಿಕೆಯನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ
‘ಶ್ರೀ ಚಕ್ರ’ ವನ್ನು ಪ್ರತಿಷ್ಠಾಪಿಸಲಾಗಿದೆ. ಇದು ಅತ್ಯಂತ ಶಕ್ತಿದಾಯಕವಾಗಿದೆ. ಪ್ರಶಾಂತವಾಗಿ ಹರಿಯುವ
ಸೌಪರ್ಣಿಕಾ ನದಿಯ ತೀರದಲ್ಲಿರುವ ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಪಡೆದರೆ ಬಾಳು ಧನ್ಯ ಎಂಬುದು ಹಲವು
ವರ್ಷಗಳಿಂದ ಮೂಡಿಬಂದಿರುವ ನಂಬಿಕೆ.
ಕೊಡಚಾದ್ರಿ
ಪರ್ವತದ ಸುಂದರ ನೋಟ, ದಟ್ಟವಾದ ಕಾನನದ ನಡುವೆ ನಿಸರ್ಗದ
ರಮಣೀಯ ಸುಂದರ ಪರಿಸರದ ಕೊಲ್ಲೂರಿನಲ್ಲಿ ನೆಲೆಸಿಹ ಮೂಕಾಂಬಿಕೆ,ದುಷ್ಟಶಿಕ್ಷಣೆ ಶಿಷ್ಟರಕ್ಷಣೆಗಾಗಿ
ಅವತಾರವೆತ್ತಿದ ಶಕ್ತಿ ದೇವತೆ. ಚತುರ್ಭುಜಳಾಗಿ ಶಂಖ, ಚಕ್ರ, ಅಭಯ ಮತ್ತು ವರದ ಮುದ್ರೆಯಲ್ಲಿ ಪದ್ಮಾಸನಾರೂಢಳಾಗಿರುವ
ಪಂಚಲೋಹದ ಸುಂದರ ಪ್ರತಿಮೆಯ ರೂಪದಲ್ಲಿರುವ ತಾಯಿಯನ್ನು ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರು ಎಂದು
ಹಿರೀಕರು ಹೇಳುತ್ತಾರೆ.
ಈ
ದೇವಿಯ ಪ್ರತಿಷ್ಠಾಪಿಸುವ ಮುನ್ನ ಇಲ್ಲಿ ಜ್ಯೋತಿರ್ಲಿಂಗವಿತ್ತು. ಕೋಲ ಮಹರ್ಷಿಗಳು ತಪವನ್ನಾಚರಿಸುತ್ತಿದ್ದ
ಈ ಸ್ಥಳದಲ್ಲಿ ಈ ಲಿಂಗ ಉದ್ಭವಿಸಿತಂತೆ. ಇಂದೂ ದೇವಾಲಯದ ಮೂರ್ತಿಯ ಎದುರು ಇರುವ ನೆಲ ಅಂತಸ್ತಿನ ಅನತಿ
ದೂರದಲ್ಲಿ ಈ ಪುರಾತನ ಜೋತಿರ್ಲಿಂಗ ದರ್ಶನ ಮಾಡಬಹುದು. ಈ ಜ್ಯೋತಿರ್ಲಿಂಗವು ಎರಡು ಅಸಮಾನ ಭಾಗವಾಗಿ
ಬಂಗಾರದ ರೇಖೆಯಿಂದ ವಿಭಜಿಸಲ್ಪಟ್ಟಿದೆ. ಈ ರೇಖೆಯು ಸೂರ್ಯ ಕಿರಣದಲ್ಲಿ ಗೋಚರಿಸುತ್ತದೆ. ಭಕ್ತರಿಗೆ
ಕನ್ನಡಿಯ ಸಹಾಯದಿಂದ ರೇಖೆಯ ದರ್ಶನ ಮಾಡಿಸಲಾಗುತ್ತದೆ. ಈ ದೇವಾಲಯದ ಬಗ್ಗೆ ಸ್ಕಂದ ಪುರಾಣದಲ್ಲಿ ಕೂಡ
ಉಲ್ಲೇಖವಿದೆ. ಇದು ದೇಗುಲದ ಪ್ರಾಚೀನತೆಯನ್ನು ಸೂಚಿಸುತ್ತದೆ.
ಪೂಜಾ ಕೈಂಕರ್ಯ: ಇಲ್ಲಿ ಪ್ರತಿನಿತ್ಯ
ಬೆಳಗ್ಗೆ 5 ಗಂಟೆಗೇ ಪೂಜಾಕೈಂಕರ್ಯಗಳು ಪ್ರಾರಂಭವಾಗುತ್ತವೆ. ಇದಕ್ಕೆ ಉದಯಕಾಲದ ಪೂಜೆ ಎನ್ನುತ್ತಾರೆ.
ಮಧ್ಯಾಹ್ನದ ಪೂಜೆಯ ಬಳಿಕ ರಾತ್ರಿ ಏಳು ಗಂಟೆಗೆ ಪ್ರದೋಷ ಪೂಜೆಯೂ ಜರುಗುತ್ತದೆ. ಈ ದೇವಿಯ ದರ್ಶನಕ್ಕೆ
ಬರುವ ಭಕ್ತರ ಸಂಖ್ಯೆ ಅಗಣಿತ. ಕನ್ನಡಿಗರಿಗಿಂತ ಈ ದೇಗುಲಕ್ಕೆ ತಮಿಳುನಾಡು ಹಾಗೂ ಕೇರಳದಿಂದಲೇ ಹೆಚ್ಚು
ಭಕ್ತರು ಆಗಮಿಸುತ್ತಾರೆ. ಮಂಗಳವಾರ ಹಾಗೂ ಶುಕ್ರವಾರಗಳಂದು ಇಲ್ಲಿ ಸಹಸ್ರಾರು ಜನ ದೇವಿಯ ದರ್ಶನ ಪಡೆಯುತ್ತಾರೆ.
ತಮಿಳುನಾಡಿನ
ಮಾಜಿ ಮುಖ್ಯಮಂತ್ರಿ ದಿವಂಗತ ಎಂಜಿಆರ್ ದೇವಿಗೆ ಒಂದು ಕಿಲೋಗ್ರಾಂ ತೂಕದ ಚಿನ್ನದ ಖಡ್ಗ ಅರ್ಪಿಸಿದ್ದಾರೆ.
ಪ್ರಖ್ಯಾತ ಗಾಯಕ ಏಸುದಾಸ್ ಪ್ರತಿವರ್ಷ ತಮ್ಮ ಹುಟ್ಟುಹಬ್ಬದ ದಿನ ಇಲ್ಲಿಗೆ ಬಂದು ತಾಯಿಗೆ ಸಂಗೀತಾರಾಧನೆ
ಮಾಡುತ್ತಾರೆ. ಈ ದೇಗುಲದ ಪೂಜಾ ವಿಗಳಲ್ಲಿ ಸಲಾಂ ಪೂಜೆ ಕೂಡ ನಡೆಯುತ್ತದೆ. ದೇವಿಯ ಭಕ್ತರಾಗಿದ್ದ ಟಿಪ್ಪೂಸುಲ್ತಾನರ
ಸ್ಮರಣಾರ್ಥ ಈ ಪೂಜೆ ನಡೆಯುತ್ತದೆ.
ಹಬ್ಬ ಉತ್ಸವ : ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಕೊಲ್ಲೂರಿನಲ್ಲಿ ರಥೋತ್ಸವ
ಜರುಗುತ್ತದೆ. ಉತ್ತರಾ ನಕ್ಷತ್ರ ಇರುವ ದಿನದಿಂದ ಧ್ವಜಾರೋಹಣದೊಂದಿಗೆ ಆರಂಭವಾಗುವ 9ದಿನದ ಕಾರ್ಯಕ್ರಮಗಳು
ಮೂಲಾನಕ್ಷತ್ರದವರೆಗೆ ನಡೆಯುತ್ತವೆ. ಜ್ಯೇಷ್ಠ ಮಾಸದ ಅಷ್ಟಮಿ ದಿನ ಹಾಗೂ ಹಬ್ಬ ಹರಿದಿನಗಳಂದು ದೇವಿಗೆ
ವಿಶೇಷ ಪೂಜೆಗಳು ಜರುಗುತ್ತವೆ. ನವರಾತ್ರಿಯ ಕಾಲದಲ್ಲಿ ನವಾಕ್ಷರಿ ಕಳಶ, ಚಂಡಿಕಾಹೋಮಾ, ರಥೋತ್ಸವ,
ಪುರ್ಣಕುಂಭಾ ಅಭಿಷೇಕ ಮೊದಲಾದವು ಜರುಗುತ್ತವೆ. ನವೆಂಬರ್ - ಡಿಸೆಂಬರ್ ತಿಂಗಳಿನಲ್ಲಿ ವನಭೋಜನ ಎಂಬ
ವಿಶಿಷ್ಟ ಆಚರಣೆಯೂ ನಡೆಯುತ್ತದೆ. ಇದಲ್ಲದೆ ಅಷ್ಟಬಂಧ ಬ್ರಹ್ಮ ಕಲಶೋತ್ಸವವೂ ನಡೆಯುತ್ತದೆ.
ಪ್ರಯಾಣ : ಜಗನ್ಮಾತೃಕೆಯಾದ ಮೂಕಾಂಬಿಕೆಯು ನೆಲೆಸಿಹ
ಈ ಪುಣ್ಯಭೂಮಿ ಮಂಗಳೂರಿನಿಂದ ಕೇವಲ 14೦ ಕಿ.ಮೀಟರ್ ದೂರದಲ್ಲಿದೆ. ಮಂಗಳೂರಿನಿಂದಿಲ್ಲಿಗೆ ಉಡುಪಿ,
ಕುಂದಾಪುರ ಮಾರ್ಗದಲ್ಲಿ ಮೂರೂವರೆ ಗಂಟೆಗಳ ಪ್ರಯಾಣ. ಬೆಂಗಳೂರಿನಿಂದ ಕೊಲ್ಲೂರಿಗೆ ನೇರ ಬಸ್ ಸೌಕರ್ಯವೂ
ಉಂಟು. ಮಂಗಳೂರಿನವರೆಗೆ ವಿಮಾನ ಹಾಗೂ ರೈಲು ಸೌಕರ್ಯವೂ ಇದೆ.
ವಸತಿ ಸೌಕರ್ಯ : ದೇವಿಯ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಾಲಯದ
ಆಡಳಿತ ಅತಿಥಿಗೃಹ ನಿರ್ಮಿಸಿದೆ,ಸೌಪರ್ಣಿಕಾ ಅತಿಥಿಗೃಹ ಸಂಕೀರ್ಣ, ಗೊಯಂಕಾ ಅತಿಥಿಗೃಹ, ಶೃಂಗೇರಿಯ
ಶಂಕರಕೃಪಾ ಅತಿಥಿಗೃಹ, ಶ್ರೀರಾಮಕೃಷ್ಣಾಶ್ರಮದ ಅತಿಥಿಗೃಹ,
ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಬಂಗಲೆ ಹಾಗೂ ಹಲವಾರು ವಸತಿಗೃಹಗಳೂ ಇಲ್ಲಿವೆ. ಇಲ್ಲಿಂದ
ಕುಂದಾಪುರ ಬಳಿಯ ಆನೇಗುಡ್ಡೆ ಗಣೇಶನ ದರ್ಶನ ಮಾಡಿ, ಅಲ್ಲಿಂದ ಕೋಟೇಶ್ವರದಲ್ಲಿ ಶಿವನನ್ನು ಕಂಡು, ಶ್ರೀಕೃಷ್ಣನ
ಉಡುಪಿಯಲ್ಲಿ ಕಡಗೋಲು ಕೃಷ್ಣನ ಕಂಡು ಮಲ್ಪೆ, ಸೇಂಟ್‌ಮೇರಿ ದ್ವೀಪಗಳಿಗೂ ಹೋಗಿಬರಬಹುದು.
ದಾರಿಯ ವಿವರ : ಉಡುಪಿ, ಕುಂದಾಪುರದಿಂದ ನೇರವಾಗಿ ಕೊಲ್ಲೂರಿಗೆ
ಬಸ್ಸಿನ ವ್ಯವಸ್ಥೆಯಿದೆ.
ವಿಳಾಸ: ಕೊಲ್ಲೂರಿನ ಬಗ್ಗೆ ಹೆಚ್ಚಿನ ವಿವರಗಳಿಗೆ
ಕಾರ್ಯನಿರ್ವಾಹಕ ಅಧಿಕಾರಿಗಳು,
ಕಾರ್ಯನಿರ್ವಾಹಕ ಅಧಿಕಾರಿಗಳು,
ಶ್ರೀಮೂಕಾಂಬಿಕಾ
ದೇವಸ್ಥಾನ,
ಕೊಲ್ಲೂರು,
ಕರ್ನಾಟಕ - 576220