Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Shree Mahadevi Kunthi AmmanavaraTemple, Tallur, Kundapura Tq,
ಶ್ರೀ ಮಹಾದೇವಿ ಕುಂತಿ ಅಮ್ಮನವರ ದೇವಸ್ಥಾನ, ತಲ್ಲೂರು, ಕುಂದಾಪುರ ತಾಲೂಕು        ಕುಂದಾಪುರ ತಾಲೂಕಿನ ಹಲವಾರು ಶಕ್ತಿ ದೇವತೆಯ ಕ್ಷೇತ್ರಗಳ ಸಾಲಿನಲ್ಲಿ ಕುಂದಾಪುರದ ತಲ್ಲೂರು ಸಮೀಪದ ಶ್ರೀ ಮಹಾದೇವಿ ಕುಂತಿಯಮ್ಮನವರ ದೇವಸ್ಥಾನವು(Talluru Shree Mahadevi Kunthiyamma Temple) ಬಹಳ ಮಹತ್ವವನ್ನು ಹೊಂದಿರುವ ಕಾರಣೀಕ ಕ್ಷೇತ್ರವೆನ್ನಿಸುತ್ತದೆ. ಏಕೆಂದರೆ ಶಕ್ತಿದೇವತೆ ಮೂರು ರೂಪದಲ್ಲಿ ಜಗದಗಲ ವ್ಯಾಪಿತವಾಗಿದ್ದಾಳೆ. ದೇವಿ ಭಾಗವತದ(ದೇವಿ ಪುರಾಣ) ಪ್ರಕಾರ ತ್ರಿಶಕ್ತಿ ಸ್ವರೂಪಿಣಿ ಮೂಲ ರೂಪದಲ್ಲಿ ಪಾರ್ವತಿ ದೇವಿ ಪರಾಶಕ್ತಿಯಾದರೂ ತನ್ನದೇ ರಾಜಸ ರೂಪವಾದ ಮಹಾಲಕ್ಷ್ಮೀಯಾಗಿಯೂ, ಸಾತ್ವಿಕ ಸ್ವರೂಪವಾದ ಮಹಾಸರಸ್ವತೀಯಾಗಿಯೂ ಪ್ರಕಟವಾಗಿ ಹಲವಾರು ಕಡೆ, ಕೋಟ್ಯಾನುಕೋಟಿ ನಾಮದಿಂದ ಪೂಜಿಸಲ್ಪಡುತ್ತಾಳೆ. ಹೀಗೆ ಆದಿಮಾಯೆ ಸ್ವರೂಪಿಯಾದ ಮಹಾದೇವಿಯು ತಲ್ಲೂರು ಶ್ರೀ ಮಹಾದೇವಿ ಕುಂತಿಯಮ್ಮ ದೇವಸ್ಥಾನದಲ್ಲಿ ತನ್ನ ತಾಮಸ(ಕಾಳಿ), ರಾಜಸ(ಲಕ್ಷ್ಮೀ), ಸಾತ್ವಿಕ(ಸರಸ್ವತಿ) ಈ ಮೂರು ರೂಪಗಳಿಂದ ಪೂಜೆ ಪಡೆಯುತ್ತಿರುವುದು ವಿಶೇಷ. ಇಲ್ಲಿ ಮೂಲ ಸಾನ್ನಿಧ್ಯ ಹುತ್ತದಿಂದ ಆವೃತವಾಗಿದ್ದು ಅದರ ಮುಂದೆ ಅಮ್ಮನವರ ಮೂರು ಬಿಂಬಗಳನ್ನು ಪ್ರತಿಷ್ಠಾಪಿಸಲಾಗಿದೆ. ಕ್ರಮವಾಗಿ ಕಾಳಿ-ಲಕ್ಷ್ಮೀ-ಸರಸ್ವತೀ ದೇವಿಯರ ಬಿಂಬವು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ. 
         ಹಿಂದೆ ಕಾಷ್ಠದ ಬಿಂಬವಿದ್ದು ಕಾಲಕ್ರಮೇಣ ಶಿಲೆಯ ಬಿಂಬವನ್ನು ಪ್ರತಿಷ್ಠಾಪಿಸಿದ್ದಿರಬಹುದು. ಇಲ್ಲಿನ ಸ್ಥಳ ಪುರಾಣ ಪೌರಾಣಿಕ ಹಿನ್ನಲೆ ದೊರೆಯದೆ ಹೋದರೂ ಕೂಡಾ ಜನಜನಿತವಾದ ಕೆಲವೊಂದು ಹಿನ್ನಲೆಯಂತೆ ಇಲ್ಲಿ ದೇವಿ ನೆಲೆಸಿರುವ ಸ್ಥಳದಲ್ಲಿ ಗರ್ಭಗುಡಿಯಲ್ಲಿರುವ ದೊಡ್ಡದಾದ 'ಹುತ್ತ' ಇದ್ದು, ಕುಂದಾಪುರ ಆಡುನುಡಿಯಲ್ಲಿ 'ಹುಂತ' ಎಂಬುದಾಗಿಯೂ, ಮುಂದೆ ಹುಂತದಲ್ಲಿ ಕುಂತ ಅಮ್ಮ ಎಂಬ ಅನ್ವರ್ಥವನ್ನು ಪಡೆದು ಕಾಲಕ್ರಮೇಣ ಕುಂತ ಎಂಬುದು – ಕುಂತಿ(Kunthi) ಆಗಿರಬಹುದು ಎಂಬುದು ಪ್ರಾಜ್ಞರ ಸಹಮತ. ಅಲ್ಲದೇ ಮಾಂಡವ್ಯ ಋಷಿಯ ತಪಸ್ಸಿಗೆ ಮೆಚ್ಚಿದ ಶಿವಪಾರ್ವತಿಯರ ಅನುಗ್ರಹದಂತೆ ಅಮ್ಮನವರು ಇಲ್ಲಿ ತ್ರಿಶಕ್ತಿ ಸ್ವರೂಪದಲ್ಲಿ ನೆಲೆಸಿದಳು ಎಂಬುದು ಪ್ರತೀತಿ.
ಹೀಗೆ ವಿಶಿಷ್ಟ ಆಚರಣೆಯನ್ನು ಹೊಂದಿರುವ ಶ್ರೀ ಮಹಾದೇವಿ ಕುಂತಿಯಮ್ಮನ ದೇವಸ್ಥಾನವನ್ನು ಹಲವರು ಮಹಾಭಾರತದ 'ಕುಂತಿ' ಎಂಬುದಾಗಿ ಭಾವಿಸಿದ್ದಾರೆ. ಆದರೆ ಇದರ ಹಿಂದಿನ ಹಿನ್ನಲೆ ಬೇರೆಯೇ ಆಗಿದೆ ಎಂಬುದು ಕ್ಷೇತ್ರದ ಹಿನ್ನಲೆಯನ್ನು ಪರಿಶೀಲಿಸಿದಾಗ ತಿಳಿದುಬರುತ್ತದೆ. ಅಮ್ಮನವರ ಕಾರಣೀಕ ಅಪಾರ. ಇಲ್ಲಿ ಅಮ್ಮನವರಿಗೆ ಹಲವಾರು ವಿಶೇಷ ಸೇವೆಗಳು ನಡೆಯುತ್ತದೆ. ವಿಶೇಷ ದಿವಸಗಳಲ್ಲಿ ಅಂದರೆ ಸಂಕ್ರಮಣ, ನವರಾತ್ರಿ, ಮಕರ ಸಂಕ್ರಾಂತಿ ಇನ್ನಿತರ ಸಮಯದಲ್ಲಿ ವಿಶೇಷ ಪೂಜಾದಿಗಳು ನಡೆಯುತ್ತದೆ. ದೇವಿಗೆ ಕ್ಷೀರ ಪಾಯಸ ಅತೀ ಪ್ರೀಯವಂತೆ. ಜೀವನದಲ್ಲಿನ ಹಲವಾರು ಸಂಕಷ್ಟಗಳಿಗೆ ಅಮ್ಮನವರು ಪರಿಹಾರ ಕೊಡುತ್ತಾರಂತೆ. ವಿದ್ಯೆ-ಉದ್ಯೋಗ- ವಿವಾಹ, ಸಂತಾನ ಹೀಗೆ ಹಲವಾರು ರೀತಿಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಂಡ ಅದೇಷ್ಟೋ ಭಕ್ತರೆ ಸಾಕ್ಷಿ. ಅಮ್ಮನವರ ಮಹಿಮೆಯು ಅಪಾರವಾಗಿದ್ದು ಇಲ್ಲಿ ವಾರ್ಷಿಕ ಮಾರಿಪೂಜೆ ನಡೆಯುತ್ತದೆ. ಅಲ್ಲದೇ ವಿವಾಹಕ್ಕಾಗಿ ಪ್ರಸಾದ ನೋಡುವ ಸಂಪ್ರದಾಯವೂ ಕೂಡಾ ಇದೆ.
ಹೀಗೇ ತ್ರಿಶಕ್ತಿ ಸ್ವರೂಪಿಣಿಯಾದ ಜಗನ್ಮಾತೆ ಸರ್ವರನ್ನೂ ಹರಸಲಿ, ನೀವೂ ಕೂಡಾ ಒಮ್ಮೆ ದೇವಿ ದರುಶನ ಪಡೆದು ಅಮ್ಮನವರ ಕೃಪಾ-ಕಟಾಕ್ಷಕ್ಕೆ ಪಾತ್ರರಾಗಿ.

ವಿಳಾಸ :-
ಶ್ರೀ ಮಹಾದೇವಿ ಕುಂತಿಯಮ್ಮ ದೇವಸ್ಥಾನ,
ತಲ್ಲೂರು, ಕುಂದಾಪುರ ತಾಲೂಕು.

ದಾರಿಯ ವಿವರ : ತಾಲೂಕು ಕೇಂದ್ರ ಕುಂದಾಪುರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರ-ಮುಂಬೈ ಮಾರ್ಗವಾಗಿ ಸರಿಸುಮಾರು 5ಕಿ.ಮೀ ಸಾಗಿದರೆ ತಲ್ಲೂರು ಪೇಟೆ ಸಿಗುತ್ತದೆ. ಅಲ್ಲಿಂದ ಪೂರ್ವಕ್ಕೆ ಎತ್ತರದ ರಸ್ತೆಯನ್ನು ಬಳಸಿ ಮುಂದೆ ಹೋದರೆ ಕೇವಲ 1 ರಿಂದ 2ಕಿ.ಮೀ ಅಂತರದಲ್ಲಿ ಅಮ್ಮನವರ ದೇವಸ್ಥಾನವು ರಸ್ತೆ ಪಕ್ಕದಲ್ಲಿಯೇ ನಮಗೆ ಕಾಣಸಿಗುತ್ತದೆ. ಸಂಪೂರ್ಣ ರಾಜಗೋಪುರ ಸಮೇತ ಸುಂದರವಾಗಿ ನಮ್ಮನ್ನು ಸೆಳೆಯುತ್ತದೆ.