Shree Lokanatheshwara Temple,
Hattiyangadi, Kundapura Tq.
ಶ್ರೀ ಲೋಕನಾಥೇಶ್ವರ ದೇವಸ್ಥಾನ,
ಹಟ್ಟಿಯಂಗಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ||
ಉಡುಪಿ
ಜಿಲ್ಲೆ ಕುಂದಾಪುರ ತಾಲೂಕಿನ ಹಲವಾರು ಕಡೆಗಳಲ್ಲಿ ಇರುವ ಶಿವ ದೇವಾಲಯಗಳ ಸಾಲಿನಲ್ಲಿ ಅತ್ಯಂತ ಪುರಾತನ
ಮತ್ತು ಐತಿಹಾಸಿಕವಾದ ಹಿನ್ನಲೆಯನ್ನು ಹೊಂದಿರುವ ತಾಲೂಕು ಕೇಂದ್ರ ಕುಂದಾಪುರದಿಂದ ಸರಿಸುಮಾರು 10ಕಿ.ಮೀ
ಅಂತರದಲ್ಲಿರುವ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ (Hattiyangadi Shree
Lokanatheshwara Temple) ಒಂದು.
ಈ
ದೇವಾಲಯವು ಅತ್ಯಂತ ಪುರಾತನವಾಗಿದ್ದು ಅಳುಪರ ಮತ್ತು ಶಾಂತರರ(Alupa & Shantharar) ಕಾಲದ ಆಳ್ವಿಕೆ
ಇದ್ದಿರಬಹುದು ಎಂದು ಕೆಲವೊಂದು ಶಾಸನಗಳಿಂದ ನಮಗೆ ಮಾಹಿತಿ ಲಭ್ಯವಾಗುತ್ತದೆ. ಮಾತ್ರವಲ್ಲದೇ ಹಟ್ಟಿಯಂಗಡಿ
ಜೈನ(Jain) ಪ್ರಾಬಲ್ಯವನ್ನು ಹೊಂದಿದ್ದ ಪುರಾತನ ನಗರಿ ಎಂಬುದು ಇತಿಹಾಸದ ಪ್ರಕಾರ ತಿಳಿದುಬರುತ್ತದೆ.
ಹಿಂದೆ ಇದು 'ಪಟ್ಟಿಯ ನಗರಿ' ಎಂದಿದ್ದು, ಕಾಲಾಂತರದಲ್ಲಿ 'ಹಟ್ಟಿಯಂಗಡಿ' ಎಂದು ಬದಲಾಯಿತು. ವಾರಹಿ(Varahi)
ನದಿ ದಂಡೆಯ ಮೇಲಿರುವ ಈ ದೇವಾಲಯ ಮನಸ್ಸಿಗೆ ಶಾಂತಿಯನ್ನು ನೀಡುವ ಆಧ್ಯಾತ್ಮಿಕ ತಾಣವೆಂದರೆ ತಪ್ಪಾಗಲಾರದು.

ಹೀಗೆ
ಇಲ್ಲಿನ ಸಂಪ್ರದಾಯವನ್ನು ಅವಲೋಕನ ಮಾಡುತ್ತಾ ಹೋದರೆ ಕೊಲ್ಲೂರು ಮೂಕಾಂಬಿಕೆ ಮತ್ತು ಲೋಕನಾಥೇಶ್ವರ
ದೇವಸ್ಥಾನಕ್ಕೆ ಸಂಬಂಧವಿರುವುದು ಕಂಡುಬರುತ್ತದೆ. ಇಲ್ಲಿನ ಜಾತ್ರೆಯ ಮರುದಿನ ಕೊಲ್ಲೂರು ಜಾತ್ರೆ ನಡೆಯುತ್ತಿತ್ತು
ಮಾತ್ರವಲ್ಲದೆ ಇಲ್ಲಿನ ಪ್ರಸಾದ ಕೊಲ್ಲೂರು ಕ್ಷೇತ್ರಕ್ಕೆ ತಲುಪಿ ಮುಂದೆ ಅಲ್ಲಿನ ಜಾತ್ರೆ ನಡೆಯುತ್ತಿತ್ತಂತೆ.
ಆದರೆ ಈ ಸತ್ಸಂಪ್ರದಾಯಗಳು ನಿಂತು ಹಲವಾರು ಸಂವತ್ಸಗಳು ಕಳೆದಿದೆ.

ಶ್ರೀ ಲೋಕನಾಥೇಶ್ವರ ದುರ್ಗಾಪರಮೇಶ್ವರೀ ಸಮೇತ ಎಲ್ಲಾ
ಶಕ್ತಿಗಳು ನಿಮ್ಮೆಲ್ಲರನ್ನು ಅನುಗ್ರಹಿಸಲಿ. ಶ್ರೀ ಶಿವಶಕ್ತಿ ಸಮೇತ ಶಿವನ ಅನುಗ್ರಹ ನಿಮ್ಮದಾಗಲಿ.
ವಿಳಾಸ :-
ಶ್ರೀ ಲೋಕನಾಥೇಶ್ವರ ದೇವಸ್ಥಾನ
ಹಟ್ಟಿಯಂಗಡಿ, ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ.
ದಾರಿಯ
ವಿವರ : ತಾಲೂಕು ಕೇಂದ್ರ ಕುಂದಾಪುರದಿಂದ ಉತ್ತರಕ್ಕೆ ತಲ್ಲೂರು ಮುಖಾಂತ ಶ್ರೀ ಲೋಕನಾಥೇಶ್ವರ ದೇವಸ್ಥಾನವನ್ನು
ತಲುಪಬಹುದು. ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮುಖಮಂಟಪದ ಒಳಗಿನಿಂದ ಸಾಗಿದರೆ ಗಣಪತಿಯ ದೇವಸ್ಥಾನ
ಮುಂಭಾಗದಲ್ಲೇ ಶ್ರೀ ಕ್ಷೇತ್ರ ನಮಗೆ ಕಾಣಸಿಗುತ್ತದೆ.