Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....


Sri Sirasi Marikamba Temple, UK
ಶ್ರೀ ಶಿರಸಿ ಮಾರಿಕಾಂಬಾ ದೇವಸ್ಥಾನ, ಉತ್ತರಕನ್ನಡ ಜಿಲ್ಲೆ||Shree Maarikamba Ammanavari, Sirasi
 ತ್ತರಕನ್ನಡ ಜಿಲ್ಲೆಯ ಶಿರಸಿ(SIRASI) ಕರ್ನಾಟಕದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದ್ದು, ಅತ್ಯಂತ ಹೆಚ್ಚು ಯಾತ್ರಿಕರನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ. ಆದಿಶಕ್ತಿ ಜಗದಂಬೆ ಶ್ರೀ ಮಾರಿಕಾಂಬೆ(Maarimamba) ಇಲ್ಲಿ ಉಗ್ರ ರೂಪದಲ್ಲಿ ನೆಲೆಸಿದ್ದು, ಶಿಷ್ಟರಿಗೆ ಸೌಮ್ಯಳಾಗಿಯೂ, ದುಷ್ಟರಿಗೆ ಉಗ್ರಳಾಗಿಯೂ ಕಂಗೊಳಿಸುತ್ತಾಳೆ. ನಂಬಿದವರಿಗೆ ಇಂಬು ನೀಡುವ ತಾಣ ಶಿರಸಿಯ ಶ್ರೀ ಮಾರಿಕಾಂಬೆಯ ಧಾಮ. ಸಿರಿಗನ್ನಡ ನಾಡು, ಶ್ರೀಗಂಧದ ಬೀಡು, ಚಿನ್ನದ ನಾಡು, ಹೊನ್ನಿನಾ ತೇರು ಎಂದೆಲ್ಲ ಪ್ರಸಿದ್ಧಿ ಪಡೆದ ಕನ್ನಡನಾಡಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವಿಶಾಲ ಕಡಲತೀರ, ಮುಗಿಲೆತ್ತರದ ಗಿರಿ ಶಿಖರಗಳು, ಹಚ್ಚಹಸುರಿನ ತರುಲತೆಗಳು,ತೆಂಗು-ಕಂಗುಗಳ ಮರಗಳು, ಮನಸೂರೆಗೊಳ್ಳುವ ತರುಲತೆಗಳ ರಾಶಿ, ಒಂದೆಡೆ ಝುಳು-ಝುಳು ಹರಿಯುವ ನದಿಗಳ ಗಾನ, ಇನ್ನೊಂದೆಡೆ ಭೊರ್ಗರೆದು ದುಮ್ಮಿಕ್ಕುವ ಜಲಪಾತಗಳ ಅಬ್ಬರ, ಅಲ್ಲಲ್ಲಿ ಹಚ್ಚ ಹಸುರಿನ ಹುಲ್ಲಿನ ಹಾಸು, ನಿಸರ್ಗ ಪ್ರೇಮಿಗಳ ಸಸ್ಯಕಾಶಿಯಾಗಿ ಮೆರೆಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ತುತ್ತತುದಿಯ ಶಿರಸ್ಸಿನ ಭಾಗದಲ್ಲಿರುವ ತಾಲೂಕು ಶಿರಸಿ. ಇದು ಸಹ್ಯಾದ್ರಿಯ ಗಿರಿ ಶೃಂಗದಲ್ಲಿ ಮಲೆನಾಡಿನ ವನಸಿರಿಯ ನಡುವೆ ನಿಂತಿದೆ. ಈ ಉತ್ತುಂಗ ತಾಣದಲ್ಲಿ "ವಿರಾಜಮಾನಳಾಗಿದ್ದಾಳೆ ಮಲೆನಾಡಿನ ಸಿರಿದೇವಿ" ಜಗದಂಬೆ. ಭಾರತದಲ್ಲಿ 51 ಶಕ್ತಿ ಪೀಠಗಳಿವೆ. ಈ ಪೀಠಗಳು ಅಸ್ತಿತ್ವಕ್ಕೆ ಬರಲು ಮಹತ್ತರ ಕಾರಣವೂ ಇದೆ. ದಕ್ಷಬ್ರಹ್ಮನ ಯಜ್ನದಲ್ಲಿ ಪರಮೇಶ್ವರನಿಗೆ ಯಾವುದೇ ಅಂಶ ಇಲ್ಲದಿರುವುದನ್ನು ಕಂಡು ಸತಿಯ ಕ್ರೋಧ ಬ್ರಹ್ಮರಂದ್ರಕ್ಕೇರುತ್ತದೆ. ಆಕೆ ಯೋಗಾಗ್ನಿಯಿಂದ ಪ್ರಾಣ ತ್ಯಜಿಸುತ್ತಾಳೆ. ಸಿಟ್ಟಿಗೆದ್ದ ಪರಶಿವನು ಸತಿಯ ಶರೀರವನ್ನು ಹೊತ್ತು ಯಜ್ನ ಮಂಟಪದಿಂದ ನಿರ್ಗಮಿಸುತ್ತಾನೆ. ಪರಶಿವನ ಉಗ್ರರೂಪ ಕಂಡ ಮಹಾವಿಷ್ಣುವು ತನ್ನ ಚಕ್ರದಿಂದ ಸತಿಯ ದೇಹವನ್ನು ಛಿದ್ರಗೊಳಿಸುತ್ತಾನೆ. ಛಿದ್ರಗೊಂಡ ಸತಿಯ ಶರೀರ 51 ಭಿನ್ನ ಭಿನ್ನ ಪ್ರದೇಶಗಳಲ್ಲಿ ಬೀಳುತ್ತದೆ. ಭರತಖಂಡದ ಜಾಗ್ರತ ಶಕ್ತಿಪೀಠಗಳಲ್ಲಿ ಶಿರಸಿಯ ಈ ಪೀಠ ಅಗ್ರ ಪಂಕ್ತಿಯಲ್ಲಿದೆ.

ಶಿರಸಿಗೆ ಶ್ರೀ ಮಾರಿಕಾಂಬೆಯ ಆಗಮನ ಒಂದು ವಿಚಿತ್ರ ಸನ್ನಿವೇಶದಲ್ಲಿ ಆಯಿತು. ಅದಕ್ಕೂ ಮೊದಲು ಶಿರಸಿಯಲ್ಲಿ ಮರ್ಕಿ -ದುರ್ಗಿ ದೇವಿಯರ ಗುಡಿಗಳಿದ್ದವು. ಶ್ರದ್ಧಾ ಭಕ್ತಿಯಿಂದ ಜನ ಆ ದೇವರಿಗೆ ಸೇವೆ ಸಲ್ಲಿಸುತ್ತಿದ್ದರು. ಸುಮಾರು 350 ವರ್ಷಗಳಿಂದ ಶಿರಸಿ ಚೆನ್ನಾಪುರ ಸೀಮೆಯ ಚಿಕ್ಕ ಊರಾಗಿತ್ತು. ಅಂದು ಇದೊಂದು ಕುಗ್ರಾಮವಾಗಿತ್ತು. ಪಕ್ಕದ ಸೊರಬ ತಾಲೂಕಿನ ಚಂದ್ರಗುತ್ತಿಯ ವಿಶೇಷ ಪ್ರಸಿದ್ದಿ ಪಡೆದಿತ್ತು. ಭಾರ್ಗವ ರಾಮನು ಇದೇ ಸ್ಥಳದಲ್ಲಿ ಪಿತೃವಾಕ್ಯ ಪರಿಪಾಲನೆಗಾಗಿ ಮಾತೃಘಾತ ಮಾಡಿದಾಗ ಮೂಲಶಕ್ತಿಯಾದ ರೇಣುಕೆಯು ಇಲ್ಲಿನ ಗುಹೆಯಲ್ಲಿ ಆವಿರ್ಭಸಿಸಿದ ಕಾರಣ ಚಂದ್ರಗುತ್ತಿ ಪ್ರಾಚೀನ ಶಕ್ತಿಪೀಠ ಎನಿಸಿತ್ತು. ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ಚೆನ್ನಾಪುರದ ಪರವಾಗಿ ಭಕ್ತರಿಂದ ಪಡಲಿಗೆ (ಹರಿವಾಣ) ತುಂಬಿಸಿಕೊಂಡು ತಾು ರೇಣುಕೆಯ ಸನ್ನಿಧಾನದಲ್ಲಿ ಒಪ್ಪಿಸುವುದು ಅಸಾದಿ ಬಸವನ ಪದ್ಧತಿಯಾಗಿತ್ತು. ಮರ್ಕಿ -ದುರ್ಗಿಯರ ಪರಮ ಭಕ್ತನಾದ ಈತನು ತನ್ನ ಸಂಗಡಿಗರನ್ನು ಕರೆದುಕೊಂಡು ಪಡಲಿಗೆಯೊಡನೆ ಜಾತ್ರೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕೆಲವು ಜನ ಅವನನ್ನು ತಡೆದು ತೊಂದರೆ ಮಾಡಿದರು. ಇದರಿಂದ ಬಸವನ ಮನಸ್ಸಿಗೆ ನೋವಾುತಲ್ಲದೇ ಆತನ ಸಂಗಡಿಗರೂ ಬಹುವಾಗಿ ನೊಂದುಕೊಡರು. ಅಸಾದಿ ಬಸವನು ಮರು ವರುಷ ಜಾತ್ರೆಗೆ ಹೋಗದೆ ಶಿರಸಿಯಲ್ಲೇ ಉಳಿದನು. ರೇಣುಕಾಂಬೆಗೆ ಚೆನ್ನಾಪುರದ ಸೀಮೆಯ ಉಡಿ ಮುಟ್ಟಲೇ ಇಲ್ಲ. ನಿದ್ರಾಹಾರವಿಲ್ಲದೇ ಅದೆಷ್ಟು ದಿನಗಳು ಸಂದವೋ ಲೆಕ್ಕಕ್ಕಿಲ್ಲ. ರೇಣುಕಾಂಬೆಯ ದರ್ಶನಮಾಡಿ ತನ್ನ ತಪ್ಪನ್ನು ಕ್ಷಮಿಸಬೇಕೆಂದು ಕೇಳುವ ತಳಮಳ, ಕಾತರ, ಬಸವನದು, ರೇಣುಕಾಂಬೆ ಬಸವನ ಜೀವದ ಜೀವ. ಪ್ರಾಣದ ಪ್ರಾಣ. ಬಸವನಲ್ಲಾದ ಬದಲಾವಣೆಯನ್ನು ಕಂಡ ಗೆಳೆಯರು ಅವನನ್ನು ಸಮಾಧಾನಿಸಲೆತ್ನಿಸಿದರು. ಆಗ ಬಸವನ ದು:ಖ ಕಟ್ಟೆಯೊಡೆದು ಕಣ್ಣೀರ ಕೋಡಿಯೇ ಹರಿಯಿತು. ಆದರೆ ಬಸವ ಮಾತ್ರ ಮೌನವಾಗಿಯೇ ಇದ್ದ.
Srirasi Marikamba Temple Veiw
ಅಂದಿನ ಜನರ ಧಾರ್ಮಿಕ ನಂಬಿಕೆ ಹಾಗೂ ಸದ್ಭಾವನೆಗೆ ತಕ್ಕಂತೆ ಘಟನೆಯೊಂದು ಕೂಡಿ ಬಂದಿತ್ತು. ಒಂದು ರಾತ್ರಿ ಬಸವ ತನ್ನ ಗುಡಿಸಲಿನಲ್ಲಿ ಮಲಗಿದ್ದಾನೆ. ಓ ಬಸವಾ... ನಾನು ಬಂದಿದ್ದೇನೆ ಎಂದು ಯಾರೋ ಹೆಂಗಸು ಕರೆದಂತೆ ಕೇಳಿಸಿತು. ಕನಸಿರಬೇಕೆಂದು ಬಸವ ನಿರ್ಲಕ್ಷಿಸಿದನಾದರೂ ಆ ಧ್ವನಿ ಬಸವನ ಹೃದಯಕ್ಕೆ ಮೃದುವಾದ ತಂಪಿನ ಸಿಂಚನ ಮಾಡಿದ ಅನುಭವ. ಅಲೆ ಅಲೆಯಾಗಿ ಬಂದ ಆನಂದ ತರಂಗದಲ್ಲಿ ತೇಲಿದ ಅನುಭವ. ಗಂಧರ್ವಗಾನದ ಇಂಪು ಆ ಧ್ವನಿಯದು. ಆ ಧ್ವನಿ ಇನ್ನೊಮ್ಮೆ ಕೇಳಬೇಕೆಂಬ ಇಚ್ಛೆ ಬಸವನದು. ಸಾವಕಾಶವಾಗಿ ಮುಸಕನ್ನೆಳದು ಅತ್ತಿತ್ತ ಸುತ್ತಮುತ್ತಲ್ಲೆಲ್ಲ ನೋಡಿದ. ಯಾರೂ ಕಾಣಲಿಲ್ಲ. ಬಸವ ಮುಸುಕನ್ನು ಮತ್ತೆ ಜೋರಾಗಿ ಎಳೆದುಕೊಂಡ. ಮರು ಕ್ಷಣವೇ ಅದೇ ಧ್ವನಿ ಮತ್ತೆ ಕೇಳಿದಾಗ ಬಸವನಿಗೇಕೋ ಹೆದರಿಕೆ. ಮಲಗಿದ ಮುಸುಕಿನಲ್ಲೇ ಬೆವತುಹೋದ. ಆದರೂ ಧೈರ್ಯದಿಂದ ನೀನಾರು? ಎಂದು ಕೇಳಿದ. ನಾನೇ ಮಾರಮ್ಮ! ನೀನು ನೊಂದುಕೊಂಡು ಜಾತ್ರೆಗೆ ಬರಲಿಲ್ಲ ಅಲ್ಲವಾ? ನೋಡು ನಾನೇ ನಿನ್ನಲ್ಲಿಗೆ ಬಂದಿದ್ದೇನೆಂದು ಹೇಳಿದುದು ಕೇಳಿಸಿತು. ಆ ವೇಳೆಗೆ ಬಸವ ಸಂಪೂರ್ಣ ಎಚ್ಚರಗೊಂಡಿದ್ದ. ತನಗೆ ಬಿದ್ದ ಕನಸಿನ ಮಾಧುರ್ಯದಲ್ಲಿ ದಿನವಿಡೀ ಕಳೆದ. ಬಸವನಿಗೆ ಮಾರನೇ ದಿನದ ಕನಸಿನಲ್ಲಿ ತಾನಿರುವ ಜಾಗವನ್ನು ತಿಳಿಸಿದಳು.
ಬಸವನು ಹೇಳಿದ ಕನಸನ್ನು ಕೇಳಿದ ಕೆಲ ಆಸ್ತಿಕರು ಕನಸಿನಲ್ಲಿ ತಿಳಿಸಿದಂತೆ ಕೆರೆಗೆ ಪೂಜೆ ಮಾಡಿ ಹೂವೊಂದನ್ನು ಕೆರೆಗೆ ಎಸೆಯಲು, ಕೆರೆಯ ಅಲೆಗಳೊಡನೆ ಪೆಟ್ಟಿಗೆಯೊಂದು ತೇಲಿಬಂತು. ಕುತೂಹಲದಿಂದ ಪೆಟ್ಟಿಗೆ ಮುಚ್ಚಳ ತೆಗೆದು ನೋಡಿದಾಗ ಮಂದಹಾಸ ಬೀರುತ್ತಿರುವ ದೇವಿಯ ವಿಗ್ರಹವನ್ನು ಕಂಡ ಜನ ಆಶ್ಚರ್ಯಚಕಿತರಾದರು. ಜಗನ್ಮಾತೆ ತನ್ನನ್ನು ನೆಚ್ಚಿದವರನ್ನು ಕಾಪಾಡುವ ಪರಿ ಇದು. ಮಾರಿಕಾಂಬೆಯು ಶಿರಸಿಗೆ ಬಂದು ನೆಲಸಿದ ಕಥೆ ಇದು. ಮಾತೆಯ ಕರುಣೆಗೆ ಮಿತಿಯುಂಟೇ? ಆಕೆಯ ದಯೆಗೆ ಎಲ್ಲೆಯುಂಟೇ? ದೈವೀ ಲೀಲೆಯ ವಿಚಿತ್ರ. ಆ ದಿವ್ಯಶಕ್ತಿ ಯಾವ ಯಾವ ಕಾಲದಲ್ಲಿ ಯಾವ ಯಾವ ಸ್ಥಳದಲ್ಲಿ ಪ್ರಕಟಗೊಂಡೀತೆಂದು ಊಹಿಸುವುದು ಅಸಾಧ್ಯ. ಕೆರೆಯಲ್ಲಿ ದೇವಿಯ ವಿಗ್ರಹ ದೊರೆತ ಬಗೆ ಆಶ್ಚರ್ಯ ಪಡುವಂತಹದಾದರೂ ಅದು ದೊರೆತ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲ.

ಐತಿಹ್ಯ: ಶ್ರೀ ಮಾರಿಕಾಂಬಾ ದೇವಿಯು ಶಿರಸಿಗೆ ಆಗಮಿಸಿದ ಕುರಿತು ಐತಿಹಾಸಿಕ ಕುರುಹುಗಳು ದೊರೆಯುತ್ತವೆ. ಆ ಪ್ರಕಾರವಾಗಿ ಶ್ರೀ ಮಾರಿಕಾಂಬೆಯು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನಿಂದ ಶಿರಸಿಗೆ ಬಂದು ನೆಲಸಿದಳೆಂದು ಐತಿಹ್ಯವಿದೆ. ಮಹಾಭಾರತದಲ್ಲಿ ಧರ್ಮರಾಯನು ವಿರಾಟ ನಗರಕ್ಕೆ ಬಂದಾಗ ತನ್ನ ರಕ್ಷಣೆಗಾಗಿ ದುಗರ್ಿಯನ್ನು ಪ್ರಾಥರ್ಿಸಿದ್ದು ತಿಳಿದುಬರುತ್ತದೆ. ವಿರಾಟ ನಗರಂ ರಮ್ಯಂ ಗಚ್ಚ ಮನೋ ಯುಧ್ಟಿರ: ಅಸ್ತುವನ್ ಮನಸಾ ದೇವೀಂ ದುರ್ಗಾ ತ್ರಿಭುವನೇಶ್ವರೀಂ. ಇಂದಿನ ಹಾನಗಲ್ ಅಂದಿನ ವಿರಾಟ ನಗರವೆಂದು ಹೇಳಲಾಗುತ್ತಿದೆ. ಚಾಲುಕ್ಯರ ಶಾಸನಗಳಲ್ಲಿಯೂ ಇದು ವಿರಾಟನ ಕೋಂಟಿ ಎಂಬ ಬರವಣಿಗೆ ಇದೆ. ಈ ಅವಧಿಯಲ್ಲಿ ಶಿರಸಿ ಚೆನ್ನಾಪುರ ಸೀಮೆಯಲ್ಲಿದ್ದ ಇನ್ನೂರು ಮನೆಗಳುಳ್ಳ ಒಂದು ಕುಗ್ರಾಮ. ಆಗ ಅಲ್ಲಿ ಕಳ್ಳರ ಹಾವಳಿಯು ಹೆಚ್ಚಾಗಿತ್ತು. ಹಾನಗಲ್ಲಿನಲ್ಲಿ ಆಗಷ್ಟೇ ಜಾತ್ರೆ ಮುಗಿದ ಸಮಯವಾಗಿತ್ತು. ಜಾತ್ರೆಯ ಪದ್ದತಿಯಂತೆ ವಿಗ್ರಹದ ಬಿಡಿ ಭಾಗಗಳನ್ನು ಒಂದು ಮರದ ಪೆಟ್ಟಿಗೆಯಲ್ಲಿ ಹಾಕಿಡುವ ಪದ್ದತಿುತ್ತು. ದೇವಿಯ ಆಭರಣಗಳನ್ನು ಅದರ ಜೊತೆ ಇಡುವ ರೂಢಿ. ಇದನ್ನು ಗಮನಿಸಿದ ಕಳ್ಳರು ಹಾನಗಲ್ಲಿನಿಂದ ಆ ಪೆಟ್ಟಿಗೆಯನ್ನು ಕದ್ದು ತಂದು ಶಿರಸಿಯ ಸಮೀಪದ ಕೆರೆಯ ಹತ್ತಿರ ಕುಳಿತು ಅದರಲ್ಲಿಯ ಆಭರಣಗಳನ್ನು ಮಾತ್ರ ತೆಗೆದು ತಮ್ಮೊಳಗೆ ಹಂಚಿಕೊಂಡು ವಿಗ್ರಹದ ಬಿಡಿ ಭಾಗಗಳನ್ನು ಪೆಟ್ಟಿಗೆಯೊಳಗೆ ತುಂಬಿ ಕೆರೆಯೊಳಗೆ ಎಸೆದರು. ಕೆರೆಗೆ ಈಜಲು ಹೋದ ಜನರು ಆ ಪೆಟ್ಟಿಗೆಯನ್ನು ಮೇಲಕ್ಕೆ ತಂದರೆಂದು ಹೇಳಲಾಗುತ್ತದೆ. ಏನೇ ಆದರೂ ದೇವಿಯ ವಿಗ್ರಹದ ಪೆಟ್ಟಿಗೆ ದೊರೆತ ಕೆರೆಯೇ ಕೋಟೆಕೆರೆ ಎಂಬುದು ಒಮ್ಮತದ ಅಭಿಪ್ರಾಯ.
ಶ್ರೀ ಮಾರಿಕಾಂಬಾ ದೇವಾಲಯವು ಮುನ್ನೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ತನ್ನ ಸಂಪ್ರದಾಯವನ್ನು ಚಾಚು ತಪ್ಪದೆ ನಡೆಸಿಕೊಂಡು ಬಂದಿದೆ. ದೇವಾಲಯದ ಆಥರ್ಿಕ ಮುಗ್ಗಟ್ಟು ಸುಧಾರಿಸಿದಂತೆಲ್ಲ ಅಂದಿನ ದೇವಾಲಯ ಸುಧಾರಣೆಗೊಂಡು ಬೃಹತ್ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯದ ಹಿಂಬದಿಯಲ್ಲಿ ಉತ್ತಮ ಸೌಲಭ್ಯವಿರುವ ಅತಿಥಿಗೃಹಗಳಿವೆ. ಪ್ರವಾಸಿಗರಿಗೆ, ಪರ ಊರಿನ ಭಕ್ತರಿಗೆ ಇಲ್ಲಿ ಸುಲಭ ದರದಲ್ಲಿ ಕೋಣೆಗಳು ಲಭ್ಯವಿವೆ. ಶಿರಸಿ ಊರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರುವ ಪರ ಊರಿನವರಿಗೆ ಇಲ್ಲಿ ರೂಮುಗಳು ಉಚಿತ.
ಈ ನೆಲದ ಬದುಕಿಗೆ ಸದಾರಕ್ಷಣೆಯ ದಿವ್ಯ ಹಸ್ತವನ್ನು ಚಾಚಿ ನಿಂತ ಭರತ ಖಂಡದ ಜಾಗೃತ ಶಕ್ತಿಪೀಠಗಳಲ್ಲಿ ಶಿರಸಿಯ ಶ್ರೀ ಮಾರಿಕಾಂಬಾ ಪೀಠವು ಒಂದು. ಶ್ರೀ ಮಾರಿಕಾಂಬಾ ಜಾತ್ರೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಕನರ್ಾಟಕದ ಅತೀ ದೊಡ್ಡ ಜಾತ್ರೆಯಾಗಿದೆ. ಲಕ್ಷೋಪಲಕ್ಷ ಜನ ದೇಶದ ಉದ್ದಗಲಗಳಿಂದಲೂ ಬರುವುದು ಈ ಜಾತ್ರೆಯ ವೈಶಿಷ್ಟ್ಯ. ಎಂಟು ದಿನಗಳ ಕಾಲ ನಡೆಯುವ ಈ ಜಾತ್ರೆಯ ವಿಧಿಗಳು ಸ್ವತಃ ಮಾರಿಕಾಂಬೆಯ ಆತ್ಮಕಥೆಯ ಪುಟಗಳನ್ನೇ ಅವಲಂಬಿಸಿವೆ. ವರ್ಣವ್ಯವಸ್ಥೆಯ ಪ್ರತಿಬಿಂಬದಂತೆಯೇ ಈ ಜಾತ್ರಾ ವಿಧಿಗಳು ಸಮೂಹ ಬದುಕಿನ ಒಂದು ದಿವ್ಯ ಸಾಕ್ಷ್ಯ ಸಂಕೇತವೂ ಆಗಿದೆ.

ಜಾನಪದೀಯ ದಂತ ಕಥೆ:-
ಮಾರಿಕಾಂಬೆ ಮೂಲತಃ ಬ್ರಾಹ್ಮಣ ಕನ್ಯೆ. ಸ್ಫುರದ್ರೂಪಿ, ಸುಂದರ ಯುವಕ ಮಹಿಷಾಸುರ ಇವಳನ್ನು ಕಂಡು ಮೋಹಿತನಾಗುತ್ತಾನೆ. ಬ್ರಾಹ್ಮಣ ಕನ್ಯೆ ಇತರ ಕುಲದವರನನ್ನು ಮದುವೆಯಾಗುವಂತಿಲ್ಲ. ಮಹಿಷಾಸುರನ ರೂಪ, ಗುಣ, ನಡತೆ ಕಂಡ ದೇತ ಮತ್ತು ಕುಟಂಬದವರ ಒಪ್ಪಿಗೆಯಂತೆ ಇಬ್ಬರ ವಿವಾಹವು ಅದ್ದೂರಿಯಾಗಿಯೇ ನಡೆಯಿತು. ಒಂದೆರಡೂ ಮಕ್ಕಳೂ ಆದವು. ಸಂಸಾರ ಸುಖಮಯವಾಗಿಯೇ ಸಾಗಿತು.
ಒಂದು ದಿನ ಊಟಕ್ಕೆ ಕುಳಿತಾಗ ಒಂದು ಮಗು ತನ್ನ ಊಟದ ಬಟ್ಟಲಿನಲ್ಲಿ ಬಡಿಸಿದ ಒಂದು ಹೋಳನ್ನು ಎತ್ತಿ ತೋರಿಸುತ್ತ ತನ್ನ ತಾಯಿ ಹತ್ತಿರ ``ಅಮ್ಮ, ಈ ಹೋಳು ಕೋಣನ ನಾಲಿಗೆಯಂತಿದೆ. ಅಲ್ಲ್ವೇನಮ್ಮಾ? ಎಂದಿತು.``ಹಾಗೆಂದರೇನು? ಅದು ತರಕಾರಿ ಹೋಳು, ಹಾಗೆನ್ನುತ್ತಾರೆಯೇ? ಎಂದು ತಾಯಿ ಹೆಳುತ್ತ್ತಾಳೆ. ``ನಿಜ ಅಮ್ಮ, ಆ ಹೋಳು ಕೋಣನ ನಾಲಿಗೆಯಂತಿದೆ' ಇನ್ನೊಂದು ಮಗು ಹೇಳಿತು. ``ಏನು ಕೋಣನ ನಾಲಿಗೆಯೇ? ನಿನಗೆ ಹೇಗೆ ತಿಳಿಯಿತು? ತಾಯಿಯ ಮರು ಪ್ರಶ್ನೆ.
``ಓಹೊ ! ನನಗೆ ಗೋತ್ತಿಲ್ಲವೇ? ಅಪ್ಪ ಅದನ್ನು ಕೊಯ್ಯೂವಾಗ ನಾನು ನೋಡಿದ್ದೇನೆ. ``ಏನೆಂದೆ? ಅವರು ಕೊಯ್ಯುವುದನ್ನು ನೀನು ನೋಡಿದ್ದೀಯಾ? ನಿಜ ಹೇಳು ಎಂದು ಗದರಿಸಿದಳು. ``ಅಪ್ಪನ ಜೊತೆಗೆ ಹೋಗಿರಲಿಲ್ಲವಾ? ಆಗ ನಿಜವಾಗಿಯೂ ಕಂಡಿದ್ದೆ. ಎಷ್ಟು ಹೊಲಸು ವಾಸನೆ ಅಲ್ಲವೇನಮ್ಮಾ? ಮಗು ಸರಳವಾಗಿ ಹೇಳಿತು. ಮಕ್ಕಳಿಬ್ಬರಿಗೆ ಯಾವ ರೀತಿಯಾಗಿ ಕೇಳಿದರೂ ಅದೇ ಉತ್ತರ ದೊರೆಯಿತು. ಧಿಡೀರ ಆಘಾತವಾಯಿತು.
ಮರುದಿನ ಪತಿ ಕೆಲಸಕ್ಕೆ ಹೋದಾಗ ಅವನಿಗೆ ಗೊತ್ತಾಗದಂತೆ ತಾನು ಅವನನ್ನು ಹಿಂಬಾಲಿಸಿದಳು. ಹೌದು, ಮಹಿಷ ಸತ್ತ ಪ್ರಾಣಿಯ ದೇಹವನ್ನು ಕೊಯ್ಯುತ್ತಿದ್ದನು. ಇದನ್ನು ಕಂಡು ದೇವಿ ಕಿಡಿಕಿಡಿ ಯಾದಳು. ಅವಳ ತಲೆ ಗಿರ್ರನೆ ತಿರುಗಿತು. ಸಾವಿರ ಸಿಡಿಲುಮೈಮೇಲೆ ಸಿಡಿದಂತೆ ಕಂಪಿಸಿದಳು. ದೇಹದಲ್ಲಿ ರೋಷಾವೇಶ, ಕೋಪಾಗ್ನಿ ಕಣ್ಣೀರಾಗಿ ಧಾರಾಕಾರವಾಗಿ ಸುರಿಯುತ್ತಿದ್ದಂತೆ ಮನೆಗೆ ಬಂದು ರಾದ್ಧಂತ ಮಾಡಿದಳು. ಮನೆಯಲ್ಲಿದ್ದ ವಸ್ತುಗಳನ್ನು ಕಿತ್ತು ಬಿಸಾಡಿದಳು. ಮಕ್ಕಳಿಗೆ ಸಿಕ್ಕಸಿಕ್ಕಲ್ಲಿಹೊಡೆದಳು. ನಂಬಿಸಿ ಕುಲ ಹೇಳದೆ ತನ್ನನ್ನು ಮದುವೆಯಾದ ಇವನಿಗೆ ಶಿಕ್ಷೆ ಆಗಲೇ ಬೇಕೆಂದು ಕತ್ತಿ ಹಿಡಿದು ರಣಚಂಡಿಯೇ ಆದಳು. ಮಹಿಷ ಜೀವ ಭಯದಿಂದ ಓಡತೊಡಗಿದ. ಕೋಳಿಯೊಳಗೆ ಹೊಕ್ಕ. ಅದನ್ನು ಮುಗಿಸಿದಳು. ಕುರಿಯ ಒಳ ಹೊಕ್ಕ. ಕುರಿಯನ್ನು ಮುಗಿಸಿದಳು. ಕೋಣನ ರೋಪ ತಾಳಿದ. ಕೋಣನ ರುಂಡವನ್ನು ಚಂಡಾದಿದಳು. ಮಹಿಷಾಸುರ ಮಧರ್ಿನಿಯಾದಳು, ತಾನಿದ್ದ ಗುಡಿ ಸಲಿಗೆ ಸ್ವತಃ ಬೆಂಕಿಯಿಟ್ಟು ದಹಿಸಿಕೊಂಡಳು. ಮಹಾಸತಿಯಾಗಿ ಇವಳು ಎಸಗಿದ ಕಾರ್ಯವನ್ನು ಜನ ಹೊಗಳಿದರು. ಆಕೆಯ ನ್ಯಾಯಪರತೆಯನ್ನು ಮೆಚ್ಚಿದರು. ``ತಾಯೇ ನೀನು ದುರ್ಗಾ, ಮಹಾಕಾಳಿ, ನಮ್ಮೆಲ್ಲರನ್ನೂ ಸಲಹಲು ನೀನು ಪುನಃ ಹುಟ್ಟಿ ಬಾ ತಾಯೇ ಎಂದು ಬೇಡಿದರು . ತಾಯಿ ಪುನ್ಃ ಬಂದಳು. ಇದು ಮಾರಿಕಾಂಬೆಯ ಜೀವನ ಕಥೆ.
ಈ ಕಥೆಯ ಸಂಕ್ಷಿಪ್ತ ಆಚರಣೆ ರೂಪಗಳೇ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಯ ಕಾರ್ಯವಿಧಾನಗಳು. ದೇವಸ್ಥಾನದಲ್ಲಿರುವ ಪಟ್ಟದ ಕೋಣವೇ ಮಹಿಷಸುರನ ಪ್ರತೀಕ. 1930 ರವರೆಗೆ ಕೋಣನ ಬಲಿಯು ನಡೆಯುತ್ತಿತ್ತು. ಈಗ ಸಾಂಕೇತಿಕ ರೂಪವಾಗಿ ಕುಂಬಳ ಕಾಯಿಯನ್ನು ಕಡಿಯುತ್ತಾರೆ.

ಒಟ್ಟಾರೆಯಾಗಿ ಆದಿಮಾಯೆ ಪಾರ್ವತಿಯು ಕೋಟ್ಯಾನುಕೋಟಿ ರೂಪವನ್ನು ಧರಿಸಿ, ಹಲವಾರು ನಾಮದಿಂದ ಕರೆಸಿಕೊಂದು, ಜಗನ್ಮಾತೆಯಾಗಿ ಭರತಭೂಮಿಯನ್ನು ಪಾವನಮಯಗೊಳಿಸಿದ್ದಾಳೆ. ಶ್ರೀ ದೇವಿಯ ಚರಿತ್ರೆಯನ್ನು ಓದಿದ ನಿಮಗೆ ಶ್ರೀ ಶಿರಸಿಯ ಮಾರಿಕಾಂಬೆಯು ಅನುಗ್ರಹಿಸಲಿ.

ವಿಳಾಸ :-
ಶ್ರೀ ಮಾರಿಕಾಂಬಾ ದೇವಸ್ಥಾನ,
ಶಿರಸಿ, ಉತ್ತರಕನ್ನಡ ಜಿಲ್ಲೆ |

ದಾರಿಯ ವಿವರ : ಮಂಗಳೂರು, ಕುಂದಾಪುರದಿಂದ ಹೋಗುವುದಾದರೆ ಶಿರಸಿಗೆ ನೇರ ಬಸ್ಸಿನ ವ್ಯವಸ್ಥೆ ಇದೆ. ಹೊನ್ನಾವರ ದಾಟಿ ಶಿರಸಿಯ ಮಾರ್ಗವಾಗಿ ಸಾಗಲು ನೇರ ಮಾರ್ಗದ ವ್ಯವಸ್ಥೆ ಇದೆ.

ಲೇಖನ ಕೃಪೆ : ಶ್ರೀ ದೇವಳದ ಅಂತರ್ಜಾಲ ತಾಣ, ಹೆಚ್ಚಿನ ಮಾಹಿತಿಗೆ ಇಲ್ಲಿಕ್ಲಿಕ್ ಮಾಡಿ.  http://www.marikamba.org