Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Our Blogs

ಪ್ರಿಯ ಓದುಗರೆ “ನಮ್ಮ-ನಾಡು” ಅಂತರ್ಜಾಲ ತಾಣದ ಸ್ವಾಮ್ಯದಲ್ಲಿರುವ ಈ ಕೆಳಗಿನ ‘ವೆಬ್-ಪುಟಕ್ಕೂ’ ಒಮ್ಮೆ ಭೇಟಿ ನೀಡಿ ನಮ್ಮನ್ನು ಪ್ರೋತ್ಸಾಹಿಸಿ..
ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ ದೇವಸ್ಥಾನ, ಕುದುರೆಕೆರೆಬೆಟ್ಟು
ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ ಅಮ್ಮನವರು  ತ್ರಿಶಕ್ತ್ಯಾತ್ಮಿಕೆ ಶಿವನ ರಾಣಿ ಆದಿಶಕ್ತಿ ಪಾರ್ವತಿ ಮಾತೆಯ ದಿವ್ಯ ರಾಜರಾಜೇಶ್ವರೀ ಸ್ವರೂಪ. ಸರ್ವಮಂಗಳೆಯಾದ ಮಹಾದೇವಿಯು ಶ್ರೀ ದುರ್ಗಾ, ಶ್ರೀ ಲಕ್ಷ್ಮೀ ಮತ್ತು ಶ್ರೀ ವಾಣಿ ಮಾತೆಯ ಸಮಾಗಮಾ ರೂಪವಾಗಿದ್ದಾಳೆ. ಆದಿಶಕ್ತಿಯಾದ ಮಾತೆಯು “ಶ್ರೀ ಸ್ವರ್ಣದುರ್ಗಾಪರಮೇಶ್ವರೀ” ಎಂಬ ನಾಮದಿಂದ ಐಕ್ಯಳಾಗಿ ಬೇಡಿ ಬರುವ ಭಕ್ತರ ಪಾಲಿನ ಕಾಮಧೇನು ಆಗಿದ್ದಾಳೆ. ಈ ಮಾತೆಯನ್ನು ಒಮ್ಮೆ ಕಣ್ಣಾರೆ ಕಾಣುವುದೇ ನಮ್ಮ ಪಾಲಿನ ಭಾಗ್ಯ, ಶ್ರೀ ದೇವಿಯು ಸ್ವರ್ಣ ವರ್ಣಳಾಗಿಯೂ, ಶಂಖ-ಚಕ್ರ ವನ್ನು ಧರಿಸಿ, ಅಭಯ-ಶೂಲವನ್ನು  ಹೊಂದಿದವಳಾಗಿಯೂ ಅಂತೆಯೇ ಪಂಚಶಿರ ನಾಗಾಭರಣಾಧಿಗಳನ್ನು ಧರಿಸಿ….
ಮುಂದೆ ಓದಿ….
------------------------------------------------------------------------------- 
ಶ್ರೀ ವೀರೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನ, ಪಾದೇಮಠ-ಕೆಂಜೂರು

ಪಾದೇಮಠ ಶ್ರೀ ವೀರೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನವು ಒಂದು ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಶ್ರೀ ಕ್ಷೇತ್ರವು ಉಡುಪಿ ಜಿಲ್ಲೆಯ ಕೊಕ್ಕರ್ಣೇಯಿಂದ ಸರಿಸುಮಾರು 12ಕಿ.ಮೀ ಅಂತರದಲ್ಲಿ ಕೆಂಜೂರು ಎಂಬ ಗ್ರಾಮದಲ್ಲಿದೆ. ದೇವಳವನ್ನು ತಲುಪಲು ಕೊಕ್ಕರ್ಣೆ-ಹೆಬ್ರಿ ಮಾರ್ಗ ಮಧ್ಯೆಯಲ್ಲಿ ಸಾಗಬೇಕಾಗುತ್ತದೆ. ಶ್ರೀ ಕ್ಷೇತ್ರದ ಪ್ರದಾನ ದೇವತೆ ಶ್ರೀ ವೀರಭದ್ರನಾಗಿದ್ದು, ಶಕ್ತಿದೇವತೆಯಾದ ಶಿವಸತಿ ಶ್ರೀ ದುರ್ಗಾಪರಮೇಶ್ವರೀಯೂ ಕೂಡಾ ನೆಲೆಸಿನಿಂದ ಪಾವನ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿ ಶ್ರೀ ವಿನಾಯಕ ದೇವರು ವಾಯುವ್ಯದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪಿಸಲ್ಪಟ್ಟಿದೆ. ಇಲ್ಲಿನ ಮೂಲ ದೇವರಾದ ಶ್ರೀ ವೀರೇಶ್ವರನು ಶಿವನ ಅಂಶ ಸಂಭೂತನಾಗಿ ‘ವೀರೇಶ್ವರ’ ಎಂದು ಪೂಜಿಸಲ್ಪಡುತ್ತಾನೆ. ಶ್ರೀ ಕ್ಷೇತ್ರದಲ್ಲಿ ಹಲವಾರು ಪರಿವಾರ ಗಣಗಳಿದ್ದು ಶ್ರೀ ವೀರೇಶ್ವರ ಸ್ವಾಮಿಯ ಜೊತೆಯಲ್ಲಿ ಶ್ರೀ ಸಿರಿಯು ನೆಲೆಸಿ ನಿಂದಿದ್ದಾಳೆ, ಅಲ್ಲದೆ ಗರ್ಭಗುಡಿನ ಹೊರಪ್ರಕಾರದಲ್ಲಿ ಶ್ರೀ ಅಬ್ಬಗ-ದಾರಗರು ಇನ್ನೂ ಅನೇಕ ದೇವ-ದೈವಗಳು ನೆಲಸಿದ್ದಾರೆ.