Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

ನಮ್ಮ-ನಾಡು ಓದುಗರಿಗೆ ಪ್ರೀತಿಯ ನಮಸ್ಕಾರ,
ಪ್ರಿಯ ಓದುಗರೆ ‘ನಮ್ಮ-ನಾಡು’ ಅಂತರ್ಜಾಲ ತಾಣ ನಮ್ಮೂರಿನ ಸೊಗಡನ್ನು ಸಾರುವ, ಸಂಸ್ಕೃತಿಯನ್ನು ಬೀರುವ ಅಂತರ್ಜಾಲ ಪುಟವಾಗಿದೆ. ನಮ್ಮ-ನಾಡು ತಾಣ ನಿಮ್ಮ ಮುಂದೆ, ನಿಮ್ಮದೇ ಊರಿನ ಸುತ್ತ-ಮುತ್ತಲಿರುವ ದೇವಾಲಯ, ದೈವಾಲಯಗಳ ಬೆಳಕು ಚೆಲ್ಲುವ ಸಣ್ಣ ಪ್ರಯತ್ನವನ್ನು ಮಾಡುತ್ತಿದೆ. ಎಷ್ಟೋ ದೇವಾಲಯ, ದೈವಾಲಯಗಳು ಇಂದು ಬಹುಕಾರಣೀಕವನ್ನು ಹೊಂದಿದ್ದರೂ ಕೂಡಾ ಆಸ್ತಿಕರನ್ನು ತಲುಪುವಲ್ಲಿ ವಿಫಲವಾಗುತ್ತವೆ. ನಮ್ಮ ಉದ್ದೇಶ ಇಷ್ಟೆ! ಗಮ್ಯತೆಯಲ್ಲಿರುವ ಧಾರ್ಮಿಕ ಸ್ಥಳಗಳ ಪ್ರಚಾರ, ಈ ಮೂಲಕ ಆ ಸಾನ್ನಿಧ್ಯದ ಅರಿವು ಜನ-ಮನದಲ್ಲಿ ಮೂಡಲಿ ಎಂಬುದು. ಅದೇ ತೆರನಾಗಿ ಪ್ರಪಂಚದ ಮೂಲೆ-ಮೂಲೆಯಲ್ಲಿರುವ ನಮ್ಮವರು ಅವರ ಊರು-ಕೇರಿಗಳ ಮಧ್ಯದಲ್ಲಿರುಯವ ಗುಡಿ-ಮಂದಿರದ ಮಾಹಿತಿ ಪಡೆಯಲಿ ಎಂಬ ಸದಿಚ್ಛೆ….
              ಇಲ್ಲಿ ನಿಮಗಾಗಿ ಲೇಕನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ ನಮ್ಮೂರ ನಡುವೆ ಇರುವ ಕ್ಷೇತ್ರಗಳ ಪರಿಚಯ ಮಾಲಿಕೆ “ಕ್ಷೇತ್ರ ದರ್ಶನ”, ಎರಡನೇಯದಾಗಿ ಪರಶುರಾಮನಿಂದ ನಿರ್ಮಿತವಾದ 7 ಮೋಕ್ಷಪ್ರದ ಕ್ಷೇತ್ರಗಳ ಪರಿಚಯ ಮಾಲಿಕೆ “ಸಪ್ತಕ್ಷೇತ್ರ ವೈಭವ”, ಕೊನೆಯದಾಗಿ ಹಲವಾರು ದೇವರು, ದೈವಗಳ ಮೂಲ ಹಿನ್ನಲೆ, ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವ “ದಿವ್ಯಮಹಾತ್ಮೆ”. ಹೀಗೆ ಮೂರು ವಿಭಾಗದಲ್ಲಿ ಆಸ್ತಿಕರ ಮನದ ಭಾವನೆಗೆ ತಕ್ಕಂತೆ ಪುಟವನ್ನು ರೂಪಿಸಲಾಗಿದೆ.
              ನೀವೂ ಕೂಡಾ ನಿಮ್ಮ ಊರಿನಲ್ಲಿರುವ ಪುಣ್ಯಪ್ರದ ಕ್ಷೇತ್ರಗಳ ಬಗ್ಗೆ ನಮ್ಮ-ನಾಡು ಬ್ಲಾಗ್ನನಲ್ಲಿ ಮಾಹಿತಿಯನ್ನು ನೀಡಬಹುದು. ಇದಕ್ಕೆ ನೀವು ಮಾಡಬೇಕಾದದ್ದು ಅಲ್ಲಿನ ಕ್ಷೇತ್ರ ಮಾಹಿತಿಯ ಜೊತೆ ಅಲ್ಲಿನ ಚಿತ್ರ ಸಂಗ್ರವನ್ನು ನಮ್ಮ-ನಾಡು e-mail ವಿಳಾಸಕ್ಕೆ ಕಳುಹಿಸಿಕೊಡಿ. E-mail : Raghu.koteshwara113@gmail.com (ವಿ.ಸೂ : ಕ್ಷೇತ್ರದ ಮಾಹಿತಿ ಆದಷ್ಟು ಸಂಕ್ಷಿಪ್ತವಾಗಿರಲಿ, ಚಿತ್ರ ಸಂಗ್ರಹದಲ್ಲಿ ಅಲ್ಲಿನ ಮೂಲ ದೇವರ/ದೇವತೆಯ ಚಿತ್ರ ಮುಖ್ಯವಾಗಿರುತ್ತದೆ, ಹಾಗೂ ಪುರಾಣಪ್ರಸಿದ್ಧ ಸ್ಥಳವಾದರೆ ಅಲ್ಲಿನ ಮೂಲ ಐತಿಹ್ಯದ ಜೊತೆಗೆ ಬರೆದು ಕಳಿಸಿ, ಸಾಧ್ಯವಾದರೆ ಅಲ್ಲಿನ ವಿಳಾಸದ ಜೊತೆಗೆ ಅಲ್ಲಿನ ದೂರವಾಣಿ ಸಂಖ್ಯೆಯನ್ನು ಕೂಡಾ ನಮಗೆ ಕಳಿಸಿ ಕೊಡಿ) ನೀವು ಕೊಡುವ ಒಂದು ಕ್ಷೇತ್ರದ ಮಾಹಿತಿಯು ನಮಗೆ ಅಮೂಲ್ಯವಾದದ್ದು. ಆ ಕ್ಷೇತ್ರದ ಶಕ್ತಿಯ ಅನುಗ್ರಹವು ನಿಮಗೆ ದೊರಕುವುದರಲ್ಲಿ ಸಂಶಯವಿಲ್ಲ.
              ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿದ ‘ನಮ್ಮ-ನಾಡು’ ಓದುಗರು ಮುಂದೆಯೂ ಕೂಡಾ ಇದೇ ರೀತಿ ನಮ್ಮೊಂದಿಗೆ ಸಹರಿಸಿ, ಪ್ರೋತ್ಸಾಹಿಸಿ…
     
ಇಂತಿ ನಿಮ್ಮವ :ರಾಘವ್ ಕೋಟೇಶ್ವರ