Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Gopadi Chikkamma Temple, Koteshwara, Kundapura -TQ


Shree Chikku amma Temple, Gopadi, Kundapura Tq.

ಶ್ರೀ ಬ್ರಹ್ಮಲಿಂಗೇಶ್ವರ ಚಿಕ್ಕುಅಮ್ಮ ದೈವಸ್ಥಾನ, ಗೋಪಾಡಿ, ಕುಂದಾಪುರ ತಾಲೂಕು.


Sri Gopadi Chikkamma Devi


ಕುಂದಾಪುರ ತಾಲೂಕು ಕೋಟೇಶ್ವರ ಸಮೀಪದ ಗೋಪಾಡಿಯ ಆಸ್ತಿಕರ ಆರಾಧ್ಯದೇವತೆ ಶ್ರೀ ಚಿಕ್ಕು ಅಮ್ಮ ಮತ್ತು ಬ್ರಹ್ಮಲಿಂಗೇಶ್ವರ ದೇವಸ್ಥಾನವು ಒಂದು ಜಾಗೃತ ಸಾನ್ನಿಧ್ಯವಾಗಿ ಇಂದು ಪ್ರಸಿದ್ಧಿಯತ್ತ ಮುನ್ನಡೆಯುತ್ತಿರುವ ದೈವಸ್ಥಾನಗಳಲ್ಲಿ ಪ್ರಮುಖವಾಗಿ ಗುರುತಿಸಲ್ಪಡುತ್ತದೆ. ಹೀಗೆ ತನ್ನದೇ ಭಕ್ತರನ್ನು ಹೊಂದಿರುವ ಶ್ರೀ ಬ್ರಹ್ಮಲಿಂಗೇಶ್ವರ ಸಮೇತ ಚಿಕ್ಕುಅಮ್ಮನವರು ಮತ್ತು ಪರಿವಾರ ಶಕ್ತಿಗಳು ನೆಲೆಸಿರುವ ಭವ್ಯ ಮಂದಿರತ್ತ 'ನಮ್ಮ-ನಾಡು' ಪಯಣ.

ಕ್ಷೇತ್ರದ ಹಿನ್ನಲೆ :-
ಅನೇಕ ದಶಕಗಳ ಹಿಂದೆ ಈಗಿನ ದೈವಸ್ಥಾನ ಇರುವ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಒಂದು ಉದ್ಭವಲಿಂಗ ಕಾಣಿಸಿದಾಗ ಈ ಜಾಗದ ಒಡೆಯರಾದ ಬಿಳಿಯರ ಮನೆತನದವರು ಅದನ್ನು ಬ್ರಹ್ಮಲಿಂಗೇಶ್ವರ ನೆಂದು ಗುರುತಿಸಿ ಅದಕ್ಕೊಂದು ಸಣ್ಣ ಗುಡಿ ಕಟ್ಟಿ ಪೂಜಿಸಿ ಅನುಗ್ರಹ ಪಡೆಯತೊಡಗಿದರು. ಕಾಲಕ್ರಮೇಣ ಹಾವಳಿ ಕೆರೆಯ ಚಿಕ್ಕು ಅಮ್ಮ, ಕುಂಜ್ಞಾಡ್ ಹಾಯ್ಗುಳಿ, ವೈದ್ಯರ ಬೆಟ್ಟಿನ ಯಕ್ಷಿ, ಕಲ್ಲುಕಟ್ಟಿಗ, ಸೌಡದ ಹಾಯ್ಗುಳಿ ಹೀಗೆ ಅನೇಕ ದೈವಗಣಗಳು ಇಲ್ಲಿ ಬಂದು ನೆಲೆನಿಂತವು. ಮೊಟ್ಟ ಮೊದಲು ಲಿಂಗವನ್ನು ನೋಡಿದ ಮನೆತನವು 'ಹುಟ್ಟಿನಬುಡ' ಎಂದು ಇಲ್ಲಿ ವಿಶೇಷ ಸ್ಥಾನಮಾನ ಪಡೆದರೆ, ಗುಡಿ ಕಟ್ಟಿಸಿದ ಬಿಳಿಯರ ಮನೆತನದವರು ಅನವಂಶೀಯವಾಗಿ ಮೊಕ್ತೇಸರ ಪಟ್ಟವನ್ನು ಪಡೆದರು.
Gopadi Chikkamma, Koteshwara
          ಅಂದಿನಿಂದ ಇಂದಿನವರೆಗೂ ಇದೊಂದು ಜಾಗ್ರತಸ್ಥಾನವಾಗಿದೆ. ಸಂತತಿ ಇಲ್ಲದವರು, ಅವಿವಾಹಿತೆಯರು, ಕಾಣೆಯಾದವರ ಪೋಷಕರು, ವಸ್ತುಗಳನ್ನು ಕಳೆದುಕೊಂಡವರು, ರೋಗರುಜಿನಗಳಿಂದ ಬಳಲುತ್ತಿರುವವರು ಮುಂತಾದವರು ಇಲ್ಲಿ ಹರಕೆಹೊತ್ತು ತಮ್ಮ ಮನದಿಚ್ಛೆಯನ್ನು ಪೂರೈಸಿಕೊಂಡು ಗೆಂಡಸೇವೆ,  ತುಲಾಭಾರಸೇವೆ, ಸಿಡಿಸೇವೆ, ಮಡೆಪ್ರದಕ್ಷಿಣೆ, ಸಂಕ್ರಾಂತಿ ಪೂಜೆ, ಹಗಲು ಪೂಜೆ, ಪಟ್ಟೆ, ಚಿನ್ನಾಭರಣಗಳನ್ನು ಒಪ್ಪಿಸುವುದು ಇಲ್ಲಿ ಸರ್ವೇಸಾಮಾನ್ಯ. ಇಂತಹ ಕಾರಣಿಕ ತಾಣವಾದ ಇಲ್ಲಿ ಬ್ರಹ್ಮಲಿಂಗೇಶ್ವರ, ಚಿಕ್ಕು ಅಮ್ಮ ಹಾಗೂ ಎಲ್ಲಾ ಪರಿವಾರ ಗಣಗಳಿಗೂ ನಿತ್ಯಪೂಜೆ ನಿರಂತರವಾಗಿ ನಡೆದು ಬರುತ್ತಿದೆ.
          ಊರ, ಪರವೂರ, ಮಾಗಣೆಯ ಭಕ್ತಾಭಿಮಾನಿಗಳ ಸಹಕಾರದಂದ ಹಳೆಯ ಹುಲ್ಲಿನ ಮಾಡಿನ ದೈವಸ್ಥಾನವು ಜೀರ್ಣೋದ್ಧಾರಗೊಂಡು ಹಂಚಿನ ಮುಚ್ಚಿಗೆಯ ಕಟ್ಟಡವಾಗಿದೆ. ಬುದ್ಯರ ಕುಟುಂಬದವರು ನಿರ್ಮಿಸಿ ಕೊಟ್ಟಿದ್ದ ಹೆಬ್ಬಾಗಿಲು ಉಪ್ಪರಿಗೆಯು ಜೀರ್ಣೋದ್ದಾರರಗೊಂಡು ಮಾಗಣೆ ಹೆಬ್ಬಾಗಿಲು ಆಗಿದೆ. ದೈವಸ್ಥಾನದ ದಕ್ಷಿಣದಲ್ಲಿ ನಾಗಬನ, ಉತ್ತರದಲ್ಲಿ ಯಕ್ಷಿ-ಕಲ್ಲುಕುಟ್ಟಿಗ ಗುಡಿಗಳು, ಈಶಾನ್ಯದಲ್ಲಿ ತೀರ್ಥಬಾವಿ, ದೈವಸ್ಥಾನದ ಎದುರಿನ ಅಂಗಳದಲ್ಲಿ ಸಿಮೆಂಟ್ ಶೀಟಿನ ಮಾಡು, ಸುತ್ತಲೂ ಆವರಣ ಗೋಡೆ, ನೂತನ ಸ್ವಾಗತಗೋಪುರ 6.50ಲಕ್ಷ ವೆಚ್ಚದಲ್ಲಿ ಜೀರ್ಣೋರ್ದ್ಧಾರಗೊಂಡಿದೆ. ಹೀಗೆ ಅನೇಕ ಜೀರ್ಣೋದ್ದಾರ ಕಾರ್ಯಗಳು ನಡೆದಿವೆ. ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ವಾರ್ಷೀಕ ಜಾತ್ರೆಯಲ್ಲಿ ಸುಮಾರು 10,000 ಜನ ಭಕ್ತರಿಗೆ ಅನ್ನಸಂತರ್ಪಣೆ ಮಾಡಿಸಲಾಗುತ್ತದೆ. ಈ ಕಾರಣಕ್ಕಾಗಿ ಪಶ್ಚಿಮದಲ್ಲಿ ಒಂದು ಸುಸಜ್ಜಿತ ಅಡುಗೆ ಮನೆ, ನೀರಿನ ಟ್ಯಾಂಕ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ದಾರಿಯ ವಿವರ : ಕುಂದಾಪುರ ತಾಲೂಕು ಕೋಟೇಶ್ವರದಿಂದ ಸಮುದ್ರ ಕಿನಾರೆಯಲ್ಲಿ ಬೀಜಾಡಿ-ಗೋಪಾಡಿ ರಸ್ತೆಯ ಮುಖಾಂತರ ಸಾಗಿ ಮುಂದೆ ಹೋದಾಗ ಶ್ರೀದೇವಿಯ ಭವ್ಯಮಂದಿರ ಹಾಗೂ ದೇವಿಯ ಸ್ವಾಗತಗೋಪು ನಮ್ಮ ಕಣ್ಣಿಗೆ ಕಾಣಸಿಗುತ್ತದೆ.

ವಿಳಾಸ : -
ಶ್ರೀ ಮಾಗಣೆಕಟ್ಟಿನ ಬ್ರಹ್ಮಲಿಂಗೇಶ್ವರ ಚಿಕ್ಕುಅಮ್ಮ ದೈವಸ್ಥಾನ,
ಗೋಪಾಡಿ, ಕೋಟೇಶ್ವರ - ಅಂಚೆ, ಕುಂದಾಪುರ ತಾಲೂಕು.
ದೂರವಾಣಿ : 08254-263344