ಶ್ರೀ ಭಗವತಿ ದೇವಸ್ಥಾನ, ಸಸಿಹಿತ್ಲು, ಮಂಗಳೂರು ತಾ|
Shree Bhagavathi Temple, Sasihithlu, D.K
![]() |
Sri Sasihithlu Bhagavathi Ammanavaru |

ಶ್ರೀ ಕ್ಷೇತ್ರವು ಇಂದು ಅತ್ಯಂತ ಕಾರಣಿಕ
ಮತ್ತು ಮಹಾ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಮಾತೃತೆ ಶಕ್ತಿಯಾದ ಭಗವತಿಯು ಇಲ್ಲಿ ವಿರಾಜಮಾನವಾಗಿ
ಭಕ್ತರ ಕಾಯ್ವ ಮಹಾತಾಯಿಯಾಗಿದ್ದಾಳೆ. ಮಾತೆಯು ಬೇಡಿ ಬರುವ ಭಕ್ತರ ಪಾಲಿನ ಅಭಿಷ್ಠಪ್ರದಾಯಿನಿಯಾಗಿದ್ದಾಳೆ.
ಸ್ಥಳ ಪುರಾಣ : ಹಿಂದೆ ಶೋನಿತಪುರದಲ್ಲಿ ದಾರಿಗಾಸುರನೆಂಬ
(Darigasura) ಮದಪ್ರಮತ್ತನಾದ ರಕ್ಕಸ ಭೂಮಂಡಲದಲ್ಲಿ ಮರೆಯುತ್ತಿರಲು ದೇವಾನುದೇವತೆಗಳು ಹಾಗೂ ಭೂಮಿಯ
ಜನರು ಮಹಾನ್ ದೈತ್ಯನಿಂದ ಕಷ್ಟ-ಕಾರ್ಪಣ್ಯಗಳಿಗೆ ತುತ್ತಾದರು. ದಾರಿಗಾಸುರನು ಬ್ರಹ್ಮದೇವನಿಂದ ವರವನ್ನು
ಪಡೆದು ಯೋನಿಜರಿಂದ ಸಾವು ಬರಬಾರದೆಂದು ಹಾಗೂ ಪುರುಷ ಜೀವಿಯಿಂದ ಸಾವು ಬರಬಾರದೆಂದು ಅಜೇಯತೆಯನ್ನು
ಪಡೆದಿದ್ದನು. ಅಂತೆಯೇ ಮಹಾವಿಷ್ಣುವಿನೊಂದಿಗೆ ಹೋರಾಡಿ ಅದನ್ನು ತನ್ನ ವಶ ಮಾಡಿಕೊಂಡಿದ್ದನು. ಹೀಗೆ
ಭೂಮಂಡದಲ್ಲಿ ಆಗುತ್ತಿರುವ ಅನಾಚಾರಗಳನ್ನು ಕಂಡು ದೇವತೆಗಳಲ್ಲಿ ಭಕ್ತಾದಿಗಳು ದೇವರಲ್ಲಿ ಮೊರೆಯಿಟ್ಟರು.
ಆಗ ಲೋಕದ ಒಡೆಯನಾದ ಪರಶಿವನು (ಕೆಲವೊಂದು ಪುರಾಣಾನುಸಾರ ಮಹಾವಿಷ್ಣು - ಪರಶಿವ ಮತ್ತು ಮಹಾವಿಷ್ಣುವಿನಲ್ಲಿ
ಭೇದಗಳಿಲ್ಲ ) ಚಿಂತಾಕ್ರಾಂತಾರಾಗಿರಲು ಶಿವನ ಕಂಗಳ ಹನಿಯಿಂದ ಸಪ್ತ ದುರ್ಗೆಯರು ಉದಿಸಿದರು. ಅದರಲ್ಲಿ
ಭಗವತಿಯು
ಮೊದಲನೇಯವಳು.

ಹೀಗೆ ದುರುಳ ದಾನವನ ದಮನ ಮಾಡಿ
ಮುಂದೆ ಭೋಲೊಕದಲ್ಲಿ ತನ್ನ ಸೋದರಿಯರೊಡಗೂಡಿ ಸತ್ಯಶೋಧನೆಯಲ್ಲಿ ತೊಡಗಿ ತಾವು ಮುಂದೆ ನೆಲೆಯಾಗಬೇಕಾದ
ಸ್ಥಾನವನ್ನು ಅರಸುತ್ತಾ ಮುಂದೆ ಸಾಗುತ್ತಾರೆ. ಹೀಗೆ ಮುಂದೆ ಸಾಗುವ ವೇಳೆಯಲ್ಲಿ ಇವರಿಗೆ ಹೋಗುವ ದಾರಿಯಲ್ಲಿ
ಆದಿ ಭೇತಾಳನೆಂಬವನು ಅಡ್ಡಲಾಗಿ ಮಲಗಿರುತ್ತಾನೆ. ಮಾತೆಯು ಅವನನ್ನು ದಾರಿಬಿಡುವಂತೆ ಕೇಳಿದಾಗ ಅವನು
ವಿರೋಧವನ್ನು ವ್ಯಕ್ತ ಪಡಿಸುತ್ತಾನೆ. ಆಗ ಮಾತೆಯು ತನ್ನ ದಿವ್ಯಶಕ್ತಿಯಿಂದ ಅವನಲ್ಲಿ ಜ್ಞಾನವನ್ನು
ಮೂಡಿಸುತ್ತಾಳೆ. ಆಗ ಆದಿವೇತಾಳನಾದ ಗುಳಿಗನು (Guliga) ಮಾತೆಯಲ್ಲಿ ಕ್ಷಮೆಯಾಚಿಸಿ ಅಮ್ಮ ನಿಮ್ಮ ಜೊತೆಯಲ್ಲಿ
ನಾನೆಂದು ಇರುತ್ತೇನೆ, ಎಂದಿಗೂ ನಿಮ್ಮ ಸೇವೆಯನ್ನು ಮಾಡುವ ಭಾಗ್ಯಾಧಿಗಳನ್ನು ನನಗೆ ಕರುಣಿಸಿರಿ ಎಂದು
ಬೇಡಿಕೊಂಡಾಗ ಭಗವತಿಯು ಆದಿವೇತಾಳನನ್ನು ನೀನು ನನ್ನ ಸೇವಕನಾಗಿ ನಮಗೆ ಸಹಾಯವನ್ನು ಮಾಡಿಕೊಂಡು ಇರು
ಎಂಬುದಾಗಿ ಹೇಳುತ್ತಾಳೆ.
ಅಂತೆ ಮುಂದೆ ಸಾಗುತ್ತಾ ಸಾಗುತ್ತಾ
ಘಟ್ಟದಿಂದ ಪಂಜನ್ನು ಹಿಡಿದು ಉರುಳುರುಳಿ ಬಂದ 'ಪಂಜುರ್ಳಿ' ದೈವವು
ಮಾತೆಯ ಶಕ್ತಿಯನ್ನು ತಿಳಿಯದೆ ಭಗವತಿಯೊಂದಿಗೆ ಸಮರಕ್ಕೆ ನಿಲ್ಲುತ್ತದೆ. ಆದರೆ ಭಗವತಿ ತನ್ನ ಶಕ್ತಿಯಿಂದ
ಆ ದೈವವನ್ನು ಮೆಟ್ಟಿನಿಲ್ಲುತ್ತಾಳೆ. ಹೀಗೆ ಆ ದೈವವು ಕೂಡಾ ಭಗವತಿಯೊಡಗೂಡಿ ಮುಂದೆ ಸಾಗುವಾಗ ಸಮುದ್ರವನ್ನು
ದಾಟುವ ಸಂದರ್ಭದಲ್ಲಿ ದೋಣಿಯ ಅವಶ್ಯಕತೆಯು ಇರುತ್ತದೆ. ಆಗ ಒಂದು ಗಂಧದ ಮರವನ್ನು ದೋಣಿಯನ್ನಾಗಿಸಲು
ಮುಂದಾಗುತ್ತಾರೆ. ಆಗ ಅದನ್ನು ಮಾಡಲು ಹಾಗೂ ಭೂಲೋಕದಲ್ಲಿ ತಮ್ಮ ಶಕ್ತಿಯನ್ನು ತೋರ್ಪಡಿಸುವ ಉದ್ದೇಶದಿಂದ
ಸಪ್ತ ದುರ್ಗೆಯರು ಸಾಮಾನ್ಯರಂತೆ ಬಂದು ಒಬ್ಬ ಧನಿಕನಲ್ಲಿ ಹಣವನ್ನು ಕೇಳುತ್ತಾರೆ. ಅದಕ್ಕೆ ಧನಿಕನು
ನೀವು ಹಣದ ಬದಲು ಬೇರೆ ಯಾವುದಾದರೂ ವಸ್ತುವನ್ನು ಇಡಬೇಕು ಎಂದು ಅಂಹಂಕಾರದಿಂದ ಹೇಳುತ್ತಾನೆ. ಆಗ ಭಗವತಿಯು
ತನ್ನ ಕಾಲಿನ ಗೆಜ್ಜೆಯನ್ನು ತೆಗೆದುಕೊಟ್ಟು ಹಣವನ್ನು ಪಡೆದು ಹೋಗುತ್ತಾಳೆ. ಆದರೆ ಹೋಗುವ ಮುನ್ನ ಧನಿಕನಲ್ಲಿ
ನಾನು ಬರುವ ಮೊದಲು ಇದನ್ನು ನೀವು ಬಳಸಕೂಡದು ಎಂದು ಮುಂದೆ ನಡೆಯುತ್ತಾರೆ. ಆದರೆ ಧನಿಕನು ಭಗವತಿಯ
ಶಕ್ತಿಯನ್ನು ತಿಳಿಯದೆ ಅಹಂಕಾರದಿಂದ ಮಾತೆಯ ಕಾಲುಗೆಜ್ಜೆಯನ್ನು ತನ್ನ ಮಗನಿಗೆ ಕಾಲಿಗೆ ಕಟ್ಟಿ ಮಗನಿಂದ
ನೃತ್ಯ ಮಾಡಿಸುತ್ತಾನೆ. ಇದರಿಂದ ಕುಪಿಳಾದ ಭಗವತಿಯು ಧನಿಕನ ಮಗನನ್ನು ಮಾಯವಾಗಿಸುತ್ತಾಳೆ. ಆ ಕ್ಷಣದಲ್ಲಿ
ಧಣಿಕ ಬೆರಗಾಗಿ ಮಾತೆಯಲ್ಲಿ ಅಳುತ್ತಾ ಅಮ್ಮಾ ನನ್ನ ಮಗನನ್ನು ನನಗೆ ಮರಳಿಸು, ನಾನು ಮಾಡಿದ ತಪ್ಪಿನ
ಅರಿವು ನನಗೆ ಆಗಿದೆ ಎಂದಾಗ ಮಾತೆಯು ಮುಂದೆ ನಿನಗೆ ಒಂದಕ್ಕೆ ಹತ್ತು ಮಕ್ಕಳ ಭಾಗ್ಯವನ್ನು ಕರುಣಿಸುತ್ತೇನೆ
ಎಂದು ಹೇಳಿ ಮಾಯವಾಗುತ್ತಾಳೆ.
ಹೀಗೆ ಗಂಧದ ದೋಣಿಯನ್ನು ಮಾಡಿಕೊಂಡು
ಭಗವತಿ ತನ್ನ ಸೋದರಿಯರೊಂದಿಗೆ ಆಪ್ರ ಸೇವಕ ಗುಳಿಕನ ಸಂಗಡವಾಗಿ ಸಾಗುವಾಗ ಸಮುದ್ರದಲ್ಲಿ ಪಂಜುರ್ಳಿಯನ್ನು
ದೋಣಿ ನಡೆಸಲು ತಿಳಿಸುತ್ತಾಳೆ. ಆಗ ಪಂಜುರ್ಳಿಯು ಅಲ್ಲಿ ಮೋಸವೆಸಗುತ್ತಾನೆ. ಆಗ ಭಗವತಿಯು ಉಗ್ರವಾಗಿ
ಪಂಜುರ್ಳಿ ದೈವವನ್ನು ತನ್ನ ಕಾಲಿನಿಂದ ಘಟ್ಟಕ್ಕೆ ಎಸೆಯುತ್ತಾಳೆ. ಆ ದೈವವು ತನ್ನ ತಪ್ಪನ್ನು ತಿಳಿದು
ತಾಯಿಯಲ್ಲಿ ಕ್ಷಮೇಯಾಚಿಸಿ ಅಮ್ಮನಲ್ಲಿ ಶರಣಾಗುತ್ತದೆ.
ಹೀಗೆ
ಮುಂದೆ ಸಾಗುತ್ತಾ ಒಂದು ಸಮುದ್ರ ತೀರದಲ್ಲಿ ಬಂದು ಇಳಿಯುತ್ತಾರೆ. ಅದೆ ಇಂದಿನ ಸಸಿಹಿತ್ಲು ಕ್ಷೇತ್ರ.
ಅಲ್ಲಿಗೆ ಬಂದಾಗ ಭಗವತಿಗೆ ಆಯಾಸವಾಗುತ್ತದೆ. ಅದಕ್ಕೆ ಭಗವತಿಯು ಹಾಗೂ ತನ್ನ ಪರಿವಾರದೊಂದಿಗೆ ಅಲ್ಲಿನ
ತೆಂಗಿನ ತೋಟದ ಬಳಿ ಇರುವ ಆಲದ ಮರದ ಮೇಲೆ ವಿಶ್ರಾಂತಿಯನ್ನು ಪಡೆಯುತ್ತಾರೆ. ಆ ವೇಳೆಯಲ್ಲಿ ಆ ತೋಟದ
ಒಡೆಯನಾದ ಶೇಂದಿ ತೆಗೆಯುವ ಕೊಂದಕಣ್ಣಾಯನೆಂಬ (Kondakannaya
– Billava, Tiya) ಮಲಯಾಳಿ ಬಿಲ್ಲವನು ಅಲ್ಲಿ ಕಾಣಿಸುತ್ತಾನೆ. ಆತನಿಗೆ ಭಗವತಿಯ ಪರಿವಾರವು
ಸಾಮಾನ್ಯರಂತೆ ಕಾಣಿಸುತ್ತದೆ. ಹಾಗೇ ಸಾಮಾನ್ಯವಾಗಿ ಅವರನ್ನು ಮಾತನಾಡಿಸಿದ ಬಿಲ್ಲವನು ಅವರಲ್ಲಿ ತನ್ನ
ತೋಟದಲ್ಲಿ ಏನು ಮಾಡುವಿರೆಂದು ಕೇಳುತ್ತಾನೆ. ಆದರೂ ಕೂಡಾ ಭಗವತಿಯ ಪರಿವಾರದಲ್ಲಿ ಏನೋ ಒಂದು ಭವ್ಯವಾದ
ತೇಜಸ್ಸು ಕಾಣಿಸುತ್ತದೆ. ಹೀಗೆ ಭಗವತಿಯ ಪರಿವಾರ ಕುಡಿಯಲು ಬಿಲ್ಲವನಲ್ಲಿ ಸಿಯಾಳವನ್ನು ಕೇಳಿದಾಗ ಅವನು
ಮೊದಲಿಗೆ ಒಪ್ಪುವುದಿಲ್ಲ, ಆಗ ಗುಳಿಗನು ಬಿಲ್ಲವನಲ್ಲಿ ನೀನು ಒಂದು ಸೀಯಾಳ ಕೊಟ್ಟರೆ ನಾನು ಅದಕ್ಕೆ
10 ಸಿಯಾಳವನ್ನು ಮರಳಿ ಕೊಡುತ್ತೇನೆಂದು ಹೇಳುತ್ತಾನೆ. ಅದಕ್ಕೆ ನಿರಾಕರಿಸಿ ವಾದದಲ್ಲಿ ತೊಡಗಿದಾಗ
ಗುಳಿಗನು ತನ್ನ ದೃಷ್ಠಿಯಿಂದಲೆ ಸಿಯಾಳವನ್ನು ಮರದಿಂದ ಉದುರಿಸುತ್ತಾನೆ. ಆಗ ಬಿಲ್ಲವನು ಆಶ್ವರ್ಯಗೊಂಡು
ಇವರು ಸಾಮಾನ್ಯರಲ್ಲ ಎಂದು ಭಾವಿಸಿ ಅವರಲ್ಲಿ ಕ್ಷಮೆ ಯಾಚಿಸಿ ಅವರಿಗೆ ಸಿಯಾಳವನ್ನು ಕೊಯ್ಯುತ್ತಾನೆ.

ಅಂತೆಯೇ
ಭಗವತಿಯ ಸೋದರಿ ದುರ್ಗೆಯು ಶಾಂಬವಿ (Shambavi River)
ನದಿಯಲ್ಲಿ ಲಿಂಗರೂಪದಲ್ಲಿ ಉದಿಸಿ ಮುಂದೆ ಬಪ್ಪಬ್ಯಾರಿಯ ಮುಖಾಂತರ ಬಪ್ಪನಾಡಿನಲ್ಲಿ ಭಕ್ತರ ಕಾಯ್ವ
ಮಹಾಮಾಯೆಯಾಗುತ್ತಾಳೆ. ಪ್ರತಿ ವರ್ಷ ಬಪ್ಪನಾಡು ಜಾತ್ರೆಯಂದು ಭಗವತಿಯು ಬಪ್ಪನಾಡಿಗೆ (Bappanadu) ಬರುವ ಸಂಪ್ರದಾಯವಿದೆ.
ದೇವಾಲಯದಲ್ಲಿ
ವಾಷರ್ಿಕ ಜಾತ್ರಾ ಮಹೋತ್ಸವವು ಮಾಚರ್್ ಏಪ್ರೀಲ್ ನಲ್ಲಿ ಬರುತ್ತದೆ. ಇಲ್ಲಿ ಕಂಚೀಲು ಸೇವೆಯು ಬಹು
ವಿಶೇಷವಾದದ್ದು. ಶ್ರೀ ದೇವಿಯ ಯಕ್ಷಗಾನ ಮೇಳವು ಕೂಡಾ ಇದ್ದು ಮಾತೆಗೆ ಇಷ್ಟವಾದ ಬೆಳಕಿನ ಸೇವೆಯ ಹರಕೆಯು
ಇಲ್ಲಿ ನಡೆಯುತ್ತದೆ.
ಹೀಗೆ
ಬಿಲ್ಲವ ಕೊಂದಕಣ್ಣಾಯನಿಗೆ ಒಲಿದು ಭಕ್ತಿಗೆ ಒಲಿವ ಭಗವತಿಯಾಗಿ ಸಸಿಹಿತ್ಲುವಿನ ಮಹಾನ್ ಕಾರಣೀಕ ಶಕ್ತಿಯಾಗಿ
ಮೆರೆವ ಪರಾಶಕ್ತಿಯ ಕಥಾನಕವನ್ನು ಓದಿದ ನಿಮಗೆಲ್ಲರಿಗೂ ಅಂಬಿಕೆಯು ಸನ್ಮಂಗಳವನ್ನುಂಟು ಮಾಡಲಿ.
ವಿಳಾಸ : -
ಶ್ರೀ ಭಗವತಿ ಅಮ್ಮನವರ
ದೇವಸ್ಥಾನ,
ಸಸಿಹಿತ್ಲು,
ಮಂಗಳೂರು - ತಾ ||
ಕರ್ನಾಟಕ.
ದಾರಿಯ ವಿವರ : ಶ್ರೀ ಕ್ಷೇತ್ರವನ್ನು ತಲುಪಲು ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಸಾಗುವಾಗ
ಹಳೆಯಂಗಡಿ ಮುಕ್ಕ ಸಮೀಪದ ವೃತ್ರದ ಮೂಲಕ ಸಮುದ್ರ ಕಿನಾರೆಯತ್ತ ಸರಿಸುಮಾರು 4-5 ಕಿ.ಮೀ ಸಾಗಿದರೆ ಸಮುದ್ರ
ತಟಿಯ ಸುಂದರ ಮನೋಹರ ಸೊಬಗಿನ ನಡುವೆ ದೇವಾಯಲವು ಕಂಗೊಳಿಸುತ್ತದೆ.