ಶ್ರೀ ಮಹಾ ಪ್ರತ್ಯಂಗಿರ ದೇವಿ ಮಹಾತ್ಮೆ(ಅಥರ್ವಣ ಭದ್ರಕಾಳಿ)
Sri Prathyangira Devi Mahathmyam(Atharvana Badrakali)
![]() |
Sri Prathyangira Devi |

ಹೀಗೆ ಮಾತೆಯು ಶಿವನ ಮೂರನೇ ಕಣ್ಣಿನಿಂದ
ಜನಿಸಿದವಳಾಗಿರುತ್ತಾಳೆ. ಇವಳು ಜನಿಸಿದಾಗ ಅತೀ ಉಗ್ರವಾದ ದೇವಿಯಾಗಿ ಜನಿಸಿದ್ದಾಳೆ. ಮಾತೆಯು ಅತೀ
ಉಗ್ರಶಕ್ತಿಯಾಗಿದ್ದು ಮಾತೆಯನ್ನು ಉಪಾಸನೆ ಮಾಡುವವರಿಗೆ ದೇವಿಯು ಬೇಡಿದ್ದನ್ನು ನೀಡುತ್ತಾಳೆ.
ಹೀಗೆ ಇನ್ನೊಂದು ಉಲ್ಲೇಖದ ಪ್ರಕಾರ
ಶ್ರೀ ಮಹಾವಿಷ್ಣುವು ಉಗ್ರನರಸಿಂಹ ಅವತಾರವನ್ನು ಧಾರಣೆ ಮಾಡಿದಾಗ ಮಹಾವಿಷ್ಣುವನ್ನು ಸಮಾಧಾನಿಸಿ ಶಾಂತ
ರೂಪಕ್ಕೆ ತರುವಲ್ಲಿ ದೇವಾನುದೇವತೆಗಳು ವಿಫಲರಾದರು. ಮುಂದೆ ಪರಶಿವನು ಶರಭ (2 ದೊಡ್ಡ ರೆಕ್ಕೆ ಮತ್ತು
ಮಾನವ ದೇಹದಲ್ಲಿ ಇರುವ ಒಂದು ಪಕ್ಷಿಯಾಗಿದೆ) ರೂಪವನ್ನು ತಾಳಿ ಮಹಾವಿಷ್ಣುವನ್ನು ಸಮಾಧಾನಗೊಳಿಸಿದನು.
ಈ ಅವತಾರವನ್ನು ತಾಳಿದಾಗ ಆ ಎರಡು ರೆಕ್ಕೆಗಳು ಶೂಲಿನ ಮತ್ತು ಪ್ರತ್ಯಂಗಿರ ದೇವಿಯರಿಂದ ಆಗಿದೆ.
Sri Sharabeshwara |
ಹೀಗೆ ಶರಭ ನರಸಿಂಹ ಸ್ವಾಮಿಯನ್ನು
ಸಮಾಧಾನ ಮಾಡಲು ಪ್ರಯತ್ನಿಸಿದಾಗ ಮುಂದೆ ಶರಭೇಶ್ವರನು ಅಷ್ಟಮುಖವನ್ನು ಧಾರಣೆ ಮಾಡಿ ಗಂಡಬೇರುಂಡ ರೂಪ
ತಾಳಿ ಮುಂದೆ ಉಗ್ರ ನರಸಿಂಹನ ರೂಪದಿಂದ ಉಗ್ರವಾದ ರೂಪಿಣಿಯಾಗಿ ಅವತರಿಸಿದಳು ಎಂದು ಹೇಳಲಾಗುತ್ತದೆ.
ಹೀಗೆ ಮಾತೆಯು ಒಂದು ಉಗ್ರಶಕ್ತಿಯಾದರೂ ಮುಂದೆ ಮಹಾನ್ ತಾಂತ್ರಿಕ ದೇವಿಯಾಗಿದ್ದಾಳೆ. ಈ ಮಾತೆಯನ್ನು
ಭಕ್ತಿ, ಶ್ರದ್ಧೆಗಳಿಂದ ಪೂಜೆ ಮಾಡಿದಲ್ಲಿ ಮಾತೆಯು ಒಲಿದು ಬರುತ್ತಾಳೆ.
ರಾಮಾಯಣದಲ್ಲಿ ಶ್ರೀ ರಾಮನ ವಿರುದ್ದ
ಹೋರಾಡಲು ರಾವಣನು ಶ್ರೀ ಪ್ರತ್ಯಂಗಿರ ದೇವಿಯನ್ನು ಆರಾಧಿಸಿ ಉಪಾಸನೆ ಮಾಡಿ ಹೋರಾಟ ಮಾಡಿದನು ಎಂಬುದು
ತಿಳಿದುಬರುತ್ತದೆ. ಮಾತೆಯು ಅತೀ ಉಗ್ರ ಸ್ವರೂಪಳು ಆದರೂ ಕೂಡಾ ಭಕ್ತರ ಪಾಲಿಗೆ ಶಾಂತಳೂ ಮತ್ತು ಮಂದಸ್ಮಿತಳೂ
ಆಗಿ ಕಂಡು ಬರುತ್ತಾಳೆ. ಈ ಮಾತೆಯನ್ನು ಭದ್ರಕಾಳಿ ಎಂದೂ ಕೂಡಾ ಕರೆಯುತ್ತಾರೆ.
ಶ್ರೀ ಪ್ರತ್ಯಂಗಿರ ದೇವಿಯ ಕಥನವನ್ನು
ಭಕ್ತಿಯಿಂದ ಓದಿದ ನಿಮಗೆಲ್ಲರಿಗೂ ಮಾತೆಯು ಸನ್ಮಂಗಳಗಳನ್ನು ಅನುಗ್ರಹಿಸಲಿ, ಸುಖ-ಸೌಭಾಗ್ಯಾಧಿಗಳನ್ನು
ನೀಡಲಿ.
“ಶ್ರೀ ಪ್ರತ್ಯಂಗಿರ
ಮಾತೆಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ”