Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Kumbri Kalikambe Temple

ಶ್ರೀ ಕುಂಬ್ರಿ ಕಾಳಿಕಾಂಬೆ ಅಮ್ಮನವರು, ಕುಂಬ್ರಿ, ಕೋಟೇಶ್ವರ. ಕುಂದಾಪುರ- ತಾ||
Sri Kumbri Kalikambe Ammanavaru, Kumbri, Koteshwara.



ಶ್ರೀ ಕುಂಬ್ರಿ ಜಗನ್ಮಾತೆ ಕಾಳಿಕಾಂಬಾ,
Sri Kumbri Kalikamba
 ಶ್ರೀ ದೇವಿ ಕುಂಬ್ರಿ ಮಾತೆಗೆ ಸಾಷ್ಟಾಂಗ ನಮಸ್ಕಾರಗೈಯ್ಯತ್ತಾ ದೇವಿಯ ಅನುಗ್ರಹ ಬೇಡುತ್ತಾ ದೇವಿ ಸರ್ವಮಂಗಳೆಗೆ ಭಿಕ್ತಿಯಿಂದ ನಮ್ಮ ಮನದೊಡಲ ಬೇಡಿಕೆಯನ್ನು ಸಲ್ಲಿಸೋಣ.....!!
         ಶ್ರೀ ಜಗನ್ಮಾತೆ ಕಾಳಿಕಾಂಬೆಯು ಕುಂದಾಪುರ ತಾಲೂಕಿನ ಕೋಟೇಶ್ವರದ ಸಮುದ್ರ ಸಮೀಪದಲ್ಲಿ ಇರುವ 'ಕುಂಬ್ರಿ' ಎಂಬ ಪುಣ್ಯ ತಾಣದಲ್ಲಿ ನೆಲೆನಿಂತು ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಪೊರೆಯುತ್ತಾ ಇದ್ದಾಳೆ. ಈ ತಾಯಿ ದಿನದಿಂದ ದಿನಕ್ಕೆ ಪವಾಡಗಳನ್ನು ನಡೆಸುತ್ತಾ ಇದ್ದಾಳೆ. ತನ್ನ ಪ್ರಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ ಭಕ್ತರು ಕೂಡಾ ದಿನದಿಂದ ದಿನಕ್ಕೆ ಈ ಮಹಾತಾಯಿಯನ್ನು ನೋಡಲು ತಂಡೋಪ ತಂಡವಾಗಿ ಬರುತ್ತಾರೆ. ಶ್ರೀ ದೇವಿ ಇಲ್ಲಿ ಕಂಕಣ ಭಾಗ್ಯ, ಉದ್ಯೋಗ, ಆರೋಗ್ಯ, ಮನಶ್ಶಾಂತಿ ಹೀಗೆ ಎಲ್ಲವನ್ನು ಕರುಣಿಸಿ ಕಾಯುತ್ತಾ ಇದ್ದಾಳೆ. ಶ್ರೀ ದೇವಿಯನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಈ ಅಮ್ಮನನ್ನು ಭಕ್ತಿಯಿಂದ ಬೇಡಿ ನಿಂದರೆ ಆಗದ ಕಾರ್ಯಗಳೇ ಇಲ್ಲ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಇಲ್ಲಿ ಈ ದೇವಿಯನ್ನು ಪೂಜಿಸುವುದು ಸುಮಂಗಲಿ ಸ್ವರೂಪಿಣಿಯಾದ ಒಬ್ಬ ಮಹೀಳೆ....!! ಈ ಮಹಿಳೆಗೆ ವಿಶ್ವಕರ್ಮರ ಕುಲದೇವತೆಯಾದ ಶ್ರೀ ಕಾಳಿಕಾಂಬೆಯು ಈ ಮಹಿಳೆಯಲ್ಲಿ ಆವೇಶಗೊಂಡು ನುಡಿಯನ್ನು ನುಡಿಯುತ್ತಾಳೆ. ಈ ನುಡಿಯು ಎಂದೆಂದೂ ಸುಳ್ಳಾದ ವರದಿಗಳೆ ತುಂಬಾ ವಿರಳ. ಹಾಗೇ ಇಲ್ಲಿ ಭಕ್ತಿ, ಶೃದ್ದೆಗಳೇ ಮುಖ್ಯ, ಮನದಲ್ಲಿ ಕೀಳು ಕಾಮನೆಗಳಿದ್ದರೆ ಅದನ್ನು ಈ ದೇವಿ ಸಹಿಸಲಾರಳು. ತಾಯಿ ಇಲ್ಲಿ ಭಕ್ತರಿಂದ ಕೇವಲ ಮುಗ್ದ ಮನಸ್ಸನ್ನು ಮಾತ್ರವೇ ಭಯಸುತ್ತಾಳೆ ವಿನಃ ಐಶ್ವರ್ಯವನ್ನಲ್ಲ...!! ಇಲ್ಲಿ ಶ್ರೀ ದೇವಿಗೆ ಪ್ರೀತ್ಯರ್ಥವಾಗಿ ಹೂವಿನ ಪೂಜೆ, ಕುಂಕುಮಾರ್ಚನೆ, ಕರ್ಪೂರ ಹಚ್ಚುವುದು, ಸಿಯಾಳ, ಅಂತೆ ಇನ್ನೂ ಕೆಲವಾರು ವಿಶೇಷ ಪೂಜಾದಿಗಳು ನಡೆಯುತ್ತದೆ.  ಇಲ್ಲಿ ಮಂಗಳವಾರ ಮತ್ತು ಶುಕ್ರವಾರ ದಿನ ಶ್ರೀ ಮಾತೆಯು ಆವೇಶಗೊಂಡು ಭಕ್ತರ ಸಂಕಷ್ಟಗಳನ್ನು ಆಲಿಸಿ, ಪರಿಹಾರಗಳನ್ನು ನೀಡುತ್ತಾಳೆ. ಶ್ರೀ ಮತಿ ಪ್ರೇಮ ಈ ಮಹಾತಾಯಿಯ ಸಾಕ್ಷಾತ್ಕಾರ ಆಗಿ ಮಹಾದೇವಿಯ ಪ್ರೀತಿಯ ಮಗಳಾಗಿ ಇವರ ಮೂಲಕ ತಾಯಿ ಭಕ್ತರ ಸಂಕಷ್ಟ ಪರಿಹರಿಸಿ, ಕಾಯುತ್ತಿದ್ದಾಳೆ.
      ಶ್ರೀ ದೇವಿಯ ಹರಿಕೆಯ ರೂಪವಾಗಿ ಸಾವಿರಾರು ಸೀರೆಗಳು ಅಮ್ಮನವರಿಗೆ ಸಂದಾಯವಾಗುತ್ತಿದೆ. ಅಂತೆಯೇ ಮಹಾದೇವಿಯಾದ ಕಾಳಿಕಾಂಬೆಗೆ ಆಭರಣಾದೀಗಳು, ಬೆಳ್ಳಿ, ಚಿನ್ನದ ವಸ್ತುಗಳು ದೇವರಿಗೆ ಅರ್ಪಣೆ ಆಗುತ್ತಾ ಇದೆ. ದೇವಿಯ ಸಾನಿಧ್ಯ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ. ದೇವಿಯ ಕೀರ್ತಿ ಊರೆಲ್ಲ ಹಬ್ಬುತ್ತಿದೆ.
ಲ್ಲಿನ ಅಮ್ಮ ಭಕ್ತಿಯಿಂದ ಬೆಡಿದರೆ ಬೇಡಿದ್ದನ್ನು ಕೊಡುವ ಕಾಮದೇನು ಆಗಿದ್ದಾಳೆ. ಇಲ್ಲಿನ ದೇವಿಯ ವರ್ದ್ಯಂತ್ಯುತ್ಸವವು ಪ್ರತೀ ಜನವರಿ ತಿಂಗಳ ಮಕರ ಸಂಕ್ರಮಣದಂದು (ಜನವರಿ-14) ಬಹು ವಿಜೃಂಬಣೆಯಿಂದ ನಡೆಯುತ್ತದೆ.


ಸರ್ವರು ಈ ದೇವಿಯ ದರ್ಶನವನ್ನು ಒಮ್ಮೆ ಮಾಡಿ ಈ ದೇವಿಯ ಕೃಪೆಗೆ ಪಾತ್ರರಾಗಿ....!!


ವಿಳಾಸ :-
Sri Kalikamba Temple Kumbri- 
Koteshwara. Kundapura- Tq
ಶ್ರೀ ಕಾಳಿಕಾಂಬಾ ದೇವಸ್ಥಾನ, 
ಕುಂಬ್ರಿ ದೇವಿ, ಕೋಟೇಶ್ವರ, 
ಕುಂದಾಪುರ ತಾಲೂಕು.

ನವರಾತ್ರಿಯ ಚಿತ್ರಗಳು.....



   



ಮಾರ್ಗ ವಿವರ : ಕೋಟೇಶ್ವರ ಕೋಟಿಲಿಂಗೇಶ್ವರ ದೇವಾಲಯವನ್ನು ಸಂದರ್ಶಿಸಿದ ನಂತರ 'ಹಳೆಅಳಿವೆ' ಎಂಬ ಸಮುದ್ರ ಕಿನಾರೆಗೆ ಹೋಗುವ ದಾರಿಯಲ್ಲಿ 1 ಕಿ.ಮಿ ಪ್ರಯಾಣಿಸಿದಾಗ ಈ ದೇವಿಯ ಮಂದಿರವು 'ಸರಕಾರಿ ಪ್ರಾಥಮಿಕ ಶಾಲೆ' ಯ ಮುಂಭಾಗದಲ್ಲಿ ಪುಟ್ಟದಾಗಿ ವಿರಾಜಮಾನಳಾಗಿ ಕಾಣಿಸುತ್ತಾಳೆ.

For more details visit website : http://www.srikalikamba.blogspot.in/