Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Anegudde Mahaganapathi.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಸಿ-576257
Anegudde Sri Vinayaka Temple, Kumbhashi-576257


Sri Anegudde Vinayaka,
ಶ್ರೀ ಆನೆಗುಡ್ಡೆ ವಿನಾಯಕ ದೇವರು

ಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ - 17 ರಲ್ಲಿ ಕೋಟ - ಕೋಟೇಶ್ವರಗಳ ನಡುವೆ ಹೆದ್ದಾರಿಯಿಂದ ಒಂದು ಕಿ.ಮೀ ಪೂರ್ವಕ್ಕೆ ಕುಂಭಾಸಿ ಕ್ಷೇತ್ರದಲ್ಲಿ ಆನೆಗುಡ್ಡೆಯಿದೆ. ಕುಂಭಾಸಿಯು ಸಪ್ತ ಕ್ಷೇತ್ರಗಳಲ್ಲಿ ಒಂದಾಗಿದ್ದು ಇಲ್ಲಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ಅತೀ ಪುರಾತನವಾಗಿದ್ದು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ನಿತ್ಯವೂ ಯಾತ್ರಾರ್ಥಿಗಳಾಗಿ ಬಂದು ಶ್ರೀ ದೇವರ ದರ್ಶನ ಪಡೆದು ಸೇವೆಯನ್ನು ಮಾಡಿಸಿಕೊಂಡು ಇಷ್ಟಾರ್ಥವನ್ನು ಪಡೆದು ಕೃತಾರ್ಥರಾಗುತ್ತಾರೆ.
ಸ್ವಾಮಿ ಶ್ರೀ ವಿನಾಯಕ
God Sri Vinaya
      ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲಿ ಕುಂಭಾಸಿಯು ಒಂದಾಗಿದೆ. ಇದನ್ನು ಕೃತಯುಗದಲ್ಲಿ “ಹರಿಹರ” ಕ್ಷೇತ್ರವೆಂದು, ತ್ರೇತ್ರಾಯುಗದಲ್ಲಿ “ಮಧುಕಾನನವೆಂದು”, ದ್ವಾಪರ ಯುಗದಲ್ಲಿ “ಗೌತಮ ಕ್ಷೇತ್ರವೆಂದು”, ಕಲಿಯುಗದಲ್ಲಿ “ಕುಂಭಾಸಿ” ಯೆಂದು ಕರೆಯುತ್ತಾರೆ. ಈ ಕ್ಷೇತ್ರವು ಅನಾವೃಷ್ಠಿಯಿಂಧ ಪೀಡಿತವಾದಾಗ ಗೌತಮ ಮುನಿಗಳು ಇಲ್ಲಿ ನೆಲೆಸಿ ಯಜ್ಞಯಾಗಾದಿಗಳನ್ನು ನಡೆಸಿದರು. ಹೀಗೆ ಈ ಕ್ಷೇತ್ರವು ಯುಗಂತರಗಳಿಂದಲೂ ಪವಿತ್ರವಾದುದು ಎಂದು ಪುರಾಣಗಳು ಸಾರುತ್ತದೆ. ವರಬಲ ಪ್ರಮತ್ತನಾದ “ಕುಂಭಾಸುರ” ನಿಂದ ತಪೋನುಷ್ಠಾನ ನಿತರನಾದ ಗೌತಮ ಮುನಿಗಳ ಯಜ್ಞಯಾಗಾದಿಗಳಿಗೆ ಭಂಗ ಬರತೊಡಗಿತು. ವನವಾಸ ನಿರತನಾದ ಪಾಂಡವರ ಆಗಮನವನ್ನು ತಿಳಿದು ಗೌತಮರು ಧರ್ಮಜನಿಗೆ ಕುಂಭಾಸುರನ ಪೀಡೆಯನ್ನು ಅರುಹಿದಾಗ ಧರ್ಮರಾಜನು ಲೋಕ ಕಂಟಕನಾದ ಕುಂಭಾಸುರನನ್ನು ಸಂಹರಿಸಲು ಭೀಮಸೇನನಿಗೆ ಅಪ್ಪಣೆ ಕೊಟ್ಟನು. ಭೀಮಸೇನನು ಯುದ್ದ ಸನ್ನದ್ದನಾದನು. ಭೀಮ, ಕುಂಬಾಸುರನಿಗೆ ಭೀಕರ ಯುದ್ದ ನಡೆಯಿತು. ಯುದ್ದದಲ್ಲಿ ಕುಂಭಾಸುರನು ಅವಧ್ಯನಾಗಿಯೇ ಉಳಿದನು. ಅವನನ್ನು ಸಂಹರಿಸುವ ಬಗ್ಗೆ ಚಿಂತಿಸುತ್ತಾ ಭೀಮಸೇನನು ಶಿಬಿರಕ್ಕೆ ಹಿಂತಿರುಗುತ್ತಿರುವಾಗ “ವಿಘ್ನೇಶ್ವರನ” ಅನುಗ್ರಹದಿಂದ ಪಡೆದ ಕತ್ತಿಯಿಂದ ಮಾತ್ರ ವಧ್ಯನು ಎಂಬ ಅಶರೀರ ವಾಣಿಯನ್ನು ಕೇಳಿ ಭೀಮಸೇನನು ವಿಶ್ವಂಭರ ರೂಪಿ ಪರಮಾತ್ಮನನ್ನು ಧ್ಯಾನಿಸಿ ಆನೆಯ ರೂಪದಿಂದ ಭಗವಂತನು ನೀಡಿದ ಕತ್ತಿಯಿಂದ ಅಸುರನನ್ನು ಸಂಹರಿಸಿದನೆಂದು ಐತಿಹ್ಯ ಉಂಟು. ಇದನ್ನೇ ಶ್ರೀ ವಾದಿರಾಜ ಯತಿ ವರೇಣ್ಯರು ತೀರ್ಥ ಪ್ರಬಂಧ ಗ್ರಂಥದಲ್ಲಿ ಭೀಮಸೇನನು ಕುಂಭಾಸುರನಿಗೆ ಕತ್ತಿ (ಅಸಿ) ಯಿಂದ ಸಂಹರಿಸಿದ ಕಾರಣ ಕುಂಭಾಸಿ ಎಂದಾಯಿತಂತೆ ವರ್ಣಿಸಿದ್ದಾರೆ. ಈ ಆನೆಗುಡ್ಡೆ (ನಾಗಾಚಲ) ದಲ್ಲಿ ಗಣಪತಿಯು ಆನೆರೂಪದಲ್ಲಿ ಭೀಮಸೇನನಿಗೆ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆನೆಯಾಕಾರದಲ್ಲಿ ಗಣಪತಿಯು ಉದ್ಭವಿಸಿದನು. ಸೊಂಡಿಲಿನ ಆಕಾರವಿರುವ ಮುಖ ಭಾಗಕ್ಕೆ ಮಾತ್ರ ನಿತ್ಯ ಪೂಜಾದಿಗಳು, ವಿನಿಯೋಗಾದಿಗಳು ನಡೆಯುತ್ತದೆ. ಉಳಿದ ಭಾಗಗಳು ವಿದ್ಯಕ್ತವಾಗಿ ಗೋಡೆಯಿಂದ ಆವೃತವಾಗಿವೆ. ಈ ನಾಗಾಚಲದಲ್ಲಿ (ಆನೆಗುಡ್ಡೆ ನಾಗಾಚಲ ವೆಂದು ಪುರಾಣ ಪ್ರಸಿದ್ದಿ) ಆನೆಯ ರೂಪದಲ್ಲಿ ಪ್ರತ್ಯಕ್ಷನಾದ ಗಣಪತಿಯು ಭಕ್ತಾಭೀಷ್ಟಪ್ರದಾಯಕನಾಗಿ ವಿರಾಜಮಾನನಾಗಿರುವನು.
ಸ್ವಾಗತ ಗೋಪುರಂ, Entrance of Temple(Sri Anegudde)
        ಈ ದೇವಾಲಯದ ಮುಂಬಾಗದಲ್ಲಿ ಬೃಹತ್ “ಅಶ್ವತ ವೃಕ್ಷ” ವೊಂದು ಇದ್ದು ಇಲ್ಲಿ ಶ್ರೀ ನಾಗದೇವನು ನೆಲೆಸಿ ನಿಂದಿದ್ದಾನೆ. ಅಂತೆ ಇಲ್ಲಿ ಇಂದು ಸಂಪೂರ್ಣ ನವೀಕರಣವಾಗಿದ್ದು ಯಜ್ಞ ಮಂಟಪ, ಯಾಗಶಾಲೆ, ಅನ್ನಛತ್ರ ಇನ್ನಿತರ ಕಾರ್ಯಗಳು ಶ್ರೀ ಸ್ವಾಮಿಯ ಅನುಗ್ರಹದಿಂದ ನಡೆದು ಇಂದು ಈ ದೇವಾಲಯವು ವಿಖ್ಯಾತವಾಗಿದೆ. ಈ ದೇವನು ಭಕ್ತರ ಬೇಡಿಕೆಗಳನ್ನು ಬಹುಬೇಗನೆ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಇಲ್ಲಿ ಸದಾ ಗಣಹೋಮ, ಸಹಸ್ರ ನಾರಿಕೇಳ ಯಾಗ ಇತ್ಯಾದಿ ಪೂಜಾದಿಗಳು ನಡೆಯುತ್ತಾ ಇರುತ್ತದೆ.

          ಈ ದೇವಾಲಯವು ಅತೀ ಪುರಾತನವಾಗಿದ್ದು 1985 ರಲ್ಲಿ ಪೇಜಾವರ ಮಠಾದೀಶರಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ದಿವ್ಯ ಅಮೃತ ಹಸ್ತದಿಂದ ಜೀರ್ಣೋದ್ದಾರ ಕಾರ್ಯದ ಶಿಲಾನ್ಯಾಸ ನೆರವೇರಿಸಲಾಯ್ತು.
          ಹಾಗೇ ಈ ಸ್ವಾಮಿಯ ಸನ್ನಿದಾನದಲ್ಲಿ ಪ್ರತಿನಿತ್ಯ ಅನ್ನದಾನ ಸೇವೆ ನಡೆಯುತ್ತದೆ, ಏಕಾದಶಿ ಒಂದು ದಿನ ಈ ಕ್ಷೇತ್ರದಲ್ಲಿ ಅನ್ನದಾನವು ನಡೆಯುವುದಿಲ್ಲ.  ಇಲ್ಲಿ ಧರ್ಮಸ್ಥಳ ಮಾದರಿಲ್ಲಿಯೇ ವಿಶಾಲವಾದ ಅನ್ನಛತ್ರವಿದೆ. ಈ ಅನ್ನಛತ್ರದಲ್ಲಿ ನಿತ್ಯವೂ ಅನ್ನದಾನವು ಎಡೆಬಿಡದೆ ನಡೆಯುತ್ತದೆ.
ಪೂಜಾ ವಿನಿಯೋಗಾದಿಗಳು
          ದೇವಾಲಯದಲ್ಲಿ ಬೆಳಿಗ್ಗೆ 5 ಘಂಟೆಗೆ, ಮಧ್ಯಾಹ್ನ 1.00 ಘಂಟೆಗೆ, ರಾತ್ರಿ 8.30 ಕ್ಕೆ ತ್ರಿಕಾಲದಲ್ಲಿ ಪೂಜೆ ನಡೆಯುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ 9 ರ ತನಕ ಅವಿರತವಾಗಿ ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ದೇವಾಲಯ ಮುಕ್ತವಾಗಿರಯತ್ತದೆ. ವಾರದಲ್ಲಿ ಆದಿತ್ಯವಾರ, ಮಂಗಳವಾರ, ಶುಕ್ರವಾರ ಹಾಗೂ ಸಂಕ್ರಮಣ, ಸಂಕಷ್ಟಹರ ಚತುರ್ಥಿ ಹಾಗೂ ಗಣೇಶ ಚೌತಿ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಮಾರ್ಗಶಿರ ಶುದ್ದ ಚತುರ್ಥಿ ವಾರ್ಷಿಕ ರಥೋತ್ಸವ ನಡೆಯುತ್ತದೆ. ವರ್ಷದಲ್ಲಿ 8-10 ಸಹಸ್ರ ನಾಳಿಕೇರ ಗಣಯಾಗ ನಡೆಯುತ್ತದೆ. ಇಲ್ಲಿಯ ಸೇವೆಗಳಲ್ಲಿ ಸತ್ಯಗಣಪತಿ ವೃತ, ಗಣಹೋಮ, ರಂಗಪೂಜೆ ವಿಶೇಷವಾಗಿ ನಡೆಯುತ್ತದೆ. ಸತ್ಯಗಣಪತಿ ವೃತವನ್ನು ಇಷ್ಟಾರ್ಥ ಸಿದ್ದಿಗಾಗಿ ಈ ಪೂಜೆಯನ್ನು ಮಾಡಿಸುತ್ತಾರೆ.
          ತಾವೇಲ್ಲಾರೂ ಒಮ್ಮೆಯಾದರೂ ದೇವರ ದೇವ ಶ್ರೀ ಪಾರ್ವತಿ ಪರಶಿವನ ಮುದ್ದು ಕಂದನ ಕಣ್ತುಂಬ ತುಂಬಿಕೊಂಡು ನಿಮ್ಮೊಂದಿಗೆ ವಿನಾಯಕನ ವರಬಲವನ್ನು ಕೊಂಡೊಯ್ಯಿರಿ.

“ಸರ್ವರಿಗೂ ಶ್ರೀ ವಿನಾಯಕ ಅನುಗ್ರಹಿಸಲಿ”

ವಿಳಾಸ:-
ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ,
ಕುಂಭಾಸಿ, ಕುಂದಾಪುರ - ತಾಲೂಕು.
ಉಡುಪಿ- ಜಿಲ್ಲೆ, ಕರ್ನಾಟಕ.

ದಾರಿಯ ವಿವರ : ಭಕ್ತಾದಿಗಳು ಉಡುಪಿಯ ಮೂಲಕ ಕುಂದಾಪುರಕ್ಕೆ ಬರುವ ಬಸ್ಸನ್ನೇರಿ ಬಂದರೆ ಈ ಸ್ವಾಮಿಯ ದೇವಾಲಯವನ್ನ ತಲುಪಬಹುದು. ಇಲ್ಲಿಂದ ನಂತರ ಶ್ರೀ ಕೋಟಿಲಿಂಗೇಶ್ವರ, ಕೋಟೇಶ್ವರನನ್ನು ಕಂಡು ಮುಂದೆ ಕೊಲ್ಲೂರಿಗೆ ಪ್ರಯಾಣ ಬೆಳೆಸಬಹುದು. ಅಂತೆ ಭಟ್ಕಳದಿಂದ ಕುಂದಾಪುರಕ್ಕೆ ಬಂದರೆ ಕುಂದಾಪುರದಿಂದ ಕುಂಭಾಶಿ ಕ್ಷೇತ್ರಕ್ಕೆ ಬಸ್ಸಿನ ವ್ಯವಸ್ಥೆಇದೆ.

(ಸೂಚನೆ : ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು raghu.koteshwara113@gmail.com ಗೆ ಅಥವಾ ನಮ್ಮ ಬ್ಲಾಗ್ ಅಲ್ಲಿ ಕಮೆಂಟ್ ಮಾಡಿ)