Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Shree Gurunarasimha Temple, Saligrama, Udupi Dist.
ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ, ಉಡುಪಿ ಜಿಲ್ಲೆ||


Lord Shree Gurunarasimha


ಉಡುಪಿ ಜಿಲ್ಲೆಯ ಪುರಾತನ ವೈಷ್ಣವ ಪರಂಪರೆಯ ದೇವಸ್ಥಾನಗಳಲ್ಲಿ ಕೋಟ(Kota) ಸಮೀಪದ ಸಾಲಿಗ್ರಾಮದಲ್ಲಿರುವ ಶ್ರೀ ಗುರುನರಸಿಂಹ ದೇವಸ್ಥಾನವು(Saligrama Shree Gurunarasimha) ಒಂದು. ಕುಂದಾಪುರ ತಾಲೂಕು ಕೇಂದ್ರದಿಂದ ಸರಿಸುಮಾರು 10 ರಿಂದ 15 ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಮತ್ತೊಂದು ರಸ್ತೆಯ ಬದಿಯಲ್ಲಿ ಶ್ರೀ ಆಂಜನೇಯ(Shree Anjaneya) ದೇವರ ದೇವಸ್ಥಾನವನ್ನು ನಾವು ಕಾಣಬಹುದು. ಉಡುಪಿ ಜಿಲ್ಲೆಯ ಪ್ರಸಿದ್ಧ ನರಸಿಂಹ ದೇವಸ್ಥಾನಗಳಲ್ಲಿ ಇದು ತುಂಬಾ ವಿಶಿಷ್ಟವಾದ ಸ್ಥಾನವನ್ನು ಹೊಂದಿದ್ದು ದೇವರ ಬಿಂಬವು ಸಾಲಿಗ್ರಾಮ ಶಿಲೆಯಿಂದ ನಿರ್ಮಾಗೊಂಡಿದೆ.
Parivara : Ganapathi, Durgaparameshwari, Anjaneya

     ಇತಿಹಾಸದ ಪ್ರಕಾರ ಈ ದೇವಸ್ಥಾನವು ಸರಿಸುಮಾರು 8ನೇ ಶತಮಾನಕ್ಕೆ ಸೇರಿದ್ದು ಕದಂಬ ವಂಶದ ಮಯೂರವರ್ಮನ ಮೊಮ್ಮಗ ಲೋಕಾದಿತ್ಯನ(Lokadithya) ಕಾಲಕ್ಕೆ ಸಂಬಂದಿಸಿದೆಂದು ಹೇಳಲಾಗುತ್ತದೆ. ಅಲ್ಲದೇ ಪೌರಾಣಿಕವಾಗಿಯೂ ಕೂಡಾ ತುಂಬಾ ಮಹತ್ವವನ್ನು ಹೊಂದಿರುವ ಈ ದೇವಸ್ಥಾನವು ತುಂಬಾ ಸುಂದರವಾಗಿ ನಿರ್ಮಾಣವಾಗಿದೆ. ಪದ್ಮಪುರಾಣದ ಪುಷ್ಕರಖಂಡದಲ್ಲಿ ಈ ದೇವಸ್ಥಾನದ ಬಗ್ಗೆ ಉಲ್ಲೇಖ ಕಂಡು ಬರುತ್ತದೆ ಎಂಬುದು ಪ್ರಾಜ್ಞರ ನುಡಿ. ಅದೇ ರೀತಿಯಲ್ಲಿ ಹಿಂದೆ ಈ ಭೂಮಿಯಲ್ಲಿ ಕಂಡುಬಂದ ಭೀಕರ ಅವಘಡಗಳು, ಪ್ರಕೃತಿ ವೈಪರಿತ್ಯದ ಸಮಯದಲ್ಲಿ ನಾರದ ಮುನಿಗಳಿಗೆ ಕೇಳಿಸಿದ ಅಗೋಚರ ದೇವವಾಣಿಯನ್ನು ಅನುಸರಿಸಿ ಶೋಧ ಮಾಡಿದಾಗ ನರಸಿಂಹ ದೇವರ ವಿಗ್ರಹ ದೊರೆಯಿತಂತೆ. ಇದನ್ನು ಶಂಖ-ಚಕ್ರ ತೀರ್ಥ(ಪುಷ್ಕರ್ಣಿ) ಮದ್ಯೆ ಸ್ಥಾಪಿಸಿದರು ಎಂಬುದು ಐತಿಹ್ಯ. ಹೀಗೆ ನಾರದರಿಂದ ಸ್ಥಾಪನೆಗೊಂಡಿರುವುದೆಂಬ ನಂಬಿಕೆಯಿದೆ. ಅದೇ ರೀತಿಯಲ್ಲಿ 'ಕೂಟ ಕ್ಷೇತ್ರ(ಕೋಟ-Kota)' ದ ಮದ್ಯದಲ್ಲಿ ಸ್ಥಿತಿನಾದ ನರಸಿಂಹನ ಮೂರ್ತಿಯೂ ಸಾಲಿಗ್ರಾಮದ ಶಿಲೆಯಾದ್ಧರಿಂದ ಮುಂದೆ ಈ ಸ್ಥಳ 'ಸಾಲಿಗ್ರಾಮ-Saligrama' ಎಂದು ಅನ್ವರ್ಥವಾಗಿರಬಹುದು ಎಂಬುದು ಇತಿಹಾಸಕಾರರ ಅಭಿಪ್ರಾಯವಾಗಿದೆ.
      ಹೀಗೆ ಇಲ್ಲಿನ ದೇವರನ್ನು ಲೋಕಾದಿತ್ಯನು ಗುರು ಸಮಾನರಾಗಿ ಕಂಡು ಮುಂದೆ ಶ್ರೀ ಸ್ವಾಮಿಯು ಇಲ್ಲಿ ಗುರುನರಸಿಂಹ ಎಂದು ಪ್ರಸಿದ್ಧಿಯನ್ನು ಪಡೆಯುತ್ತಾನೆ. ಹೀಗೆ ಇಲ್ಲಿನ ಒಂದು ಜಾನಪದ ನಂಬಿಕೆಯ ಪ್ರಕಾರ ಹಿಂದೆ ಇಲ್ಲಿನ ದೇವರು ಪೂರ್ವಕ್ಕೆ ಮುಖಮಾಡಿದ್ದು ದೇವಳದ ಮುಂಬಾಗದ ಗದ್ದೆಯಲ್ಲಿನ ಬೇಸಾಯ ಸುಟ್ಟು ಹೋಗುತ್ತಿತ್ತಂತೆ. ಇದರಿಂದ ನೊಂದ ಓರ್ವ ರೈತ ದೇವರಿಗೆ ತನ್ನ ಹಾರೆಯಿಂದ ಪೆಟ್ಟು ಮಾಡುತ್ತಾನಂತೆ(ಇದು ಕೇವಲ ನೆಪ ಅಷ್ಟೆ, ದೇವರಿಗೆ ಮನಷ್ಯ ಏನು ತಾನೇ ಮಾಡಲು ಸಾಧ್ಯವಲ್ಲವೇ???) ತದನಂತರ ಊರವರ ಸಮ್ಮುಖದಲ್ಲಿ ವಿಪ್ರರ ಮುಖೇನ ದೇವರನ್ನು ಪಶ್ಚಿಮ ದಿಕ್ಕಿಗೆ ತಿರುಗಿಸಿ, ಅಲ್ಲದೇ ದೇವರ ತೀಕ್ಷ್ಣ ದೃಷ್ಠಿಯನ್ನು ತಡೆಯಲು ಶ್ರೀ ಆಂಜನೇಯ ದೇವರನ್ನು ಪೂರ್ವಕ್ಕೆ ಮುಖಮಾಡಿ ಶ್ರೀ ಗುರನರಸಿಂಹನಿಗೆ ಎದುರಾಗಿ ಪ್ರತಿಷ್ಠಾಪಿಸುತ್ತಾರಂತೆ. ಈ ಕಾರಣದಿಂದ ಆಂಜನೇಯ ಸ್ವಾಮಿಗೆ ದೇಹ ತಂಪಾಗಿರಲೆಂದು ಚಂದ್ರ ಮತ್ತು ಬೆಣ್ಣೆಯ ಲೇಪವನ್ನು ಹಚ್ಚುತ್ತಾರೆ ಎಂಬುದು ನಂಬಿಕೆ. 
Temple View of Saligrama


     ಇಲ್ಲಿ ಪ್ರತೀ ವರ್ಷ ಏಳು ತೇರು ಹಬ್ಬದ ದಿನ ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತದೆ. ಇದು ಜನವರಿ ತಿಂಗಳಿನಲ್ಲಿ ಬರುವ ಹಬ್ಬವಾಗಿದ್ದು ಅಂದು 7 ಪುಣ್ಯ ಕ್ಷೇತ್ರದಲ್ಲಿ ರಥೋತ್ಸವ ನಡೆಯುತ್ತದೆ. ಆ ದಿನ ಆ ಏಳು ರಥೋತ್ಸವವನ್ನು ಕಂಡರೆ ಮಹಾಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ಆಧ್ಯಾತ್ಮನಂಬಿಕೆ.
        ಶ್ರೀ ದೇವಳವನ್ನು ನವನಿರ್ಮಾಣ ಮಾಡಿದ್ದು ಸುಂದರ ಶಿಲಾಮಯ ಗರ್ಭಗುಡಿಯನ್ನು ಮಾಡಲಾಗಿದೆ. ಅಲ್ಲದೇ ಶ್ರೀ ನರಸಿಂಹ ದೇವರ ಜೊತೆಯಲ್ಲಿ ಶಿವಸುತ ವಿನಾಯಕ, ಆದಿಶಕ್ತಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ನೆಲೆಸಿ ನಿಂದಿದ್ದಾರೆ. ನರಸಿಂಹ ದೇವರು ಕುಳಿತ ಭಂಗಿಯಲ್ಲಿದ್ದು ದೇವರ ಕೈಯಲ್ಲಿ ಶಂಖ-ಚಕ್ರವಿದೆ. ಅಲ್ಲದೇ ಇಲ್ಲಿ ವಿಪ್ರರಿಗೆ ವೇದಾಧ್ಯಯನ ತರಗತಿಗಳು ನಡೆಯುತ್ತದೆ. ದೇವಳದ ಪಕ್ಕದಲ್ಲಿ ಸುಂದರವಾದ ಪುಷ್ಕರ್ಣಿ ಇದೆ.
ಹೀಗೆ ವಿಶೇಷ ಮಹತ್ವವನ್ನು ಹೊಂದಿರುವ ಶ್ರೀ ಗುರುನರಸಿಂಹ ದೇವರ ದರ್ಶನ ಮಾಡಿದರೆ ಸಕಲದೋಷಗಳೂ ನಿವಾರಣೆಯಾಗುತ್ತದೆ. ಮಾತ್ರವಲ್ಲದೆ ಶನಿವಾರದಂದು ಇಲ್ಲಿನ ಆಂಜನೇಯ ದೇವರ ದರ್ಶನಕ್ಕೆ ಸಹಸ್ರಾರು ಮಂದಿ ಬರುತ್ತಾರೆ. ದೇವರಿಗೆ ಬೆಣ್ಣೆ ಅಲಂಕಾರ ಮಾತ್ರವಲ್ಲದೆ ಗ್ರಹಚಾರ ದೋಷಕ್ಕೆ ಎಣ್ಣೆಯನ್ನು ಸಮರ್ಪಣೆ ಮಾಡಲಾಗುತ್ತದೆ.
          ಇಂಥ ಪುಣ್ಯ ಕ್ಷೇತ್ರಕ್ಕೆ ತಾವೂ ಕೂಡಾ ಒಮ್ಮೆ ಭೇಟಿ ನೀಡಿ, ಜಗದೋದ್ಧಾರಕನಾದ ಶ್ರೀಮನ್ ನಾರಾಯಣನ ದಿವ್ಯ ರೂಪವಾದ ಗುರುನರಸಿಂಹನ ಅನುಗ್ರಹಕ್ಕೆ ಪಾತ್ರರಾಗಿ. ನಿಮ್ಮ ಸಕಲ ದೋಷಗಳನ್ನು ನೀಗಿಸಿಕೊಳ್ಳಿ.


ವಿಳಾಸ :-

          ಶ್ರೀ ಗುರುನರಸಿಂಹ ದೇವಸ್ಥಾನ,

          ಸಾಲಿಗ್ರಾಮ - 576 255, ಉಡುಪಿ ಜಿಲ್ಲೆ.

          ದೂರವಾಣಿ : 0820-2564544, 3204544


ದಾರಿಯ ವಿವರ : ಕುಂದಾಪುರ ತಾಲೂಕು ಕೇಂದ್ರದಿಂದ ಉಡುಪಿಗೆ ಸಾಗುವ ರಾಜಮಾರ್ಗದ ಎಡದಲ್ಲಿ ಶ್ರೀ ಗುರುನರಸಿಂಹ ಹಾಗೂ ಬಲದಲ್ಲಿ ಶ್ರೀ ಆಂಜನೇಯ ದೇವರ ಮಂದಿರವನ್ನು ನಾವು ಕಾಣಬಹುದು. ಇಲ್ಲಿಗೆ ಹೋಗಲು ಜಿಲ್ಲಾ ಕೇಂದ್ರ ಉಡುಪಿ ಹಾಗೂ ತಾಲೂಕು ಕೇಂದ್ರ ಕುಂದಾಪುರದಿಂದ ಉತ್ತಮ ಬಸ್ಸಿನ ವ್ಯವಸ್ಥೆ ಇದೆ.