Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Sawkuru Durgaparameshwari Ammanavara Temple, Sawkuru- Kundapura.

- ಪುರಾತನ ಪುಣ್ಯಕ್ಷೇತ್ರ -

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
Sri Sawkuru Durga, Alankara Vigraha
ಶ್ರೀ ದುರ್ಗಾಪರಮೇಶ್ವರಿ ಮೂಲವಿಗ್ರಹ, ಸೌಕೂರು.
ಕಂಡ್ಲೂರಿನಿಂದ ಎರಡು ಕಿಲೋ ಮೀಟರ್ ಉತ್ತರದಲ್ಲಿದೆ
          ಅತ್ಯಂತ ಪ್ರಾಚೀನವಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ ಜಿಲ್ಲೆಯ ಕಾರಣೀಕ ಶಕ್ತಿ ಕೇಂದ್ರಗಳಲ್ಲಿ ಒಂದು.   ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ.
           ಸೌಕ್ಯ ಮುನಿಗಳು ಸ್ಥಳದಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿದರು. ಅವರ ಹೆಸರಿನಿಂದಲೆ ಊರಿಗೆ ಸೌಕ್ಯಪುರ-ಸೌಕೂರು ಎಂದು ಹೆಸರಾಯಿತು. ದುರ್ಗಾಸುರನನ್ನು ಪರಾಶಕ್ತಿ ಕೊಂದು ಈ ಸ್ಥಳದಲ್ಲಿ ದೇವಿಯು ದುರ್ಗಾಪರಮೇಶ್ವರಿ ಅಮ್ಮನವರಾಗಿ ನೆಲೆಯಾದರು. ಈ ಮಹಾತಾಯಿಯ ಪವಾಡ  ಅಪಾರವಾದದು. ಈ ತಾಯಿಯು “ಕಮಲೆಶಿಲೆಯ ಬ್ರಾಹ್ಮೀ ದುರ್ಗೆಯ ಅಕ್ಕನೆಂದು ಜನರು ನಂಬುತ್ತಾರೆ. ಹಾಗೇ ಇವಳು ಹಿರಿಯವಳು, ಬ್ರಾಹ್ಮೀ ಕಿರಿಯವಳು ಎಂದು ಜನಜನಿತವಾದ ನಾಣ್ಣುಡಿಯೊಂದಿಗೆ ಬೆರೆತ ಐತಿಹ್ಯವಾಗಿದೆ. ಈ ದೇವಿಯು ಲಕ್ಷ್ಮೀ, ಕಾಳಿ ಮತ್ತು ಸರಸ್ವತಿಯ ಮೂರು ರೂಪವೊಂದಾಗಿ ತ್ರಿಶಕ್ತಿ ದೇವತೆಯಾಗಿ ತ್ರೈಲೋಕಪಾಲಕಿಯಾಗಿದ್ದಾಳೆ. ಇವಳ ಶಕ್ತಿ ಅಪಾರಾದುದು. ಮಹಿಮೆ ಕೇಳಿದರೆ ಜನುಮವೇ ಪಾವನಮಯವಾಗುತ್ತದೆ. ಇವಳು ಪುಪ್ಷಪವಾಡ ಖ್ಯಾತಿಯ ದೇವತೆಯೆಂದರೆ ಮಧುವೆ ಸಂಬಂದಗಳನ್ನು ಈ ತಾಯಿಯ ಮುಡಿಯಮೇಲೆ ಇಟ್ಟು ಎಡ-ಬಲ ಕಡೆಯಿಂದ ಪ್ರಸಾದ ರೂಪದಲ್ಲಿ ಪುಷ್ಪ ಜಾರಿದರೆ ಶುಭ ಹಾಗೂ ಮುಂದುವರಿಸಬೇಕೆಂದು ಇಲ್ಲವಾದಲ್ಲಿ ಬೇಡವೆಂದು ತಿಳಿಯುವ ಮೂಲಕ ಮಧುವೆಯ ಸಂಬಂದ ಮುಂದುವರೆಸುತ್ತಾರೆ.
          ಸೌಕೂರು ದೇವಸ್ಥಾನದ ಗರ್ಭಗುಡಿಯಲ್ಲಿ ಏಕಪೀಠದ ಮೇಲೆ ಮೂರು ಲಿಂಗಗಳನ್ನು ಪ್ರತಿಷ್ಠಾಪಿಸಿದ್ದಾರೆ. ಅವು ದುರ್ಗಾದೇವಿಯ ಮಹಾಕಾಳಿ ಸ್ವರೂಪಿ, ಮಹಾಲಕ್ಷ್ಮಿ ಮಹಾಸರಸ್ವತಿಯ ಪ್ರತೀಕಗಳಾಗಿವೆ. ಶ್ರೀದುರ್ಗಾಪರಮೇಶ್ವರಿ ಎಂದು ಕರೆಯುವ ಪಂಚಲೋಹದ ಅಲಂಕಾರ ಮೂರ್ತಿಯನ್ನು ಲಿಂಗಗಳ ಹಿಂಬದಿಯಲ್ಲಿ ಸ್ಥಾಪಿಸಿದ್ದಾರೆ. ಕ್ಷೇತ್ರದಲ್ಲಿ ಲಿಂಗ ಸ್ವರೂಪಿಯಾಗಿ ತ್ರಿಶಕ್ತಿ ಆವಿರ್ಭವಿಸಿರುವ ಶ್ರೀದುರ್ಗಾಪರಮೇಶ್ವರಿ ಅಮ್ಮನವರೆಂದು ಆರಾಧಿಸುತ್ತಾರೆ.
          ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭಕ್ತಾದಿಗಳ ಪ್ರಶ್ನೆ, ಪ್ರಸಾದ, ನೆಂಟಸ್ತಿಕೆಗಳ ಬಗ್ಗೆ ಹೂವಿನ ಪ್ರಸಾದ ನೋಡುವ ಖ್ಯಾತಿಯ ಕ್ಷೇತ್ರವಾಗಿದೆ. ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಿ ಮದುವೆಯ ಯೋಗ ಕೂಡಿಸುವ ಮಹಾತಾಯಿ ಎಂಬ ನಂಬಿಕೆ ಇದೆ. ದೇವಿಗೆ ಸಿಂಗಾರ ಗೊನೆ ಏರಿಸಿ ಅದರ ಮೇಲೆ ಹೂಗಳನ್ನಿಡುತ್ತಾರೆ. ಭಕ್ತರು ತಮ್ಮ ಕಾರ್ಯವನ್ನು ಉದ್ದೇಶಿಸಿ ಪ್ರಾರ್ಥಿಸಿಕೊಂಡು ದೇವಿಯ ಸನ್ನಿಧಿಯ ಪ್ರಸಾದವನ್ನು ಕೋರುತ್ತಾರೆ. ದೇವಿಯ ಮುಡಿಯಿಂದ ಹೂವಿನ ಪ್ರಸಾದವಾದಾಗ ಭಕ್ತಾಧಿಗಳು ಧನ್ಯತೆಯಿಂದ ನಮಸ್ಕರಿಸುತ್ತಾರೆ. ಪ್ರಸಾದದ ಪುಷ್ಪಗಳು ದೇವಿಯ ಮುಡಿಯಿಂದ  ಎಡ ಬಲಗಳೆನ್ನದೆ ಎತ್ತ ಕಡೆ ಬಿದ್ದರೂ ಸಮ ಕಾರ್ಯ ಜಯ ಎಂದು ಭಕ್ತರು ಭಾವಿಸುತ್ತಾರೆ. ಪುಷ್ಪ ಬೀಳದೆ ಇದ್ದರೆ ಕಾರ್ಯದ ಬಗ್ಗೆ ಪರಾಮಶರ್ಿಸಲು ಕಾರ್ಯ ಮುಂದೂಡುತ್ತಾರೆ.
           ದೇವಸ್ಥಾನದಲ್ಲಿ ಪರಿವಾರ ದೇವತೆಗಳಾಗಿ ಈಶ್ವರ, ಗಣಪತಿ, ವೀರಭದ್ರ, ಹುಲಿದೇವರುಗಳಿದ್ದಾರೆ. ಶಿರದಿಂದ ಎದೆಯ ಭಾಗದ ವರೆಗೆ ಮಾತ್ರ ಇರುವ ವೀರಭದ್ರ ದೇವರ ಅಪರೂಪದ ಶಿಲಾಮೂರ್ತಿಯೊಂದು ಇಲ್ಲಿದೆ. ವರ್ಣಮಯವಾದ ಬಾಗಿಲು ಬೊಬ್ಬರ್ಯ ಇಲ್ಲಿದ್ದಾನೆ. ವಿಶೇಷ ಪರ್ವಗಳಲ್ಲಿ ಬಾರಿಸುವ ಪುರಾತನ ಕಾಲದ ದೊಡ್ಡದೊಂದು ಗಂಟೆ ಇಲ್ಲಿದೆ.
          ದೇವಾಲಯದ ಗರ್ಭಗುಡಿ ಸಂಪೂರ್ಣ ಶಿಲಾಮಯವಾಗಿ ಪೂರ್ವಾಭಿಮುಖವಾಗಿದೆ. ದೇವಸ್ಥಾನದ ಗೋಪುರ, ಶಿಖರ ಶಿಲ್ಪಕಲೆಯ ವೈಭವ ನೋಡುವಂತಹದ್ದಾಗಿದೆ. ಇಲ್ಲಿ ಅತೀ ಎತ್ತರದ ಧ್ವಜಸ್ತಂಭವಿದೆ. ಸೌಕೂರು, ಕಮಶಿಲೆ, ಕೊಲ್ಲೂರು ಅಮ್ಮನವರ ದೇವಸ್ಥಾನಗಳಲ್ಲಿ ಪರಸ್ಪರ ಸಾಮ್ಯಗಳಿದ್ದು. ಜನ ಅಕ್ಕತಂಗಿಯರ ದೇವಸ್ಥಾನ ಎಂದು ಭಕ್ತಿಯಿಂದ ಹೇಳುತ್ತಾರೆ.

          ಕ್ಷೇತ್ರದ ಒಳ ಪೌಳಿಯಲ್ಲಿ ಸುಮಾರು ಹತ್ತನೆ ಶತಮಾನಕ್ಕೆ ಸಲ್ಲುವ ಶಿಲಾಶಾಸನಗಳಿವೆ. ಒಳ ಸುತ್ತಿನ ಹೆಬ್ಬಾಗಿಲಿನ ಮಾಡಿಗೆ ತಾಮ್ರದ ಹೊದಿಕೆ ಇದೆ.
          ಸೌಕೂರು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸುಂದರವಾದ ಚತುರ್ಭುಜ ದುರ್ಗಾಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಇದೆ. ಇಷ್ಟೊಂದು ಪ್ರಖ್ಯಾತವಾದ ಪ್ರಾಚೀನ ದೇವಸ್ಥಾನ ಇತ್ತೀಚೆಗೆ ಗರ್ಭಗುಡಿ ಹೊರತು ಪಡಿಸಿ ಸಂಪೂರ್ಣ ನವೀಕರಣವಾಗಿದೆ.
          ಕುಬ್ಜಾ ಹಾಗೂ ವಾರಾಹಿ ನದಿಗಳ ಸಂಗಮದ ಸಮೀಪದ ಎತ್ತರದ ಸ್ಥಳದಲ್ಲಿ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸೌಕೂರು ಅಮ್ಮನವರ ಕ್ಷೇತ್ರದ ಪರಿಸರದಲ್ಲಿ ಜಾನುವಾರು ಕಳೆದು ಹೋದರೆ ಹುಲಿದೇವರಿಗೆ ವಿವಿಧ ರೀತಿಯ ಹರಕೆ ಸಲ್ಲಿಸುವ ಪದ್ಧತಿ ಇಲ್ಲಿದೆದೇವಸ್ಥಾನದ ಪೂರ್ವದಿಕ್ಕಿನಲ್ಲಿ ಅಶ್ವತ್ಥಕಟ್ಟೆ ಇದೆ. ಉತ್ತರ ದಿಕ್ಕಿನಲ್ಲಿ ನಾಗ ಸಾನ್ನಿಧ್ಯವಿದೆ. ನಾಗ ಸಾನ್ನಿಧ್ಯದ ಕೆಳಗೆ ಸ್ವಲ್ಪ ದೂರದ ಜಾಗದಲ್ಲಿ ಮೇಲುಗಡೆ ಸೀಳಿದ ಶಿಲೆಕಲ್ಲು ಇದೆ. ಇದನ್ನು ಶ್ರೀದೇವರ ಮೂಲಸ್ಥಾನ ಎಂದು ಭಾವಿಸಿ, ಉತ್ಸವದ ದಿನಗಳಲ್ಲಿ ಇಲ್ಲಿಯೂ ಪೂಜೆ ಸಲ್ಲಿಸುವ ಪದ್ಧತಿ ಇದೆ.
          ಸೌಕೂರು, ಗುಲ್ವಾಡಿ ಗ್ರಾಮದ ಕೂಡುಗ್ರಾಮವಾಗಿದ್ದು ಪುರಾತನ ಗುಲ್ವಾಡಿ ಕೋಟೆಯ ಅವಶೇಷಗಳ ಜಾಗದಿಂದ ಸ್ವಲ್ಪವೆ ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ. 782 ಮೈಸೂರು ಅರಸರ ಸೇನೆಯ ಬಸ್ರೂರು ದಾಳಿಯ ನಂತರ ಗುಲ್ವಾಡಿ ನಿರ್ಜನವಾಯಿತು. ಕೋಟೆಯ ಒಳಗಿದ್ದ ಗೋಪಾಲಕೃಷ್ಣ ದೇವಸ್ಥಾನ ಎರಡಂಕಣದ ಕಟ್ಟಡವಿದ್ದರೂ-ದೇವರ ಮೂರ್ತಿ ಮಾತ್ರ ಇಲ್ಲವಾಗಿದೆ. ಗುಲ್ವಾಡಿ ಕೋಟೆಯ ಸ್ಥಳದ ಸಮೀಪ ಇರುವ ಆಂಜನೇಯ ದೇವಸ್ಥಾನದಲ್ಲಿ ಸಾಧಾರಣ ಎರಡೂವರೆ ಅಡಿ ಎತ್ತರದ ಶಿಲಾಪ್ರತಿಮೆ ಇದೆ.

          ಸೌಕೂರು ದೇವಸ್ಥಾನದ ಇತಿಹಾಸದಲ್ಲಿ ಇದನ್ನು ತಾತಯ್ಯನ ಮಠ ಎಂದು ಗುರುತಿಸಲಾಗಿದೆ. ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಿಯ ಆರಾಧಕರಾಗಿ-ಗುಲ್ವಾಡಿ ಕೋಟೆಯಲ್ಲಿದ್ದ ರಾಮಕ್ಷತ್ರಿಯ ಸೇನೆಯ ದಂಡಿಗೆಗಳ ಯೋಧರು-ಕೋಟೆಯ ಪತನದ ನಂತರ ಕುಟುಂಬ ಸಹಿತ ಕುಂದಾಪುರಕ್ಕೆ ವಲಸೆ ಹೋದರು ಎಂದು ತಿಳಿಯುತ್ತದೆ. ಇದೇ ಕಾಲದಲ್ಲಿ ಉಪ್ಪುಂದ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಮಾರ್ಗದಲ್ಲಿದ್ದ ಖಂಭದಕೋಣೆ, ಕೆರ್ಗಾಲು ಬಳಿಯ ಹಳಗೇರಿ ಸೇನಾ ಪಾಳೆಯ ಮತ್ತು ಹೊಸಕೋಟೆಗಳು ಶತ್ರುಗಳ ಹಿಂಸೆಗೆ ತುತ್ತಾಗಿ ಜರ್ಜರಿತವಾಯಿತು.   ಹಳಗೇರಿಯ ನದಿ ಮುಖಜ ಭೂಮಿಯಲ್ಲಿರುವ ಅತ್ಯಂತ ಪುರಾತನವಾದ ಶಿಲಾಮಯ ಕುಕ್ಕೇಶ್ವರ ದೇವಸ್ಥಾನದ ಇತಿಹಾಸದಲ್ಲಿ ಇದನ್ನು ಉಲ್ಲೇಖಿಸಿ, ಹಳಗೇರಿ ಸೇನಾ ಬೀಡು ಖಾಲಿಯಾದ ಪ್ರಸಂಗವನ್ನು ಪ್ರಸ್ತಾಪಿಸಲಾಗಿದೆ.
          ಕನ್ನಡ ಕರಾವಳಿಯ ಪ್ರದೇಶ ಪುಣ್ಯ ಕ್ಷೇತ್ರಗಳ ಬೀಡು, ವಿಜಯನಗರ ಸಾಮ್ರಾಜ್ಯದ ನಂತರ ಕೆಳದಿಯರಸರ ಆಳ್ವಿಕೆಯ ಕಾಲದಲ್ಲಿ ರಾಜಾಶ್ರಯದೊಡನೆ ಶಿಲ್ಪ ಕಲಾ ವೈಭವದಿಂದ ಮೆರೆದ ಹಲವು ದೇವಸ್ಥಾನಗಳು ಇಲ್ಲಿವೆ.
          ಶ್ರೀರಂಗ ಪಟ್ಟಣದ ಯುದ್ಧದ ನಂತರ ಕನ್ನಡ ಕರಾವಳಿ ಇಂಗ್ಲಿಷರ ಆಡಳಿತಕ್ಕೊಳಪ್ಪಟ್ಟಿತು. ಕೆನರಾ ಜಿಲ್ಲೆಯ ಪ್ರಥಮ ಕಲೆಕ್ಟರ್ ಲೋರ್ಡ್ ಮುನ್ರೋ ಕಾಲದಲ್ಲಿಯೆ ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸರ್ಕಾರ ಮನ್ನಣೆ ನೀಡಿ ವಾರ್ಷಿಕ ತಸ್ತೀಕು ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿಯುತ್ತದೆ.
          ಸೌಕೂರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇನ್ನೂರು ವರ್ಷಗಳಿಂದ ಕಲಾ ಸೇವೆ ಮಾಡುತ್ತ ದೇವಿಯ ನೆನಪನ್ನು ಸದಾ ಮಾಡುತ್ತಿದೆ.     ಮಹಾದೇವಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಅನಂತ ನಮನಗಳು. ಇವಳ ಮಹಿಮೆಯನ್ನೊಮ್ಮೆ ತಿಳಿಯಲು ಶ್ರೀ  ದೇವಿಯನ್ನು ಒಮ್ಮೆ ಕಣ್ತುಂಬ ನೋಡಿ ಕೃತಾರ್ಥಗಾಗಿ. ಭಗವತಿ ದುರ್ಗೆಯ ಪಾದಾರವಿಂದಗಳಿಗೆ ಎರಗಿ ಅಮ್ಮನ ಕೃಪಾರ್ಶೀವಾದವನ್ನು ಪಡೆಯಿರಿ.

ವಿಳಾಸ : - 
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ,
ಸೌಕೂರು, ಕುಂದಾಪುರ ತಾಲೂಕು.
ಉಡುಪಿ- ಜಿಲ್ಲೆ.

ದಾರಿಯ ವಿವರ : ಶ್ರೀ ದೇವಿಯ ದೇವಾಲಯವನ್ನು ಸಂದರ್ಶಿಸಲು ಕೊಲ್ಲೂರು ಮೂಕಾಂಬಿಕಾ ಅಮ್ಮನವರು ಮತ್ತು ಬ್ರಾಹ್ಮೀ ದುರ್ಗೆಯನ್ನು ನೋಡಿ ಅದೇ ಮಾರ್ಗವಾಗಿ ನೇರಳಕಟ್ಟೆಯಿಂದ ಶ್ರೀ ಸೌಕೂರು ದೇವಿಯ ಸಾನಿಧ್ಯವನ್ನು ಕಾಣಬಹುದು. ಕುಂದಾಪುರದಿಂದ ತಲ್ಲೂರು – ನೇರಳಕಟ್ಟೆ ಮಾರ್ಗದಲ್ಲಿ ಸಾಗಿದಾಗ ಗುಲ್ವಾಡಿ ಸಮೀಪದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭವ್ಯ ಗೋಪುರ ಗೋಚಾರವಾಗುತ್ತದೆ. ದೇವಿಯನ್ನೊಮ್ಮೆ ಕಣ್ಣಾರೆ ನೋಡಿ ನಿಮ್ಮ ಜೀವನ ಪಾವನವಾಗಿಸಿಕೊಳ್ಳಿ.



For More details : http://sowkoortemple.in/